Bengaluru Stampede; ಅರ್ಸಿಬಿ ಮತ್ತು ಕೆಎಸ್ಸಿಎ ಒಂದೊಂದು ಕೋಟಿ ರೂ. ನೀಡಿದರೂ ಕಡಿಮೆ: ಲಕ್ಷ್ಮಿ ಹೆಬ್ಬಾಳ್ಕರ್
ವಿರೋಧ ಪಕ್ಷದವರು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ, ತಮ್ಮ ಪಕ್ಷದ ನಾಯಕರು ಅವರಿಗೆ ತಕ್ಕ ಉತ್ತರ ನೀಡುತ್ತಿದ್ದಾರೆ, ಕಾಲ್ತುಳಿತದ ಘಟನೆ ಯಾಕೆ ನಡೆಯಿತು ಅನ್ನೋದನ್ನು ಯೋಚಿಸುವುದು ಈಗ ಬಹಳ ಮುಖ್ಯವಾಗಿದೆ, ಇಂಟೆಲ್ಲಿಜೆನ್ಸ್ ವೈಫಲ್ಯ ಅಂತ ಹೇಳಲಾಗುತ್ತಿದೆ, ಅದರೆ ಅದು ತನಿಖೆಯ ನಂತರವಷ್ಟೇ ಗೊತ್ತಾಗಬೇಕು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಬೆಳಗಾವಿ, ಜೂನ್ 6: ಬೆಂಗಳೂರಲ್ಲಿ ಬುಧವಾರ ನಡೆದ ಕಾಲ್ತುಳಿತದ ದುರ್ಘಟನೆಯಲ್ಲಿ ಸತ್ತವರ ಕುಟುಂಬಗಳಿಗೆ ಸರ್ಕಾರ ₹10 ಲಕ್ಷ ಪರಿಹಾರ ಕೊಟ್ಟಿದ್ದು ಕಡಿಮೆ, ಪರಿಹಾರ ಧನವನ್ನು ಹೆಚ್ಚಿಸಲು ತಾನು ಮುಖ್ಯಮಂತ್ರಿಯವರನ್ನು ಆಗ್ರಹಿಸುವುದಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಕೇವಲ ಸರ್ಕಾರ ಮಾತ್ರವಲ್ಲ, ಐಪಿಎಲ್ ತಂಡದ ಮಾಲೀಕರು ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕೂಡ ಮಡಿದವರ ಕುಟುಂಬಗಳಿಗೆ ಪರಿಹಾರ ನೀಡಬೇಕು, ಆ ಕುಟುಂಬಗಳಿಗೆ ಒಂದೊಂದು ಕೋಟಿ ರೂ. ನೀಡಿದರೂ ಹೋದ ಜೀವಗಳನ್ನು ವಾಪಸ್ಸು ತರೋದು ಸಾಧ್ಯವಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ: ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ ಕರ್ನಾಟಕ ಪೊಲೀಸರು ದಾಖಲಿಸಿದ ಎಫ್ಐಆರ್!
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ