AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

'ಹ್ಯಾಟ್ರಿಕ್' ಹೀರೋ ಸ್ಯಾಮ್ ಕರನ್

‘ಹ್ಯಾಟ್ರಿಕ್’ ಹೀರೋ ಸ್ಯಾಮ್ ಕರನ್

ಝಾಹಿರ್ ಯೂಸುಫ್
|

Updated on:Jan 31, 2026 | 10:09 AM

Share

ಶ್ರೀಲಂಕಾ ಬ್ಯಾಟರ್​ಗಳು ಬೇಗನೆ ಆಲೌಟ್ ಆಗಲು ಮುಖ್ಯ ಕಾರಣ ಸ್ಯಾಮ್ ಕರನ್. 16ನೇ ಓವರ್​ನ ಕೊನೆಯ ಮೂರು ಎಸೆತಗಳಲ್ಲಿ ದಸುನ್ ಶಾನಕ, ಮಹೀಶ್ ತೀಕ್ಷಣ ಹಾಗೂ ಮತೀಶ ಪತಿರಾಣ ವಿಕೆಟ್ ಕಬಳಿಸಿ ಸ್ಯಾಮ್ ಕರನ್ ಹ್ಯಾಟ್ರಿಕ್ ಸಾಧನೆ ಮಾಡಿದರು. ಈ ಮೂಲಕ ಇಂಗ್ಲೆಂಡ್ ಪರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ 2ನೇ ಬೌಲರ್ ಎನಿಸಿಕೊಂಡರು. ಇದಕ್ಕೂ ಮುನ್ನ ಕ್ರಿಸ್ ಜೋರ್ಡನ್ ಇಂಗ್ಲೆಂಡ್ ಪರ ಟಿ20 ಕ್ರಿಕೆಟ್​ನಲ್ಲಿ ಹ್ಯಾಟ್ರಿಕ್ ವಿಕೆಟ್​​ನ ಸಾಧನೆ ಮಾಡಿದ್ದರು.

ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ಬೌಲರ್ ಸ್ಯಾಮ್ ಕರನ್ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ್ದಾರೆ. ಪಲ್ಲೆಕೆಲ್ಲೆ ಸ್ಟೇಡಿಯಂನಲ್ಲಿ ನಡೆದ ಮಳೆಬಾಧಿತ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು 16.2 ಓವರ್​ಗಳಲ್ಲಿ 133 ರನ್​ಗಳಿಸಿ ಆಲೌಟ್ ಆಯಿತು.

ಹೀಗೆ ಲಂಕಾ ಬ್ಯಾಟರ್​ಗಳು ಬೇಗನೆ ಆಲೌಟ್ ಆಗಲು ಮುಖ್ಯ ಕಾರಣ ಸ್ಯಾಮ್ ಕರನ್. 16ನೇ ಓವರ್​ನ ಕೊನೆಯ ಮೂರು ಎಸೆತಗಳಲ್ಲಿ ದಸುನ್ ಶಾನಕ, ಮಹೀಶ್ ತೀಕ್ಷಣ ಹಾಗೂ ಮತೀಶ ಪತಿರಾಣ ವಿಕೆಟ್ ಕಬಳಿಸಿ ಸ್ಯಾಮ್ ಕರನ್ ಹ್ಯಾಟ್ರಿಕ್ ಸಾಧನೆ ಮಾಡಿದರು. ಈ ಮೂಲಕ ಇಂಗ್ಲೆಂಡ್ ಪರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ 2ನೇ ಬೌಲರ್ ಎನಿಸಿಕೊಂಡರು. ಇದಕ್ಕೂ ಮುನ್ನ ಕ್ರಿಸ್ ಜೋರ್ಡನ್ ಇಂಗ್ಲೆಂಡ್ ಪರ ಟಿ20 ಕ್ರಿಕೆಟ್​ನಲ್ಲಿ ಹ್ಯಾಟ್ರಿಕ್ ವಿಕೆಟ್​​ನ ಸಾಧನೆ ಮಾಡಿದ್ದರು.

ಇನ್ನು ಡಕ್​ವರ್ತ್ ಲೂಯಿಸ್ ನಿಯಮದ ಪ್ರಕಾರ, ಈ ಪಂದ್ಯದಲ್ಲಿ 17 ಓವರ್​ಗಳಲ್ಲಿ 133 ರನ್​ಗಳ ಗುರಿ ಪಡೆದ ಇಂಗ್ಲೆಂಡ್ ತಂಡವು 15 ಓವರ್​ಗಳಲ್ಲಿ 125 ರನ್ ಕಲೆಹಾಕಿದ್ದರು. ಈ ವೇಳೆ ಮತ್ತೆ ಮಳೆ ಬಂದಿದ್ದರಿಂದ ಡಕ್​ವರ್ತ್ ಲೂಯಿಸ್ ನಿಯಮದ ಪ್ರಕಾರ ಇಂಗ್ಲೆಂಡ್ ತಂಡವನ್ನು 11 ರನ್​ಗಳಿಂದ ವಿಜಯಿ ಎಂದು ಘೋಷಿಸಲಾಯಿತು.

 

 

Published on: Jan 31, 2026 10:08 AM