Blood Purification: ರಕ್ತ ಶುದ್ಧೀಕರಿಸಲು ಈ ಆಹಾರಗಳನ್ನು ಸೇವನೆ ಮಾಡಿ
ರಕ್ತವು ದೇಹದ ಪ್ರತಿಯೊಂದು ಭಾಗಕ್ಕೂ ಆಮ್ಲಜನಕ ಮಾತ್ರವಲ್ಲ, ರಕ್ತವು ಪ್ರೋಟೀನ್, ಕೊಬ್ಬುಗಳು, ಕಾರ್ಬೋಹೈಡ್ರೇಟ್ ಮತ್ತು ಹಾರ್ಮೋನುಗಳನ್ನು ಸಹ ಸಾಗಿಸುತ್ತದೆ. ಇದು ದೇಹದ ಪಿಎಚ್ ಸಮತೋಲನವನ್ನು ಕಾಪಾಡುತ್ತದೆ, ಜೊತೆಗೆ ಉಷ್ಣತೆಯನ್ನು ಸಹ ನಿಯಂತ್ರಿಸುತ್ತದೆ. ಆದ್ದರಿಂದ ರಕ್ತವನ್ನು ಸರಿಯಾಗಿ ಶುದ್ಧೀಕರಿಸದಿದ್ದರೆ, ವಿವಿಧ ರೀತಿಯ ದೈಹಿಕ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅಲ್ಲದೆ ಚರ್ಮ, ಮೂತ್ರಪಿಂಡ, ಹೃದಯ, ಯಕೃತ್ತು ಮತ್ತು ಶ್ವಾಸಕೋಶಗಳಲ್ಲಿ ನಾನಾರೀತಿಯ ಸಮಸ್ಯೆಗಳು ಉಂಟಾಗುತ್ತವೆ. ರಕ್ತದಿಂದ ವಿಷವನ್ನು ತೆಗೆಯಲು ಸಾಕಷ್ಟು ನೀರು ಕುಡಿಯುವುದರ ಜೊತೆಗೆ ಕೆಲವು ಪ್ರಮುಖ ಆಹಾರಗಳನ್ನು ಸಹ ಸೇವನೆ ಮಾಡಬೇಕು. ಇವು ಕೊಲೆಸ್ಟ್ರಾಲ್ ಮಟ್ಟವನ್ನು ಸಹ ನಿಯಂತ್ರಿಸುತ್ತವೆ.
ಆರೋಗ್ಯವಾಗಿರಲು ನಮ್ಮ ದೇಹದ ಎಲ್ಲಾ ಭಾಗಗಳು ಕೂಡ ಸರಿಯಾಗಿ ಕಾರ್ಯನಿರ್ವಹಿಸಬೇಕು. ರಕ್ತ ಪೂರೈಕೆ ಸರಿಯಾಗಿ ಇದ್ದಾಗ ಮಾತ್ರ ಇದು ಸಾಧ್ಯವಾಗುತ್ತದೆ. ರಕ್ತವು ದೇಹದ ಪ್ರತಿಯೊಂದು ಭಾಗಕ್ಕೂ ಆಮ್ಲಜನಕ ಮಾತ್ರವಲ್ಲ, ರಕ್ತವು ಪ್ರೋಟೀನ್, ಕೊಬ್ಬುಗಳು, ಕಾರ್ಬೋಹೈಡ್ರೇಟ್ ಮತ್ತು ಹಾರ್ಮೋನುಗಳನ್ನು ಸಹ ಸಾಗಿಸುತ್ತದೆ. ಇದು ದೇಹದ ಪಿಎಚ್ ಸಮತೋಲನವನ್ನು ಕಾಪಾಡುತ್ತದೆ, ಜೊತೆಗೆ ಉಷ್ಣತೆಯನ್ನು ಸಹ ನಿಯಂತ್ರಿಸುತ್ತದೆ. ಆದ್ದರಿಂದ ರಕ್ತವನ್ನು ಸರಿಯಾಗಿ ಶುದ್ಧೀಕರಿಸದಿದ್ದರೆ, ವಿವಿಧ ರೀತಿಯ ದೈಹಿಕ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅಲ್ಲದೆ ಚರ್ಮ, ಮೂತ್ರಪಿಂಡ, ಹೃದಯ, ಯಕೃತ್ತು ಮತ್ತು ಶ್ವಾಸಕೋಶಗಳಲ್ಲಿ ನಾನಾರೀತಿಯ ಸಮಸ್ಯೆಗಳು ಉಂಟಾಗುತ್ತವೆ. ರಕ್ತದಿಂದ ವಿಷವನ್ನು ತೆಗೆಯಲು ಸಾಕಷ್ಟು ನೀರು ಕುಡಿಯುವುದರ ಜೊತೆಗೆ ಕೆಲವು ಪ್ರಮುಖ ಆಹಾರಗಳನ್ನು ಸಹ ಸೇವನೆ ಮಾಡಬೇಕು. ಇವು ಕೊಲೆಸ್ಟ್ರಾಲ್ ಮಟ್ಟವನ್ನು ಸಹ ನಿಯಂತ್ರಿಸುತ್ತವೆ.
ನಿಂಬೆ ರಸ
ಇದರ ರಸವು, ರಕ್ತ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ನಿಂಬೆಯಲ್ಲಿರುವ ಆಮ್ಲೀಯ ಗುಣಲಕ್ಷಣಗಳು ದೇಹದಲ್ಲಿನ ಪಿಎಚ್ ಮಟ್ಟವನ್ನು ಸಮತೋಲನಗೊಳಿಸುತ್ತವೆ. ದೇಹದಿಂದ ವಿಷವನ್ನು ಹೊರಹಾಕುತ್ತದೆ. ಹಾಗಾಗಿ ನಿಂಬೆ ರಸವನ್ನು ಉಗುರು ಬೆಚ್ಚಗಿನ ನೀರಿನೊಂದಿಗೆ ಬೆರೆಸಿ ಕುಡಿಯಬಹುದು.
ಬೀಟ್ರೂಟ್ ಜ್ಯೂಸ್
ಬೀಟ್ರೂಟ್ ರಕ್ತ ಶುದ್ಧೀಕರಣಕ್ಕೆ ಸಹಾಯ ಮಾಡುತ್ತದೆ. ಈ ತರಕಾರಿ ನಿಮ್ಮ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಮತ್ತು ರಕ್ತವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ಇದು ರಕ್ತದೊತ್ತಡವನ್ನು ಕೂಡ ನಿಯಂತ್ರಣದಲ್ಲಿಡುತ್ತದೆ.
ಅರಿಶಿನ
ಸಾಮಾನ್ಯವಾಗಿ ಅರಿಶಿನ ಪ್ರತಿಯೊಬ್ಬರ ಮನೆಯಲ್ಲಿಯೂ ಇರುತ್ತದೆ. ಇದು ರಕ್ತವನ್ನು ಶುದ್ಧೀಕರಿಸುತ್ತದೆ. ಉರಿಯೂತದ ವಿರುದ್ಧ ಹೋರಾಡುತ್ತದೆ. ಯಕೃತ್ತಿನ ಕಾರ್ಯವನ್ನು ಹೆಚ್ಚಿಸುತ್ತದೆ. ಹಾಲಿನಲ್ಲಿ ಅರಿಶಿನ ಬೆರೆಸಿ ಕುಡಿಯುವುದು ದೇಹಕ್ಕೆ ಒಳ್ಳೆಯದು. ಇದಲ್ಲದೆ, ದೈನಂದಿನ ಅಡುಗೆಯಲ್ಲಿಯೂ ಅರಿಶಿನ ಉಪಯೋಗಿಸುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು.
ಬೆಳ್ಳುಳ್ಳಿ
ಕೆಲವರಿಗೆ ಇದರ ಪರಿಮಳ ಇಷ್ಟವಾಗುವುದಿಲ್ಲ. ಹಾಗಾಗಿ ಕೆಲವರು ಹಸಿ ಬೆಳ್ಳುಳ್ಳಿ ತಿನ್ನಲು ಹಿಂಜರಿಯುತ್ತಾರೆ. ಆದರೆ ಬೆಳ್ಳುಳ್ಳಿ ಯಕೃತ್ತು ಮತ್ತು ರಕ್ತವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ರಕ್ತವನ್ನು ಶುದ್ಧೀಕರಿಸುತ್ತವೆ ಮತ್ತು ಕರುಳಿನ ಆರೋಗ್ಯವನ್ನು ಸುಧಾರಿಸುತ್ತವೆ. ಹಸಿ ಬೆಳ್ಳುಳ್ಳಿಯನ್ನು ಪ್ರತಿದಿನ ಅನ್ನದ ಜೊತೆಯಲ್ಲಿ ಸೇವನೆ ಮಾಡಬಹುದು.
ಇದನ್ನೂ ಓದಿ: ಕಿವಿ ನೋವು ಬಂದರೆ ನಿರ್ಲಕ್ಷಿಸದಿರಿ, ಇದು ಹೃದಯಾಘಾತದ ಲಕ್ಷಣ
ಬ್ರೊಕೋಲಿ
ಬ್ರೊಕೋಲಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ತರಕಾರಿಗಳಲ್ಲಿ ಕ್ಯಾಲ್ಸಿಯಂ, ಒಮೆಗಾ -3 ಕೊಬ್ಬಿನಾಮ್ಲಗಳು, ವಿಟಮಿನ್ ಸಿ, ಪೊಟ್ಯಾಸಿಯಮ್, ಮ್ಯಾಂಗನೀಸ್, ರಂಜಕ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಅವು ರಕ್ತವನ್ನು ಶುದ್ಧೀಕರಿಸುತ್ತವೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ