AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಖದ ಮೇಲಿನ ಮೊಡವೆ ಸಮಸ್ಯೆಯನ್ನು ಹೋಗಲಾಡಿಸಲು ನಮ್ಮ ಎಂಜಲೇ ಮದ್ದಂತೆ

ಮೊಡವೆಗಳು ಮುಖದ ಅಂದವನ್ನೇ ಹಾಳು ಮಾಡಿಬಿಡುತ್ತದೆ. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಅನೇಕರು ಕ್ರೀಮ್‌ಗಳು, ಕಡ್ಲೆ ಹಿಟ್ಟು ಇತ್ಯಾದಿ ಮನೆ ಮದ್ದುಗಳನ್ನು ಮುಖಕ್ಕೆ ಹಚ್ಚುತ್ತಾರೆ. ಆದ್ರೆ ನಟಿ ತಮನ್ನಾ ಭಾಟಿಯಾ ಮೊಡವೆಯ ಸಮಸ್ಯೆಯಿಂದ ಮುಕ್ತಿ ಪಡೆಯಲು ತಮ್ಮ ಎಂಜಲನ್ನೇ ಮೊಡವೆಯ ಜಾಗಕ್ಕೆ ಹಚ್ಚುತ್ತಾರಂತೆ. ಇತ್ತೀಚಿಗಿನ ಸಂದರ್ಶನವೊಂದರಲ್ಲಿ ಈ ಸೀಕ್ರೆಟನ್ನು ಅವರು ರಿವೀಲ್‌ ಮಾಡಿದ್ದಾರೆ.

ಮುಖದ ಮೇಲಿನ ಮೊಡವೆ ಸಮಸ್ಯೆಯನ್ನು ಹೋಗಲಾಡಿಸಲು ನಮ್ಮ ಎಂಜಲೇ ಮದ್ದಂತೆ
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
| Edited By: |

Updated on: Aug 05, 2025 | 9:28 AM

Share

ಮುಖದ ಮೇಲೆ ಮೊಡವೆಗಳು (pimple problems) ಕಾಣಿಸಿಕೊಳ್ಳುವುದು ಸಾಮಾನ್ಯ. ಹೀಗೆ ಕಾಣಿಸಿಕೊಳ್ಳುವ ಮೊಡವೆಗಳು, ಅವುಗಳ ಕಲೆಗಳಿಂದ ಮುಖದ ಅಂದ ಎನ್ನುವಂತಹದ್ದು ಹಾಳಾಗಿಬಿಡುತ್ತದೆ. ಹಾಗಾಗಿ ಈ ಮೊಡವೆಯನ್ನು ಹೋಗಲಾಡಿಸಲು ದುಬಾರಿ ಕ್ರೀಮ್‌, ಫೇಸ್‌ ಪ್ಯಾಕ್‌ಗಳನ್ನು ಮುಖಕ್ಕೆ ಹಚ್ಚಿಕೊಳ್ಳುತ್ತಾರೆ. ಆದರೆ ನಟಿ  ತಮನ್ನಾ ಭಾಟಿಯಾ (Tamannaah Bhatia) ಮೊಡವೆಯ ಸಮಸ್ಯೆಯಿಂದ ಮುಕ್ತಿ ಪಡೆಯಲು ಬೆಳಗ್ಗೆ ಎದ್ದ ತಕ್ಷಣ ಬಾಯಿಯ ಎಂಜಲನ್ನು ಮೊಡವೆಯ ಜಾಗಕ್ಕೆ ಹಚ್ಚುತ್ತಾರಂತೆ. ಇತ್ತೀಚಿಗಿನ ಸಂದರ್ಶನವೊಂದರಲ್ಲಿ ಈ ಸೀಕ್ರೆಟ್‌ ಬಗ್ಗೆ ತಿಳಿಸಿದ್ದಾರೆ. ಎಂಜಲು ಹಚ್ಚುವುದರಿಂದ ನಿಜಕ್ಕೂ ಮೊಡವೆಯ ಸಮಸ್ಯೆಯನ್ನು ಹೋಗಲಾಡಿಸಬಹುದಾ? ಈ ಕುರಿತ ಇಂಟರೆಸ್ಟಿಂಗ್‌ ಮಾಹಿತಿಯನ್ನು ನೋಡೋಣ ಬನ್ನಿ.

ಮೊಡವೆಯನ್ನು ಹೋಗಲಾಡಿಸಲು ಎಂಜಲು ಹಚ್ಚುವ ತಮನ್ನಾ:

ನಟಿಯರ ಸೌಂದರ್ಯ ರಹಸ್ಯ, ಮೊಡವೆ, ಕಲೆ ಇತ್ಯಾದಿ ಸಮಸ್ಯೆಗಳನ್ನು ಹೋಗಲಾಡಿಸಲು ಅವರು ಅನುಸರಿಸುವ ವಿಧಾನಗಳ ಬಗ್ಗೆ ತಿಳಿಯಲು ಎಲ್ಲರಿಗೂ ಕುತೂಹಲ ಇದ್ದೇ ಇರುತ್ತದೆ. ಈ ಬಗ್ಗೆ ಇಂಟರ್ವ್ಯೂಗಳಲ್ಲೂ ನಟ ನಟಿಯರ ಬಳಿ ಈ ಪ್ರಶ್ನೆಯನ್ನು ಕೇಳುತ್ತಾರೆ. ಅದೇ ರೀತಿ ಇತ್ತೀಚಿಗಿನ ಸಂದರ್ಶನವೊಂದರಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಬಳಿ ಅವರ ಪಿಂಪಲ್‌ ಹ್ಯಾಕ್‌ ಬಗ್ಗೆ ಪ್ರಶ್ನೆಯನ್ನು ಕೇಳಿದ್ದು, ನಾನು ಮೊಡವೆಗಳನ್ನು ಹೋಗಲಾಡಿಸಲು ಬೆಳಗ್ಗೆ ಎದ್ದ ಬಳಿಕ, ಹಲ್ಲುಜ್ಜುವ ಮೊದಲು ಮೊಡವೆಗಳಿರುವ ಜಾಗಕ್ಕೆ ಎಂಜಲನ್ನು ಹಚ್ಚುತ್ತೇನೆ. ಇದು ನಿಜಕ್ಕೂ ಪರಿಣಾಮಕಾರಿ ಎಂದು ಹೇಳಿದ್ದಾರೆ.

ಇದನ್ನೂ ಓದಿ
Image
ತಲೆಯಲ್ಲಿನ ಹೇನಿನ ಸಮಸ್ಯೆಯಿಂದ ಮುಕ್ತಿ ಪಡೆಯಲು ಇಲ್ಲಿವೆ ಸಿಂಪಲ್‌ ಮನೆಮದ್ದು
Image
ಮಹಿಳೆಯರೇ… ನೀವು ಬಲು ಬೇಗನೆ ವಯಸ್ಸಾದವರಂತೆ ಕಾಣಲು ಇದೇ ಕಾರಣವಂತೆ
Image
ಪ್ರತಿದಿನ ಬೆಳಗ್ಗೆ 5 ಗಂಟೆಗೆ ಏಳುವುದರಿಂದ ಏನಾಗುತ್ತೆ ಗೊತ್ತಾ?
Image
ಸ್ನಾನ ಮಾಡುವಾಗ ದೇಹದ ಈ ಭಾಗಗಳನ್ನು ಸ್ವಚ್ಛಗೊಳಿಸಲು ಮರೆಯದಿರಿ

ಈ ಕುರಿತ ವಿಡಿಯೋವನ್ನು simplee.girl_01 ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಮೊಡವೆಯನ್ನು ನಿವಾರಿಸುವ ಇವರ ಈ ಸಲಹೆಯನ್ನು ಕೇಳಿ ಎಲ್ಲರೂ ಶಾಕ್‌ ಆಗಿದ್ದಾರೆ.  ಬೆಳಗ್ಗೆ ಎಂಜಲು ಹಚ್ಚುವುದರಿಂದ ನಿಜಕ್ಕೂ ಮೊಡವೆಯ ಸಮಸ್ಯೆಯಿಂದ ಮುಕ್ತಿ ಪಡೆಯಲು ಸಾಧ್ಯವೇ? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ ನೋಡಿ.

ವಿಡಿಯೋ ಇಲ್ಲಿದೆ ನೋಡಿ:

ಆಯುರ್ವೇದ ಈ  ಬಗ್ಗೆ ಏನು ಹೇಳುತ್ತದೆ ?

ಬೆಳಿಗ್ಗೆ ಬಾಯಿಯಲ್ಲಿ ರೂಪುಗೊಳ್ಳುವ ಲಾಲಾರಸ ಅಥವಾ ಉಗುಳು ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಎಂದು ನಂಬಲಾಗಿದೆ. ಏಕೆಂದರೆ ನಾವು ರಾತ್ರಿ ಮಲಗಿದಾಗ, ಬಾಯಿಯ ಲಾಲಾರಸದಲ್ಲಿ ಕೆಲವು ಕಿಣ್ವಗಳು ರೂಪುಗೊಳ್ಳುತ್ತವೆ, ಇದು ಮೊಡವೆಗಳನ್ನು ಮೂಲದಿಂದ ನಿರ್ಮೂಲನೆ ಮಾಡುವ ಶಕ್ತಿಯನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತದೆ. ಲಾಲಾರಸ (ಉಗುಳು) ಸ್ವಲ್ಪ ಮಟ್ಟಿಗೆ ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ. ಉಗುಳಿನಲ್ಲಿರುವ ಲೈಸೋಜೈಮ್, ಪೆಪ್ಟೈಡ್‌ಗಳು ಮತ್ತು ಇಮ್ಯುನೊಗ್ಲಾಬ್ಯುಲಿನ್‌ಗಳಂತಹ ಕಿಣ್ವಗಳು ಬ್ಯಾಕ್ಟೀರಿಯಾವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಮಹಿಳೆಯರೇ… ನೀವು ಬಲು ಬೇಗನೆ ವಯಸ್ಸಾದವರಂತೆ ಕಾಣಲು ಇದೇ ಕಾರಣವಂತೆ

ಆದಾಗ್ಯೂ, ಇದರ ವೈಜ್ಞಾನಿಕ ಆಧಾರವು ಅಸ್ಪಷ್ಟವಾಗಿದೆ. ಬೆಳಗಿನ ಲಾಲಾರಸದಲ್ಲಿ ಕಂಡುಬರುವ ಕಿಣ್ವಗಳು ಮೊಡವೆಗಳನ್ನು ನಿವಾರಿಸುವ ಶಕ್ತಿಯನ್ನು ಹೊಂದಿದ್ದರೂ, ಅದು ಪ್ರತಿಯೊಂದು ರೀತಿಯ ಚರ್ಮಕ್ಕೂ ಹೊಂದಿಕೆಯಾಗುವುದಿಲ್ಲ. ಪ್ರತಿಯೊಬ್ಬರ ಚರ್ಮವು ವಿಭಿನ್ನವಾಗಿರುತ್ತದೆ ಮತ್ತು ಲಾಲಾರಸದಲ್ಲಿರುವ ಕಿಣ್ವಗಳು ಕೆಲವರ ಚರ್ಮದ ಮೇಲೆ ಅಲರ್ಜಿ, ಕಿರಿಕಿರಿಯನ್ನು ಉಂಟುಮಾಡುವ ಸಾಧ್ಯತೆ ಇರುತ್ತದೆ ಎಂದು ಚರ್ಮ ರೋಗ ತಜ್ಞರು  ಹೇಳುತ್ತಾರೆ.

ಕೆಲವು ತಜ್ಞರು ಈ ಪರಿಹಾರವನ್ನು ಸೌಮ್ಯವಾದ ಮೊಡವೆಗಳಿಗೆ ಮಾತ್ರ ಪರಿಣಾಮಕಾರಿ. ತೀವ್ರವಾದ ಮತ್ತು ಪದೇ ಪದೇ ಮೊಡವೆಗಳು ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ ಎಂದು ಹೇಳುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ