AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳ ಕಿವಿಗೆ ಎಣ್ಣೆ ಹಾಕುವ ಅಭ್ಯಾಸ ನಿಮಗಿದ್ಯಾ, ಇದರಿಂದ ಪ್ರಯೋಜನ ಸಿಗುತ್ತಾ? ಸ್ಟೋರಿಯಲ್ಲಿದೆ ಮಾಹಿತಿ

ಮನೆಗಳಲ್ಲಿ ಮಕ್ಕಳನ್ನು ಕೆಲವು ಆರೋಗ್ಯ ಸಮಸ್ಯೆಗಳಿಂದ ರಕ್ಷಿಸಲು ಅನೇಕ ರೀತಿಯ ಮನೆಮದ್ದುಗಳನ್ನು ಉಪಯೋಗ ಮಾಡುತ್ತಾರೆ. ಇವುಗಳಲ್ಲಿ ಕೆಲವು ಪರಿಣಾಮಕಾರಿಯಾಗಿದ್ದರೂ ಕೂಡ ಇನ್ನು ಕೆಲವು ಮಕ್ಕಳ ಆರೋಗ್ಯವನ್ನೇ ಹಾಳು ಮಾಡಬಹುದು. ಇಂತವುಗಳಲ್ಲಿ ಮಗುವಿನ ಕಿವಿಗೆ ಎಣ್ಣೆ ಹಾಕುವ ಪದ್ಧತಿಯೂ ಒಂದು. ಆದರೆ ಇದು ನಿಜವಾಗಿಯೂ ಸರಿಯೇ? ಈ ವಿಧಾನವನ್ನು ಬಹಳ ಸಾಮಾನ್ಯ ಎಂದು ನಾವೆಲ್ಲರೂ ತಿಳಿದುಕೊಂಡಿದ್ದೇವೆ ಆದರೆ, ಇದು ನಿಜವಾಗಿಯೂ ಕಿವಿ ನೋವನ್ನು ಕಡಿಮೆ ಮಾಡುತ್ತದೆಯೇ, ಇದರಿಂದ ಯಾವ ರೀತಿಯ ಪ್ರಯೋಜನಗಳಿವೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮಕ್ಕಳ ಕಿವಿಗೆ ಎಣ್ಣೆ ಹಾಕುವ ಅಭ್ಯಾಸ ನಿಮಗಿದ್ಯಾ, ಇದರಿಂದ ಪ್ರಯೋಜನ ಸಿಗುತ್ತಾ? ಸ್ಟೋರಿಯಲ್ಲಿದೆ ಮಾಹಿತಿ
Ear Infection & Oil Drops What Parents Must KnowImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Jan 28, 2026 | 3:12 PM

Share

ಸಾಮಾನ್ಯವಾಗಿ ಆಯುರ್ವೇದ ಪದ್ಧತಿಗಳನ್ನು ಅನುಸರಿಸುತ್ತೇವೆ ಎಂದು ಅನೇಕ ಪೋಷಕರು ಮಕ್ಕಳ ಆರೋಗ್ಯ ಹಾಳು ಮಾಡುವ ಮನೆಮದ್ದುಗಳನ್ನು (Home Remedy) ಪ್ರಯತ್ನಿಸುತ್ತಾರೆ. ಇವುಗಳಲ್ಲಿ ಮಗುವಿನ ಕಿವಿಗೆ ಎಣ್ಣೆ ಹಾಕುವ ಪದ್ಧತಿಯೂ ಒಂದು. ಗ್ರಾಮೀಣ ಭಾಗದಲ್ಲಿ ಮಾತ್ರವಲ್ಲದೆ ನಗರಗಳಲ್ಲಿಯೂ ಈ ಒಂದು ವಿಧಾನವನ್ನು ಅನುಸರಿಸುವ ಪಾಲಕರಿದ್ದಾರೆ. ಈ ಮನೆಮದ್ದುಗಳನ್ನು ಪ್ರಯತ್ನಿಸುವುದರ ಹಿಂದೆ ಹಲವಾರು ಕಾರಣಗಳಿರಬಹುದು. ಮಕ್ಕಳಿಗೆ ಕಿವಿ ನೋವು (ear pain) ಬಂದಾಗ, ಪೋಷಕರು ಮಗುವಿನ ಕಿವಿಗೆ ಕೆಲವು ಹನಿ ಸಾಸಿವೆ ಎಣ್ಣೆಯನ್ನು ಹಾಕುತ್ತಾರೆ. ಜೊತೆಗೆ ಮೇಣದ ಶೇಖರಣೆ ಆದಾಗಲೂ ಕೂಡ ಮಕ್ಕಳ ಕಿವಿಗೆ ಎಣ್ಣೆ ಹಾಕುತ್ತಾರೆ. ಇದು ಬಹಳ ಸಾಮಾನ್ಯ ಎಂದು ನಾವೆಲ್ಲರೂ ತಿಳಿದುಕೊಂಡಿದ್ದೇವೆ ಆದರೆ, ಇದು ನಿಜವಾಗಿಯೂ ಕಿವಿ ನೋವನ್ನು ಕಡಿಮೆ ಮಾಡುತ್ತದೆಯೇ, ಇದರಿಂದ ಯಾವ ರೀತಿಯ ಪ್ರಯೋಜನಗಳಿವೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿನ ಇಎನ್‌ಟಿ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ರವಿ ಮೆಹರ್ ಹೇಳುವ ಪ್ರಕಾರ, ಮಗುವಿಗೆ ಕಿವಿ ನೋವು ಇದ್ದರೆ, ಅದಕ್ಕೆ ಸೋಂಕು ಕಾರಣವಾಗಿರಬಹುದು ಅಥವಾ ಬೇರೆ ಯಾವುದಾದರೂ ಸಮಸ್ಯೆಯೂ ಕಾರಣವಾಗಿರಬಹುದು. ಇಂತಹ ಪರಿಸ್ಥಿತಿಯಲ್ಲಿ ನೀವು ಅವರ ಕಿವಿಗೆ ಎಂದಿಗೂ ಎಣ್ಣೆ ಹಾಕಬಾರದು. ಏಕೆಂದರೆ ಈ ಒಂದು ಅಭ್ಯಾಸ ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸಬಹುದು. ಎಣ್ಣೆ ಹಾಕುವುದರಿಂದ ಸೋಂಕು ಗುಣವಾಗುವುದಿಲ್ಲ ಅಥವಾ ನೋವು ಕಡಿಮೆಯಾಗುವುದಿಲ್ಲ. ಎಣ್ಣೆ ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಜೊತೆಗೆ ನೋವು, ಊತ ಅಥವಾ ಸುಡುವಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಅಷ್ಟೇ ಅಲ್ಲ, ಕಿವಿಯಿಂದ ಕೀವು ಅಥವಾ ನೀರು ಬರುತ್ತಿದ್ದಾಗ ಎಣ್ಣೆ ಹಾಕಬಾರದು. ಮಗುವಿಗೆ ಶೀತ ಅಥವಾ ಜ್ವರ ಇದ್ದಾಗ, ಕಿವಿ ನೋವು ಬರಬಹುದು. ಹಾಗಾಗಿ ಈ ರೀತಿಯಾದಾಗ ಮೊದಲು ವೈದ್ಯರ ಸಲಹೆ ಪಡೆಯಬೇಕು.

ಇದನ್ನೂ ಓದಿ: ಕಿವಿ ನೋವು ಬಂದರೆ ನಿರ್ಲಕ್ಷಿಸದಿರಿ, ಇದು ಹೃದಯಾಘಾತದ ಲಕ್ಷಣ

ಕಿವಿ ನೋವು ಬಂದಾಗ ಏನು ಮಾಡಬೇಕು?

ಮಗುವಿಗೆ ಕಿವಿ ನೋವು ಅಥವಾ ಇನ್ನಾವುದೇ ಸಮಸ್ಯೆ ಇದ್ದರೆ, ಇಎನ್‌ಟಿ ವೈದ್ಯರನ್ನು ಭೇಟಿ ಮಾಡುವುದು ಬಹಳ ಉತ್ತಮ. ಮನೆಮದ್ದುಗಳನ್ನು ಪ್ರಯತ್ನಿಸುವುದು ಗಂಭೀರ ಹಾನಿಯನ್ನುಂಟುಮಾಡಬಹುದು. ನೀವು ಕಿವಿಯನ್ನು ಸ್ವಚ್ಛಗೊಳಿಸಬೇಕಾದರೆ, ಇಯರ್‌ಬಡ್ ಬಳಸಿ, ಆದರೆ ಅದನ್ನು ತುಂಬಾ ಆಳವಾಗಿ ಹಾಕಬಾರದು ಎಂಬುದನ್ನು ಮರೆಯಬೇಡಿ. ಅಲ್ಲದೆ, ವೈದ್ಯರ ಮಾರ್ಗದರ್ಶನವಿಲ್ಲದೆ ಮಕ್ಕಳ ಕಿವಿಗೆ ಡ್ರಾಪ್ಸ್ ಹಾಕಬೇಡಿ. ಮಗುವಿಗೆ ಕಿವಿ ಸಮಸ್ಯೆ ಇದ್ದರೆ, ಅವರು ಪದೇ ಪದೇ ಅಳುತ್ತಾರೆ ಅಥವಾ ಕಿವಿ ಹಿಡಿದುಕೊಳ್ಳುತ್ತಾರೆ. ಜೊತೆಗೆ ಅವರಿಗೆ ಶ್ರವಣ ಸಮಸ್ಯೆ ಕೂಡ ಇರಬಹುದು. ಇಂತಹ ಸಮಯದಲ್ಲಿ ಮಕ್ಕಳ ವೈದ್ಯರು ಅಥವಾ ತಜ್ಞರ ಸಲಹೆಯ ಮೇರೆಗೆ ಔಷಧಿ ನೀಡಿ ಅವರ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹಳ ಅವಶ್ಯಕ. ಇದೆಲ್ಲದರ ಜೊತೆಗೆ ಮಗು ಸ್ನಾನ ಮಾಡುವಾಗ, ನೀರು ಅಥವಾ ಸೋಪ್ ಆಕಸ್ಮಿಕವಾಗಿ ಕಿವಿಗೆ ಹೋಗದಂತೆ ನೋಡಿಕೊಳ್ಳಿ. ಶೀತ ವಾತಾವರಣದಲ್ಲಿ, ಮಗುವಿನ ಕಿವಿಗಳನ್ನು ಆದಷ್ಟು ಬೆಚ್ಚಗಿಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ