ಹೆಣ್ಣು ಮಕ್ಕಳು ಮದುವೆಯಾಗಿ ಗಂಡನ ಮನೆಗೆ ಹೋದ ಬಳಿಕವಷ್ಟೇ ತನ್ನ ತವರು ಮನೆಯ ಮೇಲೆ ಪ್ರೀತಿ ಹೆಚ್ಚಾಗುತ್ತದೆ. ತಾಯಿಯ ಮೇಲೆ ಪ್ರೀತಿ ಹೆಚ್ಚಾಗುವುದಲ್ಲದೆ, ತಂದೆಯ ಬಳಿ ಹಂಚಿಕೊಳ್ಳಲು ಸಾಧ್ಯವಾಗದ ಅದೆಷ್ಟೋ ಸಂಗತಿಗಳನ್ನು ಅಮ್ಮನೊಂದಿಗೆ ಹೇಳಿಕೊಳ್ಳುತ್ತಾರೆ. ಒಬ್ಬ ಹೆಣ್ಣು ತನ್ನ ಸುಖ, ದುಃಖ ಸಂತೋಷವನ್ನು ತಾಯಿಯೊಂದಿಗೆ ಹೇಳಿಕೊಳ್ಳುವ ಸ್ವಾತಂತ್ರವನ್ನು ಪಡೆದುಕೊಂಡಿದ್ದಾಳೆ. ಆದರೆ ಮದುವೆ ಹೆಣ್ಣು ತನ್ನ ತಾಯಿಯ ಬಳಿಕ ಹಂಚಿಕೊಳ್ಳಬಾರದ ಕೆಲವು ವಿಷಯಗಳಿವೆ.
ಮದುವೆಯಾದ ಆರಂಭದ ದಿನಗಳಲ್ಲಿ ಪ್ರತಿಯೊಬ್ಬ ತಾಯಿಗೂ ‘ನನ್ನ ಮಗಳು ಸುಖವಾಗಿದ್ದಾಳಾ?’ ಎನ್ನುವುದಿರುತ್ತದೆ. ಒಂದು ವೇಳೆ ಈ ಬಗ್ಗೆ ನಿಮ್ಮ ತಾಯಿ ಕೇಳಿದರೆ, ಖುಷಿಯಾಗಿದ್ದೀರಿ ಎಂದು ಹೇಳುವುದು ಒಳ್ಳೆಯದು. ಇಲ್ಲದಿದ್ದರೆ ಆಕೆಯ ಮನಸ್ಸಿಗೂ ನೋವಾಗಬಹುದು. ಅತ್ತೆಯ ಮನೆಯಲ್ಲಿ ನಡೆಯುವ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳುತ್ತ ಹೋದರೆ ನಿಮ್ಮ ತಲೆಯಲ್ಲಿ ಅನುಮಾನದ ಬೀಜ ಬಿತ್ತುವ ಸಾಧ್ಯತೆಯಿದೆ.
ಜಗತ್ತಿನಲ್ಲಿ ಜಗಳವಿಲ್ಲದ ಯಾವುದೇ ದಂಪತಿಗಳು ಇರುವುದಿಲ್ಲ. ಆದರೆ ಈ ಬಗ್ಗೆ ನಿಮ್ಮ ತಾಯಿಗೆ ಹೇಳಬೇಕೇ? ಎನ್ನುವುದರ ಬಗ್ಗೆ ನೀವೇ ಯೋಚಿಸಿ ನೋಡಿ. ಸಣ್ಣಪುಟ್ಟ ವಿಚಾರಕ್ಕೆ ಜಗಳವಾದರೆ ತಾಯಿಯ ಬಳಿ ಹಂಚಿಕೊಳ್ಳಬೇಡಿ. ಜಗಳವು ತುಂಬಾ ಗಂಭೀರವಾಗಿದ್ದರೆ, ಗಂಡನ ಮನೆಯಲ್ಲಿ ನಿಮಗೆ ತೀರಾ ಸಮಸ್ಯೆಗಳಾಗುತ್ತಿದ್ದರೆ ಈ ಬಗ್ಗೆ ನಿಮ್ಮ ಅಮ್ಮನ ಬಳಿ ಹೇಳಿಕೊಳ್ಳುವುದೇ ಉತ್ತಮ.
ನಿಮ್ಮ ಅತ್ತೆ ನಿಮಗೆ ಏನು ಹೇಳಿದರು, ಏನು ಮಾಡಿದರು ಈ ಬಗ್ಗೆ ತಾಯಿಯ ಬಳಿ ಹೇಳಿಕೊಳ್ಳುವುದು ಸರಿಯಲ್ಲ. ನೀವು ನಿಮ್ಮ ಅತ್ತೆಯೊಂದಿಗೆ ಇರುವ ಕಾರಣ, ಅವರು ಹೇಗೆ ಎನ್ನುವ ನಿಮಗೆ ಸ್ಪಷ್ಟ ಚಿತ್ರಣವಿರುತ್ತದೆ. ಆದರೆ ನಿಮ್ಮ ತಾಯಿಯೂ ಅತ್ತೆಯ ನಡವಳಿಕೆ ಹಾಗೂ ಮಾತುಗಳನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಬಹುದು. ಇದು ಅತ್ತೆಯ ಹಾಗೂ ನಿಮ್ಮ ಸಂಬಂಧದ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರಬಹುದು.
ನಿಮ್ಮ ಬಳಿ ಅತ್ತೆ ಮನೆಯ ಸಂಬಂಧಿಕರು ಇನ್ನಿತ್ತರ ಸದಸ್ಯರ ವಿಚಾರಗಳನ್ನು ಮಾತನಾಡಲು ಬಂದರೆ ಆದಷ್ಟು ಆ ವಿಚಾರಗಳಿಂದ ದೂರವಿರುವುದು ಹಿತಕರ. ನಿಮ್ಮ ತಾಯಿಯೊಂದಿಗೆ ಗಂಡನ ಮನೆಯ ಗಾಸಿಫ್ ವಿಚಾರಗಳನ್ನು ಹಂಚಿಕೊಳ್ಳಬೇಡಿ.
ಅನೇಕ ಕುಟುಂಬಗಳು ತಮ್ಮದೇ ಆದ ರಹಸ್ಯಗಳನ್ನು ಹೊಂದಿರುತ್ತದೆ. ಸೊಸೆಯಾದ ನೀವು ಕೂಡ ಆ ಕುಟುಂಬದ ಭಾಗವಾಗಿರುವುದರಿಂದ, ಇದನ್ನು ನಿಮ್ಮ ತಾಯಿಗೆ ಹೇಳದಿರಲು ಪ್ರಯತ್ನಿಸಿ. ಅಮ್ಮನೊಂದಿಗೆ ಹಂಚಿಕೊಂಡ ವಿಷಯಗಳು ಬೇರೆಯವರ ಕಿವಿಗೆ ಬಿದ್ದರೆ ಗಂಡನ ಮನೆಯ ಕುಟುಂಬಕ್ಕೆ ತೊಂದರೆಯಾಗಬಹುದು. ಅವರು ನಿಮ್ಮ ಮೇಲೆ ಇಟ್ಟ ನಂಬಿಕೆಯು ಹಾಳಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: