AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿವಿಯಲ್ಲಿನ ವಾಕ್ಸ್ ತೆಗೆಯಲು ಸರಿಯಾದ ವಿಧಾನ ಯಾವುದು? ಆರೋಗ್ಯ ತಜ್ಞರು ಈ ಬಗ್ಗೆ ಏನ್ ಹೇಳ್ತಾರೆ ನೋಡಿ

ಕಿವಿಯ ಮೇಣವನ್ನು ಬೆರಳಿನಿಂದ ಅಥವಾ ಇನ್ನಾವುದೇ ವಸ್ತುವಿನಿಂದ ತೆಗೆಯುವುದು ಸರಿಯೇ? ಕಿವಿಯಲ್ಲಿ ಮೇಣ ಏಕೆ ಸಂಗ್ರಹವಾಗುತ್ತದೆ? ಬೀದಿ ಬದಿಯ ಕ್ಲೀನರ್‌ಗಳಿಂದ ನಿಮ್ಮ ಕಿವಿಗಳನ್ನು ಸ್ವಚ್ಛಗೊಳಿಸುವುದು ಎಷ್ಟು ಸೂಕ್ತ? ಎಂಬುದರ ಬಗ್ಗೆ ಡಾ. ರವಿ ಮೆಹ್ರಾ ಕೆಲವು ಮಾಹಿತಿ ಹಂಚಿಕೊಂಡಿದ್ದು ಪ್ರತಿಯೊಬ್ಬರೂ ಕೂಡ ಈ ವಿಷಯಗಳ ಕುರಿತು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ಈ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಿವಿಯಲ್ಲಿನ ವಾಕ್ಸ್ ತೆಗೆಯಲು ಸರಿಯಾದ ವಿಧಾನ ಯಾವುದು? ಆರೋಗ್ಯ ತಜ್ಞರು ಈ ಬಗ್ಗೆ ಏನ್ ಹೇಳ್ತಾರೆ ನೋಡಿ
EarwaxImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Jan 29, 2026 | 5:51 PM

Share

ಕಿವಿಯಲ್ಲಿ (Ear) ಕೊಳಕು ಅಥವಾ ಮೇಣ (Earwax) ಸಂಗ್ರಹವಾದರೆ, ಅದನ್ನು ಬೆರಳಿನಿಂದ ಅಥವಾ ಇಯರ್ ಬಡ್ ಸಹಾಯದಿಂದ ಅದನ್ನು ತೆಗೆಯಲು ಪ್ರಯತ್ನಿಸುತ್ತೇವೆ. ಹಾಗಾದರೆ ಇದು ಕಿವಿಯನ್ನು ಸ್ವಚ್ಛಗೊಳಿಸುತ್ತದೆಯೇ, ಈ ವಿಧಾನ ಒಳ್ಳೆಯದೇ ಎಂದು ಎಂದಾದರೂ ಯೋಚಿಸಿದ್ದೀರಾ… ಆರೋಗ್ಯ ತಜ್ಞರು ಇದು ಸರಿಯಾದ ಮಾರ್ಗವಲ್ಲ ಎಂದು ಹೇಳುತ್ತಾರೆ. ಹಾಗದರೆ ಕಿವಿಯಲ್ಲಿ ಕೊಳಕು ಅಥವಾ ಮೇಣ ಸಂಗ್ರಹವಾಗುವುದಕ್ಕೆ ಕಾರಣವೇನು, ಅದನ್ನು ತೆಗೆಯಲು ಸರಿಯಾದ ವಿಧಾನ ಯಾವುದು ಎಂಬುದನ್ನು ತಿಳಿದುಕೊಳ್ಳಿ. ಈ ಬಗ್ಗೆ ದೆಹಲಿಯ ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿನ ಇಎನ್‌ಟಿ ವಿಭಾಗದ ಮುಖ್ಯಸ್ಥ ಡಾ. ರವಿ ಮೆಹ್ರಾ ಕೆಲವು ಮಾಹಿತಿ ಹಂಚಿಕೊಂಡಿದ್ದಾರೆ. ಈ ಬಗೆಗಿನ ಸಂಪೂರ್ಣ ವಿವರ ಸ್ಟೋರಿಯಲ್ಲಿದೆ.

ಕಿವಿಯಲ್ಲಿ ಸಂಗ್ರಹವಾಗುವ ಕೊಳೆಯನ್ನು ಇಯರ್‌ವಾಕ್ಸ್ ಎಂದು ಕರೆಯಲಾಗುತ್ತದೆ. ಜನರು ಇದನ್ನು ಕೊಳಕು ಎಂದು ಪರಿಗಣಿಸುತ್ತಾರೆ, ಆದರೆ ಇದು ಕಿವಿಯ ನೈಸರ್ಗಿಕ ರಕ್ಷಣಾತ್ಮಕ ಪದರವಾಗಿದ್ದು ಅದು ಧೂಳು ಮತ್ತು ಹಾನಿಕಾರಕ ಬ್ಯಾಕ್ಟೀರಿಯಾಗಳು ಕಿವಿಗೆ ಪ್ರವೇಶಿಸುವುದನ್ನು ತಡೆಯುತ್ತದೆ. ಆದರೆ ಈ ಕೊಳಕು ಅತಿಯಾಗಿ ಸಂಗ್ರಹವಾದರೆ, ಅದು ಕಳವಳಕಾರಿ ವಿಷಯವಾಗಬಹುದು ಹಾಗಾಗಿ ಇಂತಹ ಸಮಯದಲ್ಲಿ ಇಎನ್‌ಟಿ ವೈದ್ಯರನ್ನು ಸಂಪರ್ಕಿಸುವುದು ಬಹಳ ಮುಖ್ಯ.

ಕಿವಿಗಳನ್ನು ಈಯರ್ ಬಡ್ ಗಳಿಂದ ಸ್ವಚ್ಛಗೊಳಿಸುವುದು ಸರಿಯೇ?

ಸಾಮಾನ್ಯವಾಗಿ ಕಿವಿಗಳನ್ನು ಇಯರ್ ಬಡ್ ಅಥವಾ ಇನ್ನಿತರ ಕಡ್ಡಿ, ಕ್ಲಿಪ್ ಗಳಿಂದ ಕಿವಿಗಳನ್ನು ಸ್ವಚ್ಛಗೊಳಿಸಬಾರದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಜೊತೆಗೆ ಬೀದಿ ಬದಿಯ ಕ್ಲೀನರ್‌ಗಳಿಂದ ನಿಮ್ಮ ಕಿವಿಗಳನ್ನು ಸ್ವಚ್ಛಗೊಳಿಸುವುದು ಕೂಡ ಸೂಕ್ತವಲ್ಲ ಎಂದು ಹೇಳುತ್ತಾರೆ. ಏಕೆಂದರೆ ಇಂತಹ ವಸ್ತುಗಳಿಂದ ಕಿವಿ ಸ್ವಚ್ಛವಾಗುವುದಿಲ್ಲ. ಜೊತೆಗೆ ಈ ರೀತಿಯ ಉಪಕರಣಗಳಿಂದ ಕಿವಿಗೆ ಗಾಯವಾದಲ್ಲಿ ಅದರಿಂದ ಕಿವಿಯ ಪದರ ಛಿದ್ರವಾಗಬಹುದು ಮತ್ತು ಇನ್ನಿತರ ಸೋಂಕು ಅಥವಾ ಕೀವು ಬರುವುದಕ್ಕೆ ಕಾರಣವಾಗಬಹುದು. ಆದ್ದರಿಂದ, ಅಪ್ಪಿತಪ್ಪಿಯೂ ಸಹ ಇವುಗಳಿಂದ ಕಿವಿಗಳನ್ನು ಸ್ವಚ್ಛಗೊಳಿಸಬೇಡಿ. ಇದು ಪ್ರಯೋಜನಕಾರಿಯಾಗುವುದಿಲ್ಲ ಅದರ ಬದಲು ಮತ್ತಷ್ಟು ಹಾನಿಕಾರಕವಾಗಬಹುದು. ಕಿವಿಗೆ ಸಂಬಂಧಿಸಿದ ಯಾವುದೇ ರೀತಿಯ ಸಮಸ್ಯೆ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇದನ್ನೂ ಓದಿ: ಮಕ್ಕಳ ಕಿವಿಗೆ ಎಣ್ಣೆ ಹಾಕುವ ಅಭ್ಯಾಸ ನಿಮಗಿದ್ಯಾ, ಇದರಿಂದ ಪ್ರಯೋಜನ ಸಿಗುತ್ತಾ? ಸ್ಟೋರಿಯಲ್ಲಿದೆ ಮಾಹಿತಿ

ಕಿವಿಗಳು ತಾವಾಗಿಯೇ ಸ್ವಚ್ಛಗೊಳಿಸಿಕೊಳ್ಳುತ್ತವೆಯೇ?

ಡಾ. ರವಿ ಅವರು ಹೇಳುವ ಪ್ರಕಾರ, ಕಿವಿಯಲ್ಲಿ ಸ್ವಲ್ಪ ಕೊಳಕು ಇದ್ದರೂ ಕೂಡ ಮೇಣ ತಾನಾಗಿಯೇ ಹೊರಬರುತ್ತದೆ. ಬೆರಳು ಅಥವಾ ಬೆಂಕಿಕಡ್ಡಿಯನ್ನು ಬಳಸುವುದರಿಂದ ಅದು ಒಳಗೆ ಮತ್ತಷ್ಟು ತಳ್ಳಲ್ಪಡುತ್ತದೆ. ಹಾಗಾಗಿ ತೀವ್ರ ಕಿವಿ ನೋವು, ಕಿವಿಯಿಂದ ಸ್ರಾವ ಅಥವಾ ಹಠಾತ್ ಶ್ರವಣ ನಷ್ಟ ಅಥವಾ ತೀವ್ರ ತಲೆನೋವು ಕಂಡುಬಂದರೆ ವೈದ್ಯರ ಸಂಪರ್ಕ ಮಾಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ