ಟಿಶ್ಯೂ ಪೇಪರ್‌ಗಳು ಬಿಳಿ ಬಣ್ಣದಲ್ಲಿ ಮಾತ್ರ ಲಭ್ಯವಿರಲು ಇದುವೇ ಕಾರಣವಂತೆ

ದಿನನಿತ್ಯ ನಾವು ಟಿಶ್ಯೂ ಪೇಪರ್‌ಗಳನ್ನು ಬಳಸುತ್ತಿರುತ್ತೇವೆ. ಕೈ ಒರೆಸಲು, ಮುಖದಿಂದ ಮೇಪಕ್‌ ತೆಗೆಯಲು ಧೂಳು, ಕೊಳೆಗಳನ್ನು ಒರೆಸಲು ನ್ಯಾಪ್ಕಿನ್‌ ರೀತಿಯಲ್ಲೂ ಬಳಸುತ್ತೇವೆ. ಎಲ್ಲಾ ಟಿಶ್ಯೂ ಪೇಪರ್‌ಗಳು ಸಹ ಬಿಳಿ ಬಣ್ಣದಲ್ಲಿಯೇ ಇರುತ್ತವೆ. ಬೇರೆ ಬಣ್ಣಗಳಲ್ಲಿ ಏಕೆ ಟಿಶ್ಯೂ ಪೇಪರ್‌ಗಳನ್ನು ತಯಾರಿಸುವುದಿಲ್ಲ, ಅವು ಬರೀ ಬಿಳಿ ಬಣ್ಣದಲ್ಲಿಯೇ ಏಕಿರುತ್ತವೆ ಎಂಬುದನ್ನು ಎಂದಾದರೂ ಯೋಚಿಸಿದ್ದೀರಾ? ಇದಕ್ಕೂ ಹಲವು ಕಾರಣಗಳಿವೆಯಂತೆ, ಅವು ಯಾವುವು ಎಂಬುದನ್ನು ನೋಡೋಣ ಬನ್ನಿ.

ಟಿಶ್ಯೂ ಪೇಪರ್‌ಗಳು ಬಿಳಿ ಬಣ್ಣದಲ್ಲಿ ಮಾತ್ರ ಲಭ್ಯವಿರಲು ಇದುವೇ ಕಾರಣವಂತೆ
ಟಿಶ್ಯೂ ಪೇಪರ್‌
Image Credit source: vecteezy

Updated on: Jul 12, 2026 | 7:06 PM

ದಿನನಿತ್ಯವೂ ಟಿಶ್ಯೂ (tissue paper) ಪೇಪರ್‌ಗಳನ್ನು ಬಳಕೆ ಮಾಡುತ್ತೇವೆ. ಹೌದು ಹಗುರ ಮತ್ತು ಮೃದುವಾಗಿರುವ ಈ ಕಾಗದವನ್ನು ಮುಖದ ಬೆವರು ಒರೆಸಲು, ಮೇಕಪ್‌ ತೆಗೆಯಲು, ಒದ್ದೆ ಕೈಯನ್ನು ಒರೆಸಲು, ಕನ್ನಡಿ ಸೇರಿದಂತೆ ಗಾಜಿನ ವಸ್ತುಗಳ ಮೇಲಿನ ಕಲೆ, ಧೂಳುಗಳನ್ನು ತೆಗೆದು ಹಾಕಲು ಬಳಸುತ್ತೇವೆ. ಹೀಗೆ ಹೋಟೆಲ್‌ ರೆಸ್ಟೋರೆಂಟ್‌ನಿಂದ ಹಿಡಿದು ಮನೆ, ಕಚೇರಿಗಳಲ್ಲೂ ವ್ಯಾಪಕವಾಗಿ ಟಿಶ್ಯೂ ಪೇಪರ್‌ಗಳನ್ನು ಬಳಸಲಾಗುತ್ತಿದ್ದು, ಇದು ನಮ್ಮ ಜೀವನ ಇದು ನಮ್ಮ ಜೀವನದ ಭಾಗವಾಗಿ ಹೋಗಿದೆ ಅಂತಾನೇ ಹೇಳಬಹುದು.  ನಾವು ಬಳಸುವ ಎಲ್ಲಾ ಟಿಶ್ಯೂ ಪೇಪರ್‌ಗಳು ಕೂಡ ಬಿಳಿ ಬಣ್ಣದಲ್ಲಿಯೇ ಇರುತ್ತವೆ. ಇದು ಬೇರೆ ಬಣ್ಣಗಳಲ್ಲಿ ಏಕಿಲ್ಲ, ಬಿಳಿ ಬಣ್ಣದಲ್ಲಿ ಮಾತ್ರ ಏಕೆ ತಯಾರಿಸಲಾಗುತ್ತದೆ ಎಂಬ ಯೋಚನೆ ನಿಮಗೂ ಬಂದಿದ್ಯಾ? ಹೀಗೆ ಟಿಶ್ಯೂ ಪೇಪರ್‌ ಬಿಳಿ ಬಣ್ಣದಲ್ಲಿಯೇ ಇರಲು ಹಲವು ಕಾರಣಗಳಿವೆಯಂತೆ, ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಟಿಶ್ಯೂ ಪೇಪರ್‌ ಬಳಿ ಬಣ್ಣದಲ್ಲಿಯೇ ಏಕಿರುತ್ತವೆ?

ಮುಖ್ಯವಾಗಿ ಹೇಳುವುದಾದರೆ ಟಿಶ್ಯೂ ಪೇಪರ್‌ಗಳನ್ನು ಮರದ ತಿರುಳುಗಳಿಂದ ತಯಾರಿಸಲಾಗುತ್ತದೆ. ಮರದ ಮೂಲ ಬಣ್ಣ ಕಂದು ಬಣ್ಣವಾಗಿದ್ದು, ಟಿಶ್ಯೂ ಪೇಪರ್‌ ತಯಾರಿಕೆಯ ಪ್ರಕ್ರಿಯೆಯಲ್ಲಿ, ತಿರುಳನ್ನು ಬ್ಲೀಚ್‌ ಮಾಡಿ ಲಿಗ್ನಿನ್‌ ಅಂಶವನ್ನು ತೆಗೆದುಹಾಕಿ ಕಾಗದವನ್ನು ಮೃದುಗೊಳಿಸಲಾಗುತ್ತದೆ. ಈ ಬ್ಲೀಚಿಂಗ್‌ ಪ್ರಕ್ರಿಯೆಯು ಮರದ ತಿರುಳನ್ನು ಬಿಳಿ ಬಣ್ಣಕ್ಕೆ ತಿರುಗಿಸುತ್ತವೆ. ಇದಕ್ಕೆ ಯಾವುದೇ ಹೆಚ್ಚಿನ ರಾಸಾಯನಿಕಗಳು ಮತ್ತು ಬಣ್ಣಗಳನ್ನು ಸೇರಿಸದಿರುವ ಕಾರಣ ಟಿಶ್ಯೂ ಯಾವಾಗಲೂ ಬೀಳಿ ಬಣ್ಣದಲ್ಲಿಯೇ ಇರುತ್ತವೆ.

ಅಲರ್ಜಿಯ ಅಪಾಯ ಕಡಿಮೆ: ಬಣ್ಣ ಬಣ್ಣಗಳ ಟಿಶ್ಯೂ ಪೇಪರ್‌ ತಯಾರಿಸಲು ವಿವಿಧ ಕೃತಕ ಬಣ್ಣಗಳು ಮತ್ತು ರಾಸಾಯನಿಕಗಳನ್ನು ಬಣ್ಣಗಳನ್ನು ಬಳಸಬೇಕಾಗುತ್ತದೆ. ಈ ರಾಸಾಯನಿಕಗಳು ಸೂಕ್ಷ್ಮ ಚರ್ಮದ ಮೇಲೆ ತಾಕಿದಾಗ ಅಲರ್ಜಿ, ತುರಿಕೆ, ಚರ್ಮದ ಕಿರಿಕಿರಿಯನ್ನು ಉಂಟು ಮಾಡುತ್ತವೆ. ಈ ರೀತಿಯ ಸಮಸ್ಯೆಗಳು ಬಾರದಂತೆ ನೋಡಿಕೊಳ್ಳಲು ಯಾವುದೇ ಹೆಚ್ಚುವರಿ ರಾಸಾಯನಿಕಗಳಿಲ್ಲದೆ ಬಿಳಿ ಬಣ್ಣದಲ್ಲಿಯೇ ಟಿಶ್ಯೂ ಪೇಪರ್‌ಗಳನ್ನು ತಯಾರಿಸಲಾಗುತ್ತದೆ.

ವಿಲೇವಾರಿ ಸುಲಭ: ಬಿಳಿ ಟಿಶ್ಯೂ ಪೇಪರ್‌ ಯಾವುದೇ ಕೃತಕ ಬಣ್ಣಗಳು ಅಥವಾ ರಾಸಾಯನಿಕಗಳನ್ನು ಹೊಂದಿರುವುದಿಲ್ಲ. ಇವುಗಳು ನೀರಿನ ಸಂಪರ್ಕಕ್ಕೆ ಬಂದರೆ  ಬೇಗನೆ ಕರಗಿ ಹೋಗುತ್ತವೆ. ಹಾಗಾಗಿ ಈ ಸುಲಭ ವಿಲೇವಾರಿಯ ಕಾರಣಕ್ಕೂ ಯಾವುದೇ ರಾಸಾಯನಿಕಗಳನ್ನು ಬಳಸದೆ ಟಿಶ್ಯೂ ಪೇಪರ್‌ಗಳನ್ನು ಬಿಳಿ ಬಣ್ಣದಲ್ಲಿಯೇ ತಯಾರಿಸಲಾಗುತ್ತದೆ.

ಪರಿಸರ ಸ್ನೇಹಿ: ಕೃತಕ ಬಣ್ಣಗಳು ಮತ್ತು ಭಾರವಾದ ರಾಸಾಯನಿಕಗಳಿರುವ ಟಿಶ್ಯೂ ಪೇಪರ್‌ಗಳು ಮಣ್ಣಿನಲ್ಲಿ ಸೇರಿದರೆ ಇದರಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತದೆ ಜೊತೆಗೆ ಮಣ್ಣು ಮಾಲಿನ್ಯವಾಗುತ್ತದೆ. ಹಾಗಾಗಿ ಮಣ್ಣು ಮತ್ತು ನೀರಿಗೆ ಯಾವುದೇ ರೀತಿಯ ಹಾನಿಯಾಗದಂತೆ ನೋಡಿಕೊಳ್ಳಲು ನಾವು ನಿತ್ಯ ಬಳಸುವ ಟಿಶ್ಯೂ ಪೇಪರ್‌ಗಳನ್ನು ಹೆಚ್ಚು ರಾಸಾಯನಿಕಗಳನ್ನು ಹಾಕದೆ  ಬಿಳಿ ಬಣ್ಣದಲ್ಲಿಯೇ ತಯಾರಿಸಲಾಗುತ್ತದೆ.

ಇದನ್ನೂ ಓದಿ: ಗೋಮೂತ್ರದಿಂದ ತಲೆ, ಮುಖವನ್ನು ತೊಳೆಯುವ ವಿಶಿಷ್ಟ ಬುಡಕಟ್ಟು ಜನಾಂಗವಿದು

ಬಿಳಿ ಟಿಶ್ಯೂ ತುಂಬಾನೇ ಅಗ್ಗ: ಟಿಶ್ಯೂ ಪೇಪರ್‌ಗಳನ್ನು ಬೃಹತ್‌ ಪ್ರಮಾಣದಲ್ಲಿ ತಯಾರಿಸಲಾಗುತ್ತದೆ. ಹೀಗಿರುವಾಗ ಇದಕ್ಕೆ ಕೃತಕ ಬಣ್ಣ ಸೇರಿಸಿದರೆ ಇದರ ಉತ್ಪಾದನಾ ವೆಚ್ಚವೂ ಹೆಚ್ಚಾಗುತ್ತದೆ, ಉತ್ಪನ್ನದ ವೆಚ್ಚವೂ ಹೆಚ್ಚಾಗುತ್ತದೆ. ಆದರೆ ಬಿಳಿ ಬಣ್ಣದ ಟಿಶ್ಯೂ ತಯಾರಿಸುವುದು ಅಷ್ಟು ದುಬಾರಿಯಲ್ಲ. ಹಾಗಾಗಿ ಟಿಶ್ಯೂಗಳನ್ನು ಬಿಳಿ ಬಣ್ಣದಲ್ಲಿಯೇ ತಯಾರಿಸಲಾಗುವುದು.

ಸ್ವಚ್ಛತೆಯ ಭಾವನೆಯನ್ನು ಸೃಷ್ಟಿಸುತ್ತದೆ: ಬಿಳಿ ಬಣ್ಣವು ಸಾಮಾನ್ಯವಾಗಿ ಶುದ್ಧತೆ ಮತ್ತು ಶುಚಿತ್ವದೊಂದಿಗೆ ಸಂಬಂಧ ಹೊಂದಿದೆ. ಮುಖ, ಕೈಗಳು ಅಥವಾ ಆಹಾರ ಮತ್ತು ಪಾನೀಯಗಳನ್ನು ಸ್ವಚ್ಛಗೊಳಿಸಲು ಟಿಶ್ಯೂ ಪೇಪರ್ ಅನ್ನು ಹೆಚ್ಚಾಗಿ ಬಳಸಲಾಗುತ್ತದೆ, ಆದ್ದರಿಂದ ಬಿಳಿ ಬಣ್ಣವು ಜನರಲ್ಲಿ ಸ್ವಚ್ಛತೆ ಮತ್ತು ಸುರಕ್ಷತೆಯ ಭಾವನೆಯನ್ನು ಸೃಷ್ಟಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us