
ಇತ್ತೀಚೆಗೆ ಮಲಬದ್ಧತೆ (Constipation) ಹೆಚ್ಚಿನ ಜನರಲ್ಲಿ ಕಾಡುವ ಬಹುದೊಡ್ಡ ಸಮಸ್ಯೆಯಾಗಿದೆ. ಇದು ವಾತಾವರಣ ಹಾಗೂ ಆಹಾರ ಪದ್ಧತಿಯಿಂದ ಹೆಚ್ಚಾಗಿ ಕಾಣುತ್ತದೆ. ಒತ್ತಡದ ಜೀವನ ಮತ್ತು ಜಂಕ್ ಫುಡ್ ತಿನ್ನುವ ಅಭ್ಯಾಸದಿಂದಾಗಿ ಹೊಟ್ಟೆ ಸಂಬಂಧಿತ ಸಮಸ್ಯೆಗಳು ಸಾಮಾನ್ಯವಾಗಿ ಕಾಡುತ್ತದೆ. ಇದನ್ನು ಪರಿಹಾರ ಮಾಡಲು ಬೇರೆ ಬೇರೆ ಔಷಧಿಗಳನ್ನು ಹಾಗೂ ವೈದ್ಯರ ಸಲಹೆಗಳನ್ನು ಪಡೆಯುತ್ತೇವೆ. ಇನ್ನು ಕೆಲವರು ಇದರಿಂದಲೇ ಹೆಚ್ಚು ತಲೆಬಿಸಿ ಮಾಡಿಕೊಳ್ಳುತ್ತಾರೆ. ಆದರೆ ಈ ಸಮಸ್ಯೆಗೆ ಪರಿಹಾರವನ್ನು ಒಂದು ನಿಮಿಷದಲ್ಲೇ ಮನೆಯಲ್ಲೇ ಕಂಡುಕೊಳ್ಳಬಹುದು. ಈ ಎರಡು ಮನೆಮದ್ದಿನಿಂದ ಈ ಸಮಸ್ಯೆಗೆ ಪರಿಹಾರ ಸಾಧ್ಯ. ಅಡುಗೆಮನೆಯಲ್ಲಿಯೇ ಎರಡು ಸುಲಭವಾದ ಮನೆಮದ್ದುಗಳಿವೆ. ಅದುವೇ ಜೀರಿಗೆ ನೀರು ಮತ್ತು ಸೋಂಪು ನೀರು. ಈ ಕುರಿತಾದ ಮಾಹಿತಿ ಇಲ್ಲಿದೆ.
ಜೀರಿಗೆ ಹೊಟ್ಟೆಗೆ ಒಂದು ವರದಾನ, ಇದರ ನೀರನ್ನು ಕುಡಿಯುವುದರಿಂದ ಹೊಟ್ಟೆಯ ಅನಿಲ, ಎದೆಯುರಿ ಮತ್ತು ಮಲಬದ್ಧತೆ ಮುಂತಾದ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ.
ಹೊಟ್ಟೆ ಉಬ್ಬರ ಮತ್ತು ಗ್ಯಾಸ್ ನಿವಾರಣೆ: ಜೀರಿಗೆ ಹೊಟ್ಟೆಯ ಅನಿಲವನ್ನು ಹೊರಹಾಕಲು ಸಹಾಯ ಮಾಡುತ್ತದೆ, ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡುತ್ತದೆ.
ಆಮ್ಲೀಯತೆ ನಿವಾರಣೆ: ಜೀರಿಗೆ ನೈಸರ್ಗಿಕ ಆಮ್ಲ ವಿರೋಧಿಯಾಗಿ ಕಾರ್ಯನಿರ್ವಹಿಸುತ್ತದೆ, ಇದು ಹೊಟ್ಟೆಯ ಕಿರಿಕಿರಿಯನ್ನು ಶಮನಗೊಳಿಸುತ್ತದೆ.
ಮಲಬದ್ಧತೆ ನಿವಾರಣೆಗೆ ಸಹಾಯ ಮಾಡುತ್ತದೆ: ಇದು ಫೈಬರ್‌ನ್ನು ಹೊಂದಿದ್ದು, ಇದು ಕರುಳಿನ ಚಲನೆಯನ್ನು ಸುಲಭಗೊಳಿಸುತ್ತದೆ ಹಾಗೂ ಹೊಟ್ಟೆಯನ್ನು ಸ್ವಚ್ಛವಾಗಿರಿಸುತ್ತದೆ.
ಚಯಾಪಚಯವನ್ನು ಹೆಚ್ಚಿಸುತ್ತದೆ: ಜೀರಿಗೆ ನೀರು ಚಯಾಪಚಯವನ್ನು ವೇಗಗೊಳಿಸುತ್ತದೆ, ಇದು ಆಹಾರವನ್ನು ತ್ವರಿತವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.
ಒಂದು ಲೋಟ ನೀರಿಗೆ 1 ಟೀ ಚಮಚ ಜೀರಿಗೆ ಹಾಕಿ ಕುದಿಸಿ. ಅರ್ಧ ನೀರು ಉಳಿದಾಗ ಅದನ್ನು ಶೋಧಿಸಿ ಬೆಚ್ಚಗಿರುವಾಗಲೇ ಕುಡಿಯಿರಿ. ಸಾಧ್ಯವಾದರೆ ಜೀರಿಗೆಯನ್ನು ರಾತ್ರಿಯಿಡೀ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅದರ ನೀರನ್ನು ಕುಡಿಯಬಹುದು.
ಹೆಚ್ಚಾಗಿ ಬಾಯಿಯನ್ನು ಫ್ರೆಶ್ನರ್ ಆಗಿ ತಿನ್ನುವ ಫೆನ್ನೆಲ್ ಬೀಜಗಳು ಜೀರ್ಣಕ್ರಿಯೆಗೆ ತುಂಬಾ ಪ್ರಯೋಜನಕಾರಿ. ಇದರ ಪರಿಣಾಮ ಶೀತಲವಾಗಿರುತ್ತದೆ. ಆದ್ದರಿಂದ ಇದು ಹೊಟ್ಟೆಯ ಕಿರಿಕಿರಿಗೆ ತುಂಬಾ ಉಪಯುಕ್ತವಾಗಿದೆ.
ಆಮ್ಲೀಯತೆ ಮತ್ತು ಎದೆಯುರಿಯನ್ನು ನಿವಾರಿಸುತ್ತದೆ: ಸೋಂಪು ನೀರು ಹೊಟ್ಟೆಯ ಶಾಖ ಮತ್ತು ಎದೆಯುರಿಯನ್ನು ಶಮನಗೊಳಿಸುತ್ತದೆ.
ಅಜೀರ್ಣವನ್ನು ನಿವಾರಿಸುತ್ತದೆ: ಇದು ಜೀರ್ಣಕಾರಿ ಕಿಣ್ವಗಳನ್ನು ಸಕ್ರಿಯಗೊಳಿಸುವ ಅಂಶಗಳನ್ನು ಒಳಗೊಂಡಿದೆ.
ಹೊಟ್ಟೆಯ ಸೆಳೆತವನ್ನು ನಿವಾರಿಸುತ್ತದೆ: ಸೋಂಪು ನೀರಿನ ವಿಶೇಷವೆಂದರೆ ಅದು ಹೊಟ್ಟೆಯ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ.
ಮಲಬದ್ಧತೆಗೆ ಸಹಾಯ ಮಾಡುತ್ತದೆ: ಇದು ಫೈಬರ್ ಅನ್ನು ಸಹ ಹೊಂದಿರುತ್ತದೆ, ಇದು ಹೊಟ್ಟೆಯನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ.
1 ಟೀ ಚಮಚ ಸೋಂಪು ಸೊಪ್ಪನ್ನು ಒಂದು ಲೋಟ ನೀರಿನಲ್ಲಿ 5-10 ನಿಮಿಷಗಳ ಕಾಲ ಕುದಿಸಿ, ಸೋಸಿ, ಬೆಚ್ಚಗೆ ಕುಡಿಯಿರಿ. ಅಥವಾ ಸೋಂಪು ಸೊಪ್ಪನ್ನು ರಾತ್ರಿಯಿಡೀ ನೆನೆಸಿ ಬೆಳಿಗ್ಗೆ ಆ ನೀರನ್ನು ಕುಡಿಯಿರಿ.
ಇದನ್ನೂ ಓದಿ: ಆತಂಕ, ಒತ್ತಡಕ್ಕೆ ಈ ಎಲೆ ಪರಿಹಾರ
ಗ್ಯಾಸ್, ಹೊಟ್ಟೆ ಉಬ್ಬುವುದು ಅಥವಾ ಭಾರದ ಸಮಸ್ಯೆಗಳಿದ್ದರೆ ಜೀರಿಗೆ ನೀರು ಹೆಚ್ಚು ಪ್ರಯೋಜನಕಾರಿ.
ಆಮ್ಲೀಯತೆ, ಎದೆಯುರಿ ಅಥವಾ ಹೊಟ್ಟೆಯ ಶಾಖವಾಗಿದ್ದರೆ ಸೋಂಪು ನೀರು ಉತ್ತಮ.
.
ಈ ಮೂರು ಸಮಸ್ಯೆಗಳೂ (ಅನಿಲ, ಆಮ್ಲೀಯತೆ ಮತ್ತು ಮಲಬದ್ಧತೆ) ಇದ್ದರೆ ಮೂರನೇ ಪರಿಹಾರ ಇಲ್ಲಿದೆ ನೋಡಿ ಈ ಮೂರನ್ನೂ ಸಮಾನ ಪ್ರಮಾಣದಲ್ಲಿ ಬೆರೆಸಿ ಪುಡಿ ಮಾಡಿ ಪ್ರತಿದಿನ ಬೆಳಿಗ್ಗೆ ಅಥವಾ ರಾತ್ರಿ ಊಟದ ನಂತರ ಉಗುರು ಬೆಚ್ಚಗಿನ ನೀರಿನೊಂದಿಗೆ ಸೇವಿಸಿ. ಇದು ಹೊಟ್ಟೆಯ ಎಲ್ಲಾ ಸಮಸ್ಯೆಗಳಿಗೆ ತುಂಬಾ ಪರಿಣಾಮಕಾರಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ