ನಾನ್-ವೆಜ್ ತಿಂದಿದ್ದಕ್ಕೆ ಡಾಲಿ ಧನಂಜಯ ಟ್ರೋಲ್: ಮನೆಯವರ ಪ್ರತಿಕ್ರಿಯೆ ಏನು?
ನಟ ಡಾಲಿ ಧನಂಜಯ ಅವರು ಮಾಂಸಾಹಾರ ಸೇವನೆ ಮಾಡಿದ ಫೋಟೋ ವೈರಲ್ ಆದ ಬಳಿಕ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಆ ಕುರಿತಂತೆ ಈಗ ಅವರು ಮಾಧ್ಯಮಗಳ ಎದುರು ಮಾತನಾಡಿದ್ದಾರೆ. ನಾನ್-ವೆಜ್ ತಿಂದಿದ್ದನ್ನು ಜನರು ಟ್ರೋಲ್ ಮಾಡಿದಾಗ ಮನೆಯವರ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ಅವರು ತಿಳಿಸಿದ್ದಾರೆ.
ನಟ ಡಾಲಿ ಧನಂಜಯ ಅವರು ಮಾಂಸಾಹಾರ (Non-Veg) ಸೇವನೆ ಮಾಡಿದ ಫೋಟೋ ವೈರಲ್ ಆದ ಬಳಿಕ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಆ ಕುರಿತಂತೆ ಈಗ ಅವರು ಮಾಧ್ಯಮಗಳ ಎದುರು ಮಾತನಾಡಿದ್ದಾರೆ. ನಾನ್-ವೆಜ್ ತಿಂದಿದ್ದನ್ನು ಜನರು ಟ್ರೋಲ್ ಮಾಡಿದಾಗ ಮನೆಯವರ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ಅವರು ತಿಳಿಸಿದ್ದಾರೆ. ‘ಮೊದಮೊದಲು ಅವರಿಗೆ ಬಹಳ ಬೇಜಾರಾಗಿತ್ತು. ಆದರೆ ಈಗ ನಾನು ಅವರಿಗೆ ಅರ್ಥ ಮಾಡಿಸಿದ್ದೇನೆ. ಸಾರ್ವಜನಿಕ ಜೀವನದಲ್ಲಿ ಇದ್ದಾಗ ಅದೆಲ್ಲ ಸಹಜ. ಸೊಶಿಯಲ್ ಮೀಡಿಯಾದಲ್ಲಿ ಫೇಕ್ ಅಕೌಂಟ್ನಿಂದ ಯಾರನ್ನೂ ಬಿಟ್ಟಿಲ್ಲ. ಅದೊಂದು ರೀತಿ ವಿಕೃತ ಮನಸ್ಥಿತಿ. ಸರಿ-ತಪ್ಪು ಯೋಚನೆ ಮಾಡುವುದಕ್ಕಿಂತ ಮೊದಲೇ ಪೋಸ್ಟ್ ಮಾಡುತ್ತಾರೆ. ಫೇಕ್ ಅಕೌಂಟ್ಗಳನ್ನು ತೆಗೆದರೆ ಎಲ್ಲವೂ ಸರಿ ಆಗುತ್ತದೆ’ ಎಂದು ಡಾಲಿ ಧನಂಜಯ (Daali Dhananjaya) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

