ಮಳೆಗಾಲ ಬಂತೆಂದರೆ ಸಾಕು, ಬಟ್ಟೆಗಳನ್ನು ತೊಳೆಯುವುದು ಒಣಗಿಸುವುದೇ ಕಷ್ಟದ ಕೆಲಸ..ಆದರೆ ಇದೀಗ ಹೆಚ್ಚಿನವರ ಮನೆಯಲ್ಲಿ ವಾಷಿಂಗ್ ಮೆಷಿನ್ ಇದ್ದು ಎಲ್ಲಾ ಕೆಲಸವನ್ನು ಸುಲಭವಾಗಿಸಿದೆ. ಈ ಉಪಕರಣವನ್ನು ಸರಿಯಾಗಿ ನಿರ್ವಹಿಸಿದರೆ ಮಾತ್ರ ಹೆಚ್ಚು ಕಾಲ ಬಾಳಿಕೆ ಬರುತ್ತದೆ. ಆದರೆ ನಾವು ಮಾಡುವ ಸಣ್ಣ ಪುಟ್ಟ ತಪ್ಪುಗಳಿಂದ ಈ ಮೆಷಿನ್ ಬೇಗನೆ ಕೆಟ್ಟು ಹೋಗುವುದಲ್ಲದೇ, ಬ್ಲಾಸ್ಟ್ ಕೂಡ ಆಗಬಹುದು.
* ಅನೇಕ ಮಂದಿ ವಾಷಿಂಗ್ ಮಷಿನ್ನಲ್ಲಿ ಹೆಚ್ಚು ಬಟ್ಟೆಗಳನ್ನು ತುಂಬುತ್ತಾರೆ. ಇದು ಮೊದಲು ಎಲ್ಲರೂ ಮಾಡುವ ದೊಡ್ಡ ತಪ್ಪು. ಮೆಷಿನ್ ಇಂತಿಷ್ಟೇ ಸಾಮರ್ಥ್ಯವನ್ನು ಹೊಂದಿರುತ್ತದೆ. ಹೆಚ್ಚು ಬಟ್ಟೆಗಳನ್ನು ತುಂಬಿಸಿದರೆ ವಾಷಿಂಗ್ ಮಷಿನ್ ಮೇಲೆ ಅತಿಯಾದ ಒತ್ತಡ ಬೀಳಬಹುದು. ಹೀಗಾಗಿ ಸಾಮರ್ಥ್ಯದ ಆಧಾರದ ಮೇಲೆ ಬಟ್ಟೆಯನ್ನು ತುಂಬಿಸಿ, ಇಲ್ಲವಾದರೆ ಮೆಷಿನ್ ಬ್ಲಾಸ್ಟ್ ಆಗುವ ಸಾಧ್ಯತೆಯೂ ಅಧಿಕವಾಗಿದೆ. ಅದಲ್ಲದೇ ಬಹುಬೇಗನೇ ಮೆಷಿನ್ ಕೆಟ್ಟು ಹೋಗುತ್ತದೆ.
* ವಾಷಿಂಗ್ ಮೆಷಿನಿನ ಸ್ವಚ್ಛತೆಯ ಕಡೆಗೆ ಗಮನ ಕೊಡಿ. ಬಟ್ಟೆಯನ್ನು ಮೆಷಿನ್ ಗೆ ಹಾಕಿ ತೆಗೆದ ಬಳಿಕ, ಒಣ ಬಟ್ಟೆಯಿಂದ ಡ್ರಮ್, ರಬ್ಬರ್ ಒರೆಸುವುದನ್ನು ಮರೆಯಬೇಡಿ. ಈ ಮೆಷಿನನ್ನು ಸರಿಯಾಗಿ ಇಟ್ಟುಕೊಳ್ಳದೇ ಹೋದರೆ ಬೇಗನೆ ಹಾಳಾಗುವ ಸಾಧ್ಯತೆಯಿದೆ.
* ಮೆಷಿನ್‌ಗಳು ವಿವಿಧ ರೀತಿಯ ಕಂಟ್ರೋಲ್ ಪ್ಯಾನಲ್ ಆಯ್ಕೆಯನ್ನು ಹೊಂದಿರುತ್ತದೆ. ಇದಕ್ಕೆ ನೀರು ಬೀಳದಂತೆ ನೋಡಿಕೊಳ್ಳುವುದು ಮುಖ್ಯ. ಈ ಪ್ಯಾನಲ್ ಮೇಲೆ ನೀರು ನಿಂತರೆ ಮುಟ್ಟಿದ ತಕ್ಷಣ ಶಾಕ್ ಹೊಡೆಯಬಹುದು. ಹೀಗಾಗಿ ಕ್ರಮೇಣವಾಗಿ ಈ ಮೆಷಿನ್ ಸಹ ಹಾಳಾಗುತ್ತದೆ.
ಇದನ್ನೂ ಓದಿ: ಅತ್ತೆ ಸೊಸೆ ಜಗಳ ಶುರುವಾಗುವುದೇ ಇಲ್ಲಿಂದ!
* ಹೆಚ್ಚಿನವರು ವಾಷಿಂಗ್ ಮೆಷಿನ್ ಸರ್ವಿಸ್ ಮಾಡಿಸುವ ಬಗ್ಗೆ ಗಮನ ಹರಿಸುವುದೇ ಇಲ್ಲ. ಆದರೆ ಕಾಲಕಾಲಕ್ಕೆ ಸರ್ವಿಸ್ ಮಾಡಿಸುತ್ತ ಹೋದರೆ ವಾಷಿಂಗ್ ಮೆಷಿನ್ ಬೇಗನೇ ಹಾಳಾಗುವುದನ್ನು ತಪ್ಪಿಸುವುದರ ಜೊತೆಗೆ ಸಣ್ಣ ಪುಟ್ಟ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: