Yoga for Depression: ಡಿಪ್ರೆಶನ್​ನಿಂದ ಹೊರಬರಲು ಈ ಮೂರು ಯೋಗಾಸನಗಳನ್ನು ಮಾಡಿ

ನಿಮ್ಮ ಭಾವನೆಗಳನ್ನು ನಿಯಂತ್ರಿಸುವ ಸಾಮರ್ಥ್ಯ ತುಂಬುವುದು ಹಾಗೂ ನಮ್ಮನ್ನು ಧನಾತ್ಮಕವಾಗಿ ಯೋಚಿಸುವಂತೆ ಮಾಡುವುದು. ಇತ್ತೀಚಿನ ದಿನಗಳಲ್ಲಿ ಖಿನ್ನತೆ ಸಮಸ್ಯೆ ದೊಡ್ಡವರಲ್ಲಿ ಮಾತ್ರವಲ್ಲ ಮಕ್ಕಳಲ್ಲಿಯೂ ಕಂಡು ಬರುತ್ತಿದೆ, ಯೋಗ ನಿಮ್ಮ ಮನಸ್ಸನ್ನು ಶಾಂತಗೊಳಿಸುವಲ್ಲಿ ಸಹಾಯ ಮಾಡುತ್ತದೆ.

Yoga for Depression: ಡಿಪ್ರೆಶನ್​ನಿಂದ ಹೊರಬರಲು ಈ ಮೂರು ಯೋಗಾಸನಗಳನ್ನು ಮಾಡಿ
ಯೋಗಾಸನImage Credit source: Getty Images
Follow us
ನಯನಾ ಎಸ್​ಪಿ
|

Updated on: Mar 01, 2023 | 11:01 AM

ಖಿನ್ನತೆ ಸೇರಿದಂತೆ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಿಡಕೊಳ್ಳಲು ಯೋಗವು ಒಂದು ಪ್ರಬಲ ಸಾಧನವಾಗಿದೆ. ಇತ್ತೀಚಿನ ಅಧ್ಯಯನಗಳು ಯೋಗವು ಒತ್ತಡದ ಪರಿಣಾಮವನ್ನು ಕಡಿಮೆ ಮಾಡುತ್ತದೆ, ಆತಂಕ ಮತ್ತು ಖಿನ್ನತೆಗೆ ಸಹಾಯ ಮಾಡುತ್ತದೆ ಎಂದು ತಿಳಿಸಿದೆ. ಧ್ಯಾನ, ವಿಶ್ರಾಂತಿ ಮತ್ತು ವ್ಯಾಯಾಮದಂತೆಯೇ ಯೋಗ ಕೂಡ ನಿಮ್ಮ ಮನಸ್ಸಿನ ಶಾಂತಿಯನ್ನು ಕಾಪಾಡಲು ಸಹಾಯ ಮಾಡುತ್ತದೆ. ಯೋಗದ ಕೆಲವೊಂದು ಆಸನಗಳು ನಿಮ್ಮ ಭಾವನೆಗಳನ್ನು ನಿಯಂತ್ರಿಸುವ ಸಾಮರ್ಥ್ಯ ತುಂಬುವುದು ಹಾಗೂ ನಮ್ಮನ್ನು ಧನಾತ್ಮಕವಾಗಿ ಯೋಚಿಸುವಂತೆ ಮಾಡುವುದು. ಇತ್ತೀಚಿನ ದಿನಗಳಲ್ಲಿ ಖಿನ್ನತೆ ಸಮಸ್ಯೆ ದೊಡ್ಡವರಲ್ಲಿ ಮಾತ್ರವಲ್ಲ ಮಕ್ಕಳಲ್ಲಿಯೂ ಕಂಡು ಬರುತ್ತಿದೆ, ಯೋಗ ನಿಮ್ಮ ಮನಸ್ಸನ್ನು ಶಾಂತಗೊಳಿಸುವಲ್ಲಿ ಸಹಾಯ ಮಾಡುತ್ತದೆ.

ಸೇತು ಬಂಧಾಸನ

ಸೇತು ಬಂಧವು ಸಂಸ್ಕೃತ “ಸೇತು” ಎಂಬ ಪದದಿಂದ ತೆಗೆದುಕೊಳ್ಳಲಾಗಿದೆ, ಇದರರ್ಥ ಸೇತುವೆ, ಮತ್ತು “ಬಂಧ” ಅಂದರೆ ಲಾಕ್ ಅಥವಾ ಬಂಧನ ಎಂದರ್ಥ. ಈ ಆಸನ ಬೆನ್ನಿನ ಸ್ನಾಯುಗಳನ್ನು ಬಲಪಡಿಸುತ್ತದೆ, ಬೆನ್ನಿನ ಒತ್ತಡವನ್ನು ನಿವಾರಿಸುತ್ತದೆ, ಎದೆ, ಕುತ್ತಿಗೆ ಮತ್ತು ಬೆನ್ನುಮೂಳೆಯನ್ನು ಹಿಗ್ಗಿಸುತ್ತದೆ ಮತ್ತು ಮೆದುಳನ್ನು ಶಾಂತಗೊಳಿಸುತ್ತದೆ. ನಿಮಗೆ ಕುತ್ತಿಗೆ ನೋವು ಅಥವಾ ಬೆನ್ನಿನ ಸಮಸ್ಯೆಗಳಿದ್ದರೆ ಈ ಆಸನವನ್ನು ಪ್ರೊಫೆಷನಲ್ ಯೋಗ ಗುರುಗಳಿಲ್ಲದೆ ಮಾಡಬೇಡಿ. ಗರ್ಭಿಣಿಯರು ತಮ್ಮ ಮೂರನೇ ತ್ರೈಮಾಸಿಕದಲ್ಲಿರುವವರು ವೈದ್ಯರ ಅನುಮತಿ ಪಡೆದು ನಂತರ ಮಾತ್ರ ಈ ಆಸನವನ್ನು ಮಾಡಬೇಕು.

ಹಂತಗಳು:

  • ನಿಮ್ಮ ಬೆನ್ನ ಮೇಲೆ ಮಲಗಿ
  • ನಿಮ್ಮ ಮೊಣಕಾಲುಗಳನ್ನು ಬಗ್ಗಿಸಿ ಮತ್ತು ನಿಮ್ಮ ಪಾದಗಳನ್ನು ಸೊಂಟದ ಬಳಿ ಇರಿಸಿ
  • ನಿಮ್ಮ ತೋಳುಗಳನ್ನು ನಿಮ್ಮ ದೇಹದ ಪಕ್ಕದಲ್ಲಿ ಇರಿಸಿ, ಮತ್ತು ನಿಮ್ಮ ಅಂಗೈಗಳನ್ನು ಮುಂದೆ ಮಾಡಿ, ಉಸಿರಾಡುತ್ತ ಕ್ರಮೇಣ ನಿಮ್ಮ ಕೆಳಗಿನ, ಮಧ್ಯಮ ಮತ್ತು ಮೇಲಿನ ಬೆನ್ನನ್ನು ನೆಲದಿಂದ ಮೇಲಕ್ಕೆತ್ತಿ.
  • ಈಗ, ಈ ಭಂಗಿಯನ್ನು ಸುಮಾರು ಒಂದು ನಿಮಿಷ ಹಿಡಿದುಕೊಳ್ಳಿ ಮತ್ತು ನೀವು ಭಂಗಿಯನ್ನು ಬಿಡುಗಡೆ ಮಾಡುವಾಗ ಉಸಿರನ್ನು ಬಿಡಿ

ಬಾಲಾಸನ

ಬಾಲಾಸನದಲ್ಲಿ, ದೇಹವು ಗರ್ಭದಲ್ಲಿರುವ ಭ್ರೂಣದ ರೀತಿ ಕಾಣುತ್ತದೆ. ಇದನ್ನು ವಿಶ್ರಾಂತಿಯ ಭಂಗಿ ಎಂದು ಕರೆಯಲಾಗುತ್ತದೆ ಮತ್ತು ಬೆನ್ನು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಎದೆ, ಸೊಂಟ ಮತ್ತು ಭುಜಗಳ ಒತ್ತಡವನ್ನು ಬಿಡುಗಡೆ ಮಾಡುವ ಮೂಲಕ ಒತ್ತಡ ಮತ್ತು ಆತಂಕವನ್ನು ತೆಗೆದುಹಾಕುವಲ್ಲಿ ಇದು ಸಹಾಯ ಮಾಡುತ್ತದೆ. ಇದು ನಿಮಗೆ ಉತ್ತಮವಾಗಿ ಉಸಿರಾಡಲು ಸಹಾಯ ಮಾಡುತ್ತದೆ ಮತ್ತು ದೇಹ ಮತ್ತು ಮನಸ್ಸನ್ನು ಶಾಂತಗೊಳಿಸುತ್ತದೆ

ಹಂತಗಳು:

  • ಮಂಡಿಯ ಮೇಲೆ ಕುಳಿತುಕೊಳ್ಳಿ
  • ನಿಮ್ಮ ಮೊಣಕಾಲುಗಳು ಮತ್ತು ಪಾದಗಳನ್ನು ನೆಲದ ಮೇಲೆ ಇಡಿ
  • ನಿಮ್ಮ ಹಣೆಯು ನೆಲಕ್ಕೆ ತಾಗುವಂತೆ ನಿಧಾನವಾಗಿ ಮುಂದಕ್ಕೆ ಬಾಗಿ.
  • ಉಸಿರನ್ನು ಬಿಡುತ್ತಾ ನಿಮ್ಮ ಎರಡೂ ಕೈಗಳನ್ನು ಬದಿಯಲ್ಲಿ ಇರಿಸಿ, ನಿಮ್ಮ ಅಂಗೈಗಳು ನೆಲಕ್ಕೆ ತಾಗುವಂತೆ ಮಾಡಿ
  • ನಿಮ್ಮ ಎದೆಯನ್ನು ನಿಧಾನವಾಗಿ ಒಳಗೆ ತನ್ನಿ
  • ಈ ಭಂಗಿಯಲ್ಲಿ 45 ಸೆಕೆಂಡ್ ನಿಂದ ಒಂದು ನಿಮಿಷ ಇರಿ ಮತ್ತು ಉಸಿರಾಟವನ್ನು ಮುಂದುವರಿಸಿ

ಅಧೋ ಮುಖ ಶ್ವಾನಾಸನ

ನಾಯಿಯು ತನ್ನ ದೇಹವನ್ನು ಕೆಳಗಿಳಿಸುವುದನ್ನು ಹೋಲುವ ಕಾರಣದಿಂದ ಕೆಳಮುಖ ನಾಯಿ ಭಂಗಿ ಅಥವಾ ಅಧೋ ಮುಖ ಶ್ವಾನಾಸನ ಎಂದು ಕರೆಯುತ್ತಾರೆ. ಸೂರ್ಯ ನಮಸ್ಕಾರ ಮಾಡುವಾಗ ಈ ಆಸನವನ್ನು ಅಭ್ಯಾಸ ಮಾಡಲಾಗುತ್ತದೆ. ಇದು ಭುಜ ಮತ್ತು ಬೆನ್ನುಮೂಳೆಯ ನಡುವೆ ರಕ್ತ ಪರಿಚಲನೆ ಸುಧಾರಿಸುತ್ತದೆ. ಉಸಿರಾಟವನ್ನು ಸುಧಾರಿಸುತ್ತದೆ ಏಕೆಂದರೆ ಇದು ಶ್ವಾಸಕೋಶವನ್ನು ಬಲಪಡಿಸುತ್ತದೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ದೇಹವನ್ನು ಶಕ್ತಿಯುತಗೊಳಿಸುತ್ತದೆ ಮತ್ತು ವಿಶ್ರಾಂತಿ ನೀಡುತ್ತದೆ. ಮನಸ್ಸನ್ನು ಶಾಂತಗೊಳಿಸುವ ಮೂಲಕ ಆಯಾಸವನ್ನು ತೆಗೆದುಹಾಕುತ್ತದೆ.

ಕಾರ್ಪಲ್ ಟನಲ್ ಸಿಂಡ್ರೋಮ್ ಹೊಂದಿರುವ ಜನರು, ಅತಿಸಾರ, ತಮ್ಮ ಅಂತಿಮ ತ್ರೈಮಾಸಿಕದಲ್ಲಿ ಗರ್ಭಿಣಿಯರು, ತೋಳುಗಳು, ಸೊಂಟ, ಭುಜಗಳು ಅಥವಾ ಬೆನ್ನಿನ ಮೇಲೆ ಗಾಯವಿರುವವರು, ಅಧಿಕ ರಕ್ತದೊತ್ತಡ, ತಲೆನೋವು, ಬೇರ್ಪಟ್ಟ ರೆಟಿನಾ ಅಥವಾ ದುರ್ಬಲ ಕಣ್ಣಿನ ಕ್ಯಾಪಿಲ್ಲರಿಗಳು ಇರುವವರು ಈ ಆಸನವನ್ನು ಮಾಡಬಾರದು.

ಹಂತಗಳು:

  • ನಿಮ್ಮ ಪಾದಗಳನ್ನು ಒಟ್ಟಿಗೆ ಸೇರಿಸಿ ನೇರವಾಗಿ ನಿಂತುಕೊಳ್ಳಿ
  • ನೆಲದ ಮೇಲೆ ಮಂಡಿಯೂರಿ ಮತ್ತು ನಿಮ್ಮ ಕೈಗಳನ್ನು ನೆಲದ ಮೇಲೆ ಇರಿಸಿ
  • ತೊಡೆ ಮತ್ತು ತೋಳುಗಳನ್ನು ನೆಲಕ್ಕೆ ಇರಿಸಿ
  • ನಿಮ್ಮ ಕಾಲುಗಳ ಹಿಂಭಾಗದ ಸ್ನಾಯುಗಳಲ್ಲಿ ನೀವು ಹಿಗ್ಗಿಸುವಿಕೆಯನ್ನು ಅನುಭವಿಸುವಿರಿ
  • ಆಳವಾದ ಉಸಿರನ್ನು ತೆಗೆದುಕೊಳ್ಳಿ
  • ಒಂದು ಅಥವಾ ಎರಡು ನಿಮಿಷಗಳ ಕಾಲ ಈ ಬಂಗಿಯಲ್ಲಿರಿ, ತದನಂತರ ಮೇಲಕ್ಕೆ ಬನ್ನಿ

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ