Warning Signs of a Heart Attack: ಕಿವಿ ನೋವು ಬಂದರೆ ನಿರ್ಲಕ್ಷಿಸದಿರಿ, ಇದು ಹೃದಯಾಘಾತದ ಲಕ್ಷಣ
ಹೃದಯಾಘಾತಕ್ಕೆ ಮೊದಲು ದೇಹವು ನಮಗೆ ಕೆಲವು ಸಂಕೇತಗಳನ್ನು ನೀಡುತ್ತದೆ. ಅನೇಕ ಜನರು ಇದನ್ನು ನಿರ್ಲಕ್ಷಿಸುತ್ತಾರೆ. ಇದರಿಂದ ಸಮಸ್ಯೆ ಮತ್ತಷ್ಟು ಜಟಿಲವಾಗುತ್ತದೆ. ಜೀವ ಹೋಗುವ ಅಪಾಯ ಹೆಚ್ಚಾಗುತ್ತದೆ. ಹೃದಯಾಘಾತ ಇದ್ದಕ್ಕಿದ್ದಂತೆ ಬರಬಹುದು. 2 ರಿಂದ 3 ನಿಮಿಷಗಳಲ್ಲಿ ನೋವು ವೇಗವಾಗಿ ಹೆಚ್ಚಾಗುತ್ತದೆ. ನೋವು ಬಲ, ಎಡ, ಎದೆಯ ಮಧ್ಯ, ದವಡೆ ಅಥವಾ ಎಡಗೈ ಭಾಗದಲ್ಲಿಯೂ ಬರಬಹುದು. ಅದಲ್ಲದೆ ಇತ್ತೀಚಿನ ಹೊಸ ಅಧ್ಯಯನವೊಂದು ಈ ಸೈಲೆಂಟ್ ಕಿಲ್ಲರ್ ಹೃದಯಾಘಾತದ ರೋಗಲಕ್ಷಣಗಳ ಬಗ್ಗೆ ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದೆ. ಕಿವಿಗಳಲ್ಲಿ ನೋವು ಕೂಡ ಹೃದಯಾಘಾತದ ಲಕ್ಷಣಗಳಲ್ಲಿ ಒಂದಾಗಿರಬಹುದು ಎಂದು ಅದು ಹೇಳುತ್ತದೆ.
ವಿಶ್ವದಾದ್ಯಂತ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿವೆ. ಭಾರತದಲ್ಲಿಯೂ ಈ ಸಮಸ್ಯೆಯಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದು ಏನೇ ಇರಲಿ ಹೃದಯಾಘಾತಕ್ಕೆ ಮೊದಲು ದೇಹವು ನಮಗೆ ಕೆಲವು ಸಂಕೇತಗಳನ್ನು ನೀಡುತ್ತದೆ. ಅನೇಕ ಜನರು ಇದನ್ನು ನಿರ್ಲಕ್ಷಿಸುತ್ತಾರೆ. ಇದರಿಂದ ಸಮಸ್ಯೆ ಮತ್ತಷ್ಟು ಜಟಿಲವಾಗುತ್ತದೆ. ಜೀವ ಹೋಗುವ ಅಪಾಯ ಹೆಚ್ಚಾಗುತ್ತದೆ. ಹೃದಯಾಘಾತ ಇದ್ದಕ್ಕಿದ್ದಂತೆ ಬರಬಹುದು. 2 ರಿಂದ 3 ನಿಮಿಷಗಳಲ್ಲಿ ನೋವು ವೇಗವಾಗಿ ಹೆಚ್ಚಾಗುತ್ತದೆ. ನೋವು ಬಲ, ಎಡ, ಎದೆಯ ಮಧ್ಯ, ದವಡೆ ಅಥವಾ ಎಡಗೈ ಭಾಗದಲ್ಲಿಯೂ ಬರಬಹುದು. ಅದಲ್ಲದೆ ಇತ್ತೀಚಿನ ಹೊಸ ಅಧ್ಯಯನವೊಂದು ಈ ಸೈಲೆಂಟ್ ಕಿಲ್ಲರ್ ಹೃದಯಾಘಾತದ ರೋಗಲಕ್ಷಣಗಳ ಬಗ್ಗೆ ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದೆ. ಕಿವಿಗಳಲ್ಲಿ ನೋವು ಕೂಡ ಹೃದಯಾಘಾತದ ಲಕ್ಷಣಗಳಲ್ಲಿ ಒಂದಾಗಿರಬಹುದು ಎಂದು ಅದು ಹೇಳುತ್ತದೆ.
ಅಮೆರಿಕನ್ ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫಾರ್ಮೇಶನ್ (ಎನ್ಸಿಬಿಐ) ಪ್ರಕಟಿಸಿದ ಸಂಶೋಧನೆಯ ಪ್ರಕಾರ, ಕಿವಿಯಲ್ಲಿ ನೋವು ಮತ್ತು ಕಿವಿ ಭಾರವಾಗುವುದು ಹೃದಯಾಘಾತದ ಲಕ್ಷಣವಾಗಿರಬಹುದು. ಈ ಅಧ್ಯಯನದ ಪ್ರಕಾರ. ಹೃದಯಾಘಾತದ ಸಮಯದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯು ಹೃದಯದ ರಕ್ತನಾಳಗಳಲ್ಲಿ ತಡೆಯನ್ನು ಉಂಟುಮಾಡುವುದಲ್ಲದೆ, ಈ ಹೆಪ್ಪುಗಟ್ಟುವಿಕೆಗಳು ಕಿವಿಯ ರಕ್ತನಾಳಗಳನ್ನು ಸಹ ತಲುಪಬಹುದು. ಇದು ಕಿವಿ ನೋವು, ತೂಕ ಅಥವಾ ಶ್ರವಣ ನಷ್ಟದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಹೇಳಿದೆ.
500 ರೋಗಿಗಳ ಮೇಲೆ ಸಂಶೋಧನೆ:
ಸಂಶೋಧಕರು 500 ಕ್ಕೂ ಹೆಚ್ಚು ಜನರ ಮೇಲೆ ಅಧ್ಯಯನ ಮಾಡಿದ್ದಾರೆ. ಹೃದಯಾಘಾತಕ್ಕೆ ಒಳಗಾದ 12% ರೋಗಿಗಳು ಕಿವಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರುವುದು ಕಂಡು ಬಂದಿದೆ. ಇವರಲ್ಲಿ ಅನೇಕರಿಗೆ ಕಿವಿಗಳಲ್ಲಿ ನೋವು ಕಂಡು ಬಂದಿದೆ. ಇನ್ನು ಕೆಲವರಿಗೆ ಕಿವಿ ಭಾರವಾಗುವುದು ಅಥವಾ ಶ್ರವಣ ನಷ್ಟದಂತಹ ಸಮಸ್ಯೆಗಳು ಕಂಡು ಬಂದಿದೆ. ಈ ಅಧ್ಯಯನದ ಸಂಶೋಧಕ ಡಾ. ಡೇವಿಡ್ ಮಿಲ್ಲರ್ ಹೇಳುವ ಪ್ರಕಾರ, “ಕಿವಿಯಲ್ಲಿ ನೋವು ಕಂಡುಬರುವುದು ಹೃದಯಾಘಾತದ ಸಂಭಾವ್ಯ ಲಕ್ಷಣವಾಗಿರಬಹುದು. ಇದು ಸ್ಪಷ್ಟ ಕಾರಣವಿಲ್ಲದೆ ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ. ಆದರೆ, ಕಿವಿ ನೋವು ಅಥವಾ ಕಿವಿ ಭಾರವಾಗುವುದು ಕೇವಲ ಹೃದಯಾಘಾತದ ಸಂಕೇತವಲ್ಲ. ಇದು ಕಿವಿ ಸೋಂಕು, ಸೈನಸ್ ಅಥವಾ ಮೈಗ್ರೇನ್ ನಂತಹ ಇತರ ಸಮಸ್ಯೆಗಳ ಲಕ್ಷಣವೂ ಆಗಿರಬಹುದು. ಆದ್ದರಿಂದ, ನಿಖರವಾದ ಕಾರಣವನ್ನು ಕಂಡುಹಿಡಿಯಲು ವೈದ್ಯರನ್ನು ಸಂಪರ್ಕಿಸುವುದು ಅವಶ್ಯಕ. ಕೆಲವೊಮ್ಮೆ ಹೃದಯಾಘಾತಕ್ಕೆ ಸಾಮಾನ್ಯ ಲಕ್ಷಣವಾದ ಎದೆ ನೋವು ಅಥವಾ ಉಸಿರಾಟದ ಸಮಸ್ಯೆಗಳಂತಹ ರೋಗಲಕ್ಷಣಗಳು ಕಂಡು ಬರದಿರಬಹುದು ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ. ಹಾಗಾಗಿ ಕಿವಿ ನೋವು ಕಂಡು ಬಂದರೆ ಅದನ್ನು ನಿರ್ಲಕ್ಷ ಮಾಡದೆಯೇ ಆ ಬಗ್ಗೆ ಗಮನ ಹರಿಸುವುದು ಅವಶ್ಯಕ. ವಿಶೇಷವಾಗಿ ವಯಸ್ಸಾದವರಲ್ಲಿ ಅಥವಾ ಮಧುಮೇಹ ರೋಗಿಗಳಲ್ಲಿ, ಇದು ಹೃದಯಾಘಾತದ ಸಂಕೇತವಾಗಿದೆ” ಎಂದು ಹೇಳಿದ್ದಾರೆ. ಅದಲ್ಲದೆ ಡಾ. ಮಿಲ್ಲರ್ ಅವರು ಹೃದಯಾಘಾತದ ಬಗ್ಗೆ ಜಾಗೃತಿ ಮೂಡಿಸಬೇಕು ಮತ್ತು ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗುವಂತೆ ಮೂಲ ರೋಗಲಕ್ಷಣಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ:
ಹೃದಯಾಘಾತದ ಲಕ್ಷಣಗಳು ಯಾವುವು?
ಹೃದಯದಲ್ಲಿ ಹಠಾತ್ ನೋವು, ಎದೆಯಲ್ಲಿ ನೋವು ಮತ್ತು ಬಿಗಿತ, ದವಡೆಯಿಂದ ಕುತ್ತಿಗೆ ಭಾಗದಲ್ಲಿ ತೀವ್ರವಾದ ನೋವು, ಹಠಾತ್ ತಲೆ ತಿರುಗುವಿಕೆ, ವಾಕರಿಕೆ, ದೇಹದಾದ್ಯಂತ ಬೆವರುವುದು ಬಳಿಕ ತಣ್ಣಗಾಗುತ್ತದೆ, ಉಸಿರಾಡಲು ತೊಂದರೆಯಾಗುವುದು, ಹೃದಯ ಬಡಿತ ವೇಗವಾಗುವುದು, ಹೊಟ್ಟೆಯಲ್ಲಿ ಅಸ್ವಸ್ಥತೆಯಂತಹ ರೋಗಲಕ್ಷಣಗಳನ್ನು ಕಾಣಬಹುದು.