AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ಲಾಸ್ಟಿಕ್ ಪ್ಯಾಕೆಟ್​​​ನಲ್ಲಿರುವ ಆಹಾರ ಸೇವಿಸುತ್ತಿದ್ದೀರಾ? ಈ ಕ್ಯಾನ್ಸರ್ ಬರುವುದು ಖಚಿತ

ಮಕ್ಕಳ ಚಿಪ್ಸ್ ನಿಂದ ಹಿಡಿದು ಹಾಲಿನ ಪ್ಯಾಕೆಟ್ ಗಳು, ಬ್ರೆಡ್ ಹೀಗೆ ವಿವಿಧ ರೀತಿಯ ಆಹಾರಗಳು ಪ್ಲಾಸ್ಟಿಕ್ ಕವರ್ ಅಥವಾ ಕೊಟ್ಟೆಗಳಲ್ಲಿ ಬರುತ್ತದೆ. ಆದರೆ ಈ ರೀತಿಯ ಪ್ಲಾಸ್ಟಿಕ್ ನಲ್ಲಿ ಬರುವ ಆಹಾರ ನಮ್ಮ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಎಂಬುದು ನಿಮಗೆ ತಿಳಿದಿದೆಯೇ? ಈ ಬಗ್ಗೆ ಹಲವಾರು ರೀತಿಯ ಅಧ್ಯಯನಗಳು ನಡೆದಿದ್ದು, ಇತ್ತೀಚಿಗೆ ನಡೆದ ಒಂದು ಸಂಶೋಧನೆಯ ಪ್ರಕಾರ, ಪ್ಲಾಸ್ಟಿಕ್ ನಲ್ಲಿ ಬರುವ ಆಹಾರಗಳಲ್ಲಿ ಅನೇಕ ರೀತಿಯ ರಾಸಾಯನಿಕಗಳಿವೆ. ಅವು ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ ಎಂಬ ಆಘಾತಕಾರಿ ಸುದ್ದಿಯನ್ನು ಬಹಿರಂಗಪಡಿಸಿದೆ.

ಪ್ಲಾಸ್ಟಿಕ್ ಪ್ಯಾಕೆಟ್​​​ನಲ್ಲಿರುವ ಆಹಾರ ಸೇವಿಸುತ್ತಿದ್ದೀರಾ? ಈ ಕ್ಯಾನ್ಸರ್ ಬರುವುದು ಖಚಿತ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on:Oct 03, 2024 | 4:58 PM

Share

ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ಅಡುಗೆ ಮಾಡುವುದಕ್ಕಿಂತ ಹೆಚ್ಚು ಹೊರಗಿನಿಂದ ಆಹಾರವನ್ನು ಆರ್ಡರ್ ಮಾಡುವುದು ಹೆಚ್ಚಾಗಿದೆ. ಇದರ ಪರಿಣಾಮವಾಗಿ, ನಮ್ಮ ಮನೆಗಳಿಗೆ ಬರುವ ಶೇಕಡಾ 80 ರಷ್ಟು ಆಹಾರ ಪದಾರ್ಥಗಳು ಪ್ಲಾಸ್ಟಿಕ್ ಪ್ಯಾಕೆಟ್ ಗಳಲ್ಲಿ ಬರುತ್ತವೆ. ಮಕ್ಕಳ ಚಿಪ್ಸ್ ನಿಂದ ಹಿಡಿದು ಹಾಲಿನ ಪ್ಯಾಕೆಟ್ ಗಳು, ಬ್ರೆಡ್ ಹೀಗೆ ವಿವಿಧ ರೀತಿಯ ಆಹಾರಗಳು ಪ್ಲಾಸ್ಟಿಕ್ ಕವರ್ ಅಥವಾ ಕೊಟ್ಟೆಗಳಲ್ಲಿ ಬರುತ್ತದೆ. ಆದರೆ ಈ ರೀತಿಯ ಪ್ಲಾಸ್ಟಿಕ್ ನಲ್ಲಿ ಬರುವ ಆಹಾರ ನಮ್ಮ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಎಂಬುದು ನಿಮಗೆ ತಿಳಿದಿದೆಯೇ? ಈ ಬಗ್ಗೆ ಹಲವಾರು ಅಧ್ಯಯನಗಳು ನಡೆದಿದ್ದು, ಇತ್ತೀಚಿಗೆ ನಡೆದ ಒಂದು ಸಂಶೋಧನೆಯ ಪ್ರಕಾರ, ಪ್ಲಾಸ್ಟಿಕ್ ನಲ್ಲಿ ಬರುವ ಆಹಾರಗಳಲ್ಲಿ ಅನೇಕ ರೀತಿಯ ರಾಸಾಯನಿಕಗಳಿವೆ. ಅವು ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ ಎಂಬ ಆಘಾತಕಾರಿ ಸುದ್ದಿಯನ್ನು ಬಹಿರಂಗಪಡಿಸಿದೆ.

ಅಧ್ಯಯನ ಏನು ಹೇಳುತ್ತದೆ?

ಪ್ಲಾಸ್ಟಿಕ್ ಪ್ಯಾಕೆಟ್ ನಲ್ಲಿ ಬರುವ ಆಹಾರಗಳಲ್ಲಿ 200 ರೀತಿಯ ರಾಸಾಯನಿಕಗಳು ಕಂಡು ಬಂದಿದ್ದು, ಅವು ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. ಆರೋಗ್ಯದ ದೃಷ್ಟಿಯಿಂದ ಇವುಗಳನ್ನು ನಿಮ್ಮ ಆಹಾರಗಳಲ್ಲಿ ಸೇರಿಸಿಕೊಳ್ಳದಿರುವುದು ಉತ್ತಮ ಎಂದು ಸಂಶೋಧಕರ ಅಭಿಪ್ರಾಯವಾಗಿದೆ. ಈ ಹಾನಿಕಾರಕ ರಾಸಾಯನಿಕಗಳು ಹತ್ತಾರು ಆಹಾರದ ಮೂಲಕ ನಮ್ಮ ದೇಹವನ್ನು ಪ್ರವೇಶಿಸುತ್ತಿವೆ. ಫುಡ್ ಪ್ಯಾಕೇಜಿಂಗ್ ಫೋರಂನ ಸಂಶೋಧಕರು ನಡೆಸಿದ ಈ ಅಧ್ಯಯನಗಳು ಆಹಾರಗಳ ಪ್ಯಾಕೇಜಿಂಗ್ ಬಗ್ಗೆ ಕಳವಳ ವ್ಯಕ್ತಪಡಿಸಿವೆ. ಆ ಪ್ಯಾಕೆಟ್ ಗಳಲ್ಲಿ ಇಟ್ಟಿರುವ ಆಹಾರ ಹೆಚ್ಚು ಬಾಳಿಕೆ ಬಂದರೆ, ಅದು ನಮ್ಮ ಆರೋಗ್ಯಕ್ಕೆ ಹೆಚ್ಚು ಹಾನಿಕಾರಕವಾಗಿದೆ. ಅಧ್ಯಯನದ ಲೇಖಕ ಜೇನ್ ಮುಂಕೆ ಅವರ ಪ್ರಕಾರ, ಸ್ತನ ಕ್ಯಾನ್ಸರ್ ಗೆ ಕಾರಣವಾಗುವ 76 ರೀತಿಯ ರಾಸಾಯನಿಕಗಳು ಇರುವುದು ಕಂಡು ಬಂದಿದೆ. ಈ ಕ್ಯಾನ್ಸರ್ ಪ್ರಕರಣಗಳನ್ನು ತಡೆಗಟ್ಟಲು ಆಹಾರ ಪ್ಯಾಕೆಟ್ ಗಳಿಂದ ಅಂತಹ ಹಾನಿಕಾರಕ ರಾಸಾಯನಿಕಗಳನ್ನು ತೆಗೆಯಲು ಸೂಚಿಸಲಾಗಿದೆ.

ಇದನ್ನೂ ಓದಿ: ರಕ್ತ ಶುದ್ಧೀಕರಿಸಲು ಈ ಆಹಾರಗಳನ್ನು ಸೇವನೆ ಮಾಡಿ

ಆದ್ದರಿಂದ ಪ್ಲಾಸ್ಟಿಕ್ ಪಾತ್ರೆಗಳು ಅಥವಾ ಪ್ಲಾಸ್ಟಿಕ್ ಪ್ಯಾಕೆಟ್ ಗಳಲ್ಲಿ ಆಹಾರವನ್ನು ಬಿಸಿ ಮಾಡಬೇಡಿ. ಈ ತಾಪನದಿಂದಾಗಿ, ಪ್ಲಾಸ್ಟಿಕ್ ನಲ್ಲಿರುವ ರಾಸಾಯನಿಕಗಳು ಆಹಾರದಲ್ಲಿ ಬೆರೆಯುತ್ತದೆ. ಪರ್ಫ್ಲೋರೋಸಿಲ್ ಮತ್ತು ಪಾಲಿಫ್ಲೋರೋಸಿಲ್ ಎಂಬ ರಾಸಾಯನಿಕ ಅಂಶಗಳು ಆಹಾರ ಪ್ಯಾಕೆಟ್ ನಲ್ಲಿ ಕಂಡು ಬರುವ ರಾಸಾಯನಿಕಗಳಾಗಿವೆ. ಅವು ಹೆಚ್ಚಿನ ಕೊಲೆಸ್ಟ್ರಾಲ್, ಕ್ಯಾನ್ಸರ್ ಮತ್ತು ಹೃದ್ರೋಗಕ್ಕೆ ಕಾರಣವಾಗಬಹುದು. ಪ್ಲಾಸ್ಟಿಕ್ ಪ್ಯಾಕೆಟ್ ಅಗ್ಗವಾಗಿದ್ದು ಬಾಳಿಕೆ ಬರುತ್ತದೆ, ಆದರೆ ಇದು ಹಾನಿಕಾರಕ ರಾಸಾಯನಿಕಗಳನ್ನು ಹೊಂದಿರುತ್ತದೆ. ಅದಕ್ಕಾಗಿಯೇ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಗಾಜು ಅಥವಾ ಸ್ಟೀಲ್ ಪಾತ್ರೆಗಳನ್ನು ಮಾತ್ರ ಬಳಸಿ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಮಹಿಳೆಯರಲ್ಲಿ ಹೆಚ್ಚುತ್ತಿದೆ ಸ್ತನ ಕ್ಯಾನ್ಸರ್

ಬೊಜ್ಜು, ಆಲ್ಕೋಹಾಲ್, ಸಿಗರೇಟ್ ಬಳಕೆ, ದೈಹಿಕ ಚಟುವಟಿಕೆಯ ಕೊರತೆ, ಅನಾರೋಗ್ಯಕರ ಜೀವನಶೈಲಿ ಮುಂತಾದ ಅನೇಕ ಅಂಶಗಳು ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತಿವೆ. ಇಂದು ಸ್ತನ ಕ್ಯಾನ್ಸರ್ ಮಹಿಳೆಯರ ಸಾವಿಗೆ ಎರಡನೇ ಅತಿದೊಡ್ಡ ಕಾರಣವಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:22 pm, Thu, 3 October 24

ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ