AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒತ್ತಡ, ಆಯಾಸವಿಲ್ಲದೆ ನೆಮ್ಮದಿಯಿಂದ ನಿದ್ರೆ ಮಾಡಲು ರಾತ್ರಿ ವೇಳೆ ಈ ಅಭ್ಯಾಸಗಳನ್ನು ಪಾಲಿಸಿ

ಇಂದಿನ ಒತ್ತಡದ ಜೀವನದಲ್ಲಿ, ಉತ್ತಮ ನಿದ್ರೆ ಪಡೆಯುವುದು ಹೆಚ್ಚಿನ ಜನರಿಗೆ ಬಹುದೊಡ್ಡ ಸವಾಲಾಗಿದೆ. ಒತ್ತಡ ಮತ್ತು ಕಿರಿಕಿರಿಯ ಕಾರಣ ನಿದ್ರೆ ಬರದೇ ರಾತ್ರಿಯಿಡಿ ಒದ್ದಾಡುತ್ತಾರೆ. ನೀವು ಸಹ ಇದೇ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದೀರಾ? ಹಾಗಿದ್ರೆ ರಾತ್ರಿ ವೇಳೆ ಈ ಕೆಲವು ಅಭ್ಯಾಸಗಳನ್ನು ಪಾಲಿಸಿ, ಇವು ಉತ್ತಮ ನಿದ್ರೆ ಸಹಾಯ ಮಾಡವುದು ಮಾತ್ರವಲ್ಲದೆ ಒತ್ತಡ ಮತ್ತು ಆಯಾಸವನ್ನೂ ನಿವಾರಿಸುತ್ತದೆ.

ಒತ್ತಡ, ಆಯಾಸವಿಲ್ಲದೆ ನೆಮ್ಮದಿಯಿಂದ ನಿದ್ರೆ ಮಾಡಲು ರಾತ್ರಿ ವೇಳೆ ಈ ಅಭ್ಯಾಸಗಳನ್ನು ಪಾಲಿಸಿ
ಸಾಂದರ್ಭಿಕ ಚಿತ್ರ Image Credit source: Pexels
ಮಾಲಾಶ್ರೀ ಅಂಚನ್​
|

Updated on: Jan 29, 2026 | 6:56 PM

Share

ಇಂದಿನ ಕಾರ್ಯನಿರತ ಜೀವನದಲ್ಲಿ, ದೇಹಕ್ಕೆ ಸಾಕಷ್ಟು ವಿಶ್ರಾಂತಿ ಪಡೆಯಲು ಸಾಧ್ಯವಾಗುತ್ತಿಲ್ಲ. ನಿದ್ರೆಯ (sleep) ಕೊರತೆಯು ಆಯಾಸಕ್ಕೆ ಕಾರಣವಾಗುತ್ತದೆ. ಇಂತಹ ಸಂದರ್ಭಗಳಲ್ಲಿ, ಜೀವನಶೈಲಿಯಲ್ಲಿ ಕೊಂಚ ಬದಲಾವಣೆಗಳನ್ನು ಮಾಡುವ ಮೂಲಕ ಮತ್ತು ಕೆಲವು ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ, ಒತ್ತಡ ಮತ್ತು ಆಯಾಸವನ್ನು ನಿವಾರಿಸಬಹುದು ಜೊತೆಗೆ ರಾತ್ರಿಯ ವೇಳೆ ಈ ಈ ಕೆಲವು ಅಭ್ಯಾಸಗಳನ್ನು ಪಾಲಿಸುವ ಮೂಲಕ ಉತ್ತಮ ನಿದ್ರೆಯನ್ನು ಪಡೆಯಬಹುದು. ಆ ಆರೋಗ್ಯಕರ ಅಭ್ಯಾಸಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಉತ್ತಮ ನಿದ್ರೆಗಾಗಿ ರಾತ್ರಿ ವೇಳೆ  ನೀವು ಪಾಲಿಸಬೇಕಾದ ಅಭ್ಯಾಸಗಳಿವು:

ಸ್ನಾನ ಮಾಡಿ: ಆಯಾಸವನ್ನು ನಿವಾರಿಸಲು ಹಾಗೂ ಉತ್ತಮ ನಿದ್ರೆಯನ್ನು ಪಡೆಯಲು ರಾತ್ರಿ ಮಲಗುವ ಮುನ್ನ ಸ್ನಾನ ಮಾಡಿ. ಸ್ನಾನವು ನಿಮ್ಮ ಹೊರ ಚರ್ಮದ ಮೇಲಿನ ರಂಧ್ರಗಳನ್ನು ಸ್ವಚ್ಛಗೊಳಿಸುವುದಲ್ಲದೆ ದೇಹವನ್ನು ರಿಫ್ರೆಶ್ ಮಾಡುತ್ತದೆ, ಇದು ಉತ್ತಮ ನಿದ್ರೆಗೆ ಕಾರಣವಾಗುತ್ತದೆ.

ಸಾಕಷ್ಟು ನೀರು ಕುಡಿಯಿರಿ: ದೇಹದ ನೀರಿನ ಅಗತ್ಯಗಳನ್ನು ಪೂರೈಸದಿದ್ದರೆ, ಅದು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಇದು ಆಯಾಸಕ್ಕೆ ಕಾರಣವಾಗಬಹುದು. ನಮ್ಮ ದೇಹಕ್ಕೆ ನೀರು ಅತ್ಯಗತ್ಯ. ಆದ್ದರಿಂದ, ನಿಮ್ಮ ಜಲಸಂಚಯನ ಅಗತ್ಯಗಳನ್ನು ಪೂರೈಸಲು ಸಾಕಷ್ಟು ನೀರು ಕುಡಿಯಿರಿ.

ಮಲಗುವ ಮುನ್ನ ಚಹಾ, ಕಾಫಿ ಕುಡಿಯುವುದನ್ನು ನಿಲ್ಲಿಸಿ: ಮಲಗುವ ಮುನ್ನ ಚಹಾ ಅಥವಾ ಕಾಫಿ ಕುಡಿಯುವುದನ್ನು ತಪ್ಪಿಸಿ. ಇದು ನಿದ್ರೆಗೆ ಅಡ್ಡಿಪಡಿಸಬಹುದು ಮತ್ತು ನಿಮ್ಮ ಆರೋಗ್ಯದ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ.

ವಾಕಿಂಗ್‌ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ: ವಾಕಿಂಗ್‌ ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ರಾತ್ರಿ ಊಟದ ನಂತರ ಕನಿಷ್ಠ ಅರ್ಧ ಗಂಟೆಯಾದರೂ ನಡೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ಆಯಾಸವನ್ನು ನಿವಾರಿಸುತ್ತದೆ ಮತ್ತು ಉತ್ತಮ ನಿದ್ರೆ ಪಡೆಯಲು ಸಹಾಯ ಮಾಡುತ್ತದೆ.

ಪರದೆಯ ಸಮಯವನ್ನು ಕಡಿಮೆ ಮಾಡಿ: ಮಲಗುವ ಮುನ್ನ ಮೊಬೈಲ್, ಟಿವಿ ಮತ್ತು ಲ್ಯಾಪ್‌ಟಾಪ್‌ನಿಂದ ದೂರವಿರುವುದು ಬಹಳ ಮುಖ್ಯ. ಅವುಗಳ ಬಳಕೆಯು ನೀಲಿ ಬೆಳಕನ್ನು ಹೊರಸೂಸುತ್ತದೆ, ಇದರಿಂದಾಗಿ ನಿದ್ರೆಗೆ ಅಡ್ಡಿಪಡಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮಲಗುವ ಮೊದಲು ಒಂದು ಗಂಟೆ ಮೊದಲು ಮೊಬೈಲ್, ಟಿವಿ ಮತ್ತು ಲ್ಯಾಪ್‌ಟಾಪ್‌ನಿಂದ ದೂರವಿರಿ. ಮತ್ತು ಉತ್ತಮ ನಿದ್ರೆಯನ್ನು ಪಡೆಯಲು ಮಲಗುವ ಮುನ್ನ ನೀವು ಪುಸ್ತಕ ಓದಬಹುದು ಅಥವಾ ಶಾಂತ ಸಂಗೀತವನ್ನು ಕೇಳಬಹುದು.

ಇದನ್ನೂ ಓದಿ: ರಾತ್ರಿ ವೇಳೆ ಅಭ್ಯಾಸಗಳನ್ನು ಪಾಲಿಸಿದರೆ ಕಾಂತಿಯುತ ತ್ವಚೆ ನಿಮ್ಮದಾಗುತ್ತದೆ

ಮಲಗುವ ಮುನ್ನ ಧ್ಯಾನ ಮಾಡಿ: ಮಲಗುವ ಮುನ್ನ ನೀವು ಯೋಗ ಅಥವಾ ಧ್ಯಾನವನ್ನು ಸಹ ಮಾಡಬಹುದು. ಇದು ಸ್ನಾಯುಗಳ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ದೇಹವನ್ನು ವಿಶ್ರಾಂತಿ ಸ್ಥಿತಿಯಲ್ಲಿರಿಸುತ್ತದೆ, ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ರಾತ್ರಿಯಲ್ಲಿ ಆಳವಾದ ನಿದ್ರೆ ಪಡೆಯಲು ಸಹಾಯ ಮಾಡುತ್ತದೆ.

ಮಲಗುವ ಮುನ್ನ ನಿಮ್ಮ ಪಾದಗಳಿಗೆ ಮಸಾಜ್ ಮಾಡಿ: ಮಲಗುವ ಮುನ್ನ ನಿಮ್ಮ ಪಾದಗಳಿಗೆ ಮಸಾಜ್ ಮಾಡಿ. ಸೌಮ್ಯವಾದ ಫೂಟ್ ಮಸಾಜ್ ನರಗಳನ್ನು ಸಡಿಲಗೊಳಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ, ಇದು ಉತ್ತಮ ನಿದ್ರೆ ಪಡೆಯಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ