ಮಹಿಳೆಯರೇ… ನೀವು ಬಲು ಬೇಗನೆ ವಯಸ್ಸಾದವರಂತೆ ಕಾಣಲು ಇದೇ ಕಾರಣವಂತೆ
ಪುರುಷರಿಗೆ ಹೋಲಿಸಿದರೆ ಸೌಂದರ್ಯದ ವಿಷಯದಲ್ಲಿ ಮಹಿಳೆಯರು ತುಸು ಹೆಚ್ಚೇ ಕಾಳಜಿ ವಹಿಸುತ್ತಾರೆ. ಹೀಗಿದ್ದರೂ ಕೂಡಾ ಕೆಲ ಮಹಿಳೆಯರು ಸಣ್ಣ ವಯಸ್ಸಿನಲ್ಲಿಯೇ ಹೆಚ್ಚು ವಯಸ್ಸಾದವರಂತೆ ಕಾಣಿಸುತ್ತಾರೆ. ಇದಕ್ಕೆಲ್ಲಾ ಈ ಕೆಲವೊಂದಿಷ್ಟು ಅಭ್ಯಾಸಗಳೇ ಕಾರಣವಂತೆ. ಹಾಗಿದ್ರೆ ವೇಗವಾಗಿ ವಯಸ್ಸಾದಂತೆ ಮಾಡುವ ಆ ಅಭ್ಯಾಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಎಲ್ಲರಿಗೂ ವಯಸ್ಸಾಗೋದು ಸಹಜ. ಈ ವಯಸ್ಸಾಗುವಿಕೆಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಆದರೆ ಆಹಾರ ಪದ್ಧತಿ, ಜೀವನಶೈಲಿಯ ಕಾರಣಗಳಿಂದಾಗಿ ಕೆಲವೊಬ್ಬರು ಬೇಗನೆ ವಯಸ್ಸಾದಂತೆ ಕಾಣುತ್ತಾರೆ. 35 ವರ್ಷ ವಯಸ್ಸಾಗಿದ್ದರೂ, 50 ವರ್ಷದವರಂತೆ ಕಾಣಿಸುತ್ತಾರೆ. ಅದರಲ್ಲೂ ಹೆಂಗಳೆಯರು ಸಣ್ಣ ವಯಸ್ಸಿನಲ್ಲೇ, ಮುಖವೆಲ್ಲಾ ಸುಕ್ಕುಗಟ್ಟಿ ಮಧ್ಯ ವಯಸ್ಸಿನವರಂತೆ (Women Aging) ಕಾಣಿಸುತ್ತಾರೆ. ಇದಕ್ಕೆಲ್ಲಾ ಮಹಿಳೆಯರ ಈ ಕೆಲವೊಂದು ಅಭ್ಯಾಸಗಳೇ ಕಾರಣವಂತೆ. ಹಾಗಿದ್ರೆ ಯಾವ ಕಾರಣದಿಂದ ಮಹಿಳೆಯರು ವಯಸ್ಸಾದವರಂತೆ (Habits That Make Women Old Fast) ಕಾಣಿಸುತ್ತಾರೆ? ಈ ವಯಸ್ಸಾಗುವಿಕೆಯನ್ನು ಹೋಗಲಾಡಿಸಿ, ಯಂಗ್ ಆಗಿ ಕಾಣಲು ಏನು ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.
ಬೇಗನೆ ವಯಸ್ಸಾದವರಂತೆ ಕಾಣಲು ಕಾರಣಗಳೇನು?
ಒತ್ತಡ: ಒತ್ತಡವು ಎನ್ನುವಂತಹದ್ದು ಮಾನಸಿಕ ಆರೋಗ್ಯದ ಮೇಲೆ ಮಾತ್ರವಲ್ಲದೆ ಇದು ನಿಮ್ಮ ಮುಖದ ಅಂದದ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಬೇಗನೆ ವಯಸ್ಸಾದವರಂತೆ ಕಾಣುತ್ತಾರೆ. ಕೆಲ ತಜ್ಞರು ಒತ್ತಡವು ಚರ್ಮ ದಣಿದಂತೆ ಕಾಣುವಂತೆ ಮಾಡುತ್ತದೆ ಎಂದು ಹೇಳುತ್ತಾರೆ. ಇದರಿಂದ ನೀವು ಅಕಾಲಿಕವಾಗಿ ವಯಸ್ಸಾದವರಂತೆ ಕಾಣುತ್ತೀರಿ. ಹಾಗಾಗಿ ಈ ಒತ್ತಡವನ್ನು ಕಡಿಮೆ ಮಾಡಲು ನಡಿಗೆ, ವ್ಯಾಯಾಮ, ಡೈರಿ ಬರೆಯುವುದು ಮತ್ತು ಧ್ಯಾನದಂತಹ ಚಟುವಟಿಕೆಗಳನ್ನು ಅಭ್ಯಾಸ ಮಾಡಿಕೊಳ್ಳಿ.
ನಿದ್ರೆ: ನಿದ್ರೆಯ ಕೊರತೆಯು ಚರ್ಮದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಮಹಿಳೆಯರಲ್ಲಿ ಅಕಾಲಿಕ ವಯಸ್ಸಾಗುವಿಕೆಗೆ ಕಾರಣವಾಗುತ್ತದೆ. ಜೊತೆಗೆ ಇದು ಮುಖದ ಮೇಲೆ ಸುಕ್ಕುಗಳು ಮತ್ತು ಕಣ್ಣುಗಳ ಕೆಳಗೆ ಕಪ್ಪು ವರ್ತುಲಗಳಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಮಹಿಳೆಯರು ತಮ್ಮ ಚರ್ಮವನ್ನು ಯೌವನದಿಂದ ಇರಿಸಿಕೊಳ್ಳಲು ಪ್ರತಿದಿನ ಕನಿಷ್ಠ 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡಬೇಕು.
ಕೋಪ: ಇತ್ತೀಚಿನ ಸಂಶೋಧನೆಗಳು ಕೋಪವು ಅಕಾಲಿಕ ವಯಸ್ಸಾಗುವಿಕೆಗೆ ಕಾರಣವಾಗಬಹುದು ಎಂದು ಹೇಳಿವೆ. ಹಾಗಾಗಿ ಮಹಿಳೆಯರು ಕೋಪ ಮಾಡಿಕೊಳ್ಳುವುದನ್ನು ಕಡಿಮೆ ಮಾಡಬೇಕು.
ಜಂಕ್ ಫುಡ್: ಸಂಸ್ಕರಿಸಿದ ಆಹಾರ, ಜಂಕ್‌ಫುಡ್‌ಗಳನ್ನು ಅತಿಯಾಗಿ ಸೇವನೆ ಮಾಡುವುದರ ಪರಿಣಾಮ ಮುಖದಲ್ಲಿ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ. ಇದರಿಂದಾಗಿ ಮಹಿಳೆಯರು ಬೇಗನೆ ವಯಸ್ಸಾದವರಂತೆ ಕಾಣಿಸುತ್ತಾರೆ. ಆದ್ದರಿಂದ ಮಹಿಳೆಯರು ಹಣ್ಣುಗಳು, ತರಕಾರಿಗಳು ನೀರು ಮತ್ತು ಆರೋಗ್ಯಕರ ಆಹಾರವನ್ನು ಸೇವಿಸುವುದು ಬಹಳ ಮುಖ್ಯ.
ಇದನ್ನೂ ಓದಿ: ಪ್ರತಿದಿನ ಬೆಳಗ್ಗೆ 5 ಗಂಟೆಗೆ ಏಳುವುದರಿಂದ ಏನಾಗುತ್ತೆ ಗೊತ್ತಾ?
ಸನ್‌ಸ್ಕ್ರೀನ್: ಹೆಚ್ಚು ಹೊತ್ತು ಬಿಸಿಲಿನಲ್ಲಿ ಇರುವುದರಿಂದ ಚರ್ಮ ಕಪ್ಪಾಗುತ್ತದೆ ಮತ್ತು ಇದು ಅಕಾಲಿಕ ವಯಸ್ಸಾಗುವಿಕೆಗೆ ಕಾರಣವಾಗಬಹುದು. ಇದನ್ನು ಫೋಟೋಏಜಿಂಗ್ ಎಂದು ಕರೆಯಲಾಗುತ್ತದೆ. ಸೂರ್ಯನ ಬೆಳಕಿನಿಂದಾಗಿ, ಚರ್ಮದ ಕೋಶಗಳು ಹಾನಿಗೊಳಗಾಗುತ್ತವೆ ಮತ್ತು ಚರ್ಮವು ಒಣಗಲು ಮತ್ತು ಚರ್ಮದಲ್ಲಿ ಸುಕ್ಕುಗಳು ಮತ್ತು ಕಲೆಗಳು ಕಾಣಿಸಲು ಕಾರಣವಾಗಬಹುದು. ಆದ್ದರಿಂದ ಮಹಿಳೆಯರು ಪ್ರತಿದಿನ ಸನ್‌ಸ್ಕ್ರೀನ್ ಬಳಸುವುದು ಬಹಳ ಮುಖ್ಯ.
ಧೂಮಪಾನ: ಅತಿಯಾದ ಧೂಪಮಾನ ಮತ್ತು ಮದ್ಯಪಾನ ಸೇವನೆಯು ಮಹಿಳೆಯರ ಚರ್ಮವನ್ನು ಒಣಗಿಸಿ ನಿರ್ಜೀವಗೊಳಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದು ಚರ್ಮವನ್ನು ನಿರ್ಜೀವಗೊಳಿಸಿ ವಯಸ್ಸಾದವರಂತೆ ಕಾಣುವಂತೆ ಮಾಡುತ್ತದೆ. ಅದಕ್ಕಾಗಿಯೇ ಮಹಿಳೆಯರು ಧೂಮಪಾನ ಮತ್ತು ಮದ್ಯಪಾನದಂತಹ ಅಭ್ಯಾಸಗಳನ್ನು ಸಂಪೂರ್ಣವಾಗಿ ತ್ಯಜಿಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:09 pm, Wed, 23 July 25







