ಮದುವೆಯಾದ ಹೆಣ್ಮಕ್ಕಳು ಪದೇ ಪದೇ ಅಮ್ಮನ ಮನೆಗೆ ಬರಬೇಡಿ, ಯಾಕೆ ಗೊತ್ತಾ?

ಹೆಣ್ಣು ಮಕ್ಕಳು ಮದುವೆಯಾಗಿ ಗಂಡನ ಮನೆಗೆ ಹೋದರೂ ತವರು ಮನೆಯೆಂದರೆ ವ್ಯಾಮೋಹ ಹೆಚ್ಚು. ತನ್ನ ತವರು ಸದಾ ಹಸಿರಾಗಿರಬೇಕೆಂದು ಬಯಸುವ ಹೆಣ್ಣು ಮಕ್ಕಳು ಅದೆಷ್ಟೋ. ಅದಲ್ಲದೇ ಸಮಯ ಸಿಕ್ಕಾಗಲೆಲ್ಲಾ ತನ್ನ ತವರಿಗೆ ಹೋಗಿ ಸ್ವಲ್ಪ ದಿನಗಳ ಕಾಲ ಅಲ್ಲೇ ಇದ್ದು ಬರುತ್ತಾರೆ. ಆದರೆ ಹೆಣ್ಣಾದವಳು ಪದೇ ಪದೇ ತವರಿಗೆ ಹೋಗುವುದು ಒಳ್ಳೆಯದಲ್ಲವಂತೆ. ಮಗಳು ತನ್ನ ತಾಯಿಮನೆಗೆ ಪದೇ ಪದೇ ಹೋಗುವುದರಿಂದ ಏನಾಗುತ್ತದೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಮದುವೆಯಾದ ಹೆಣ್ಮಕ್ಕಳು ಪದೇ ಪದೇ ಅಮ್ಮನ ಮನೆಗೆ ಬರಬೇಡಿ, ಯಾಕೆ ಗೊತ್ತಾ?
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 06, 2024 | 1:50 PM

ತಾನು ಹುಟ್ಟಿ ಬೆಳೆದ ತವರನ್ನು ಬಿಟ್ಟು ಗಂಡನ ಮನೆಗೆ ಹೋಗುವಾಗ ಹೆಣ್ಣಿಗೆ ಆಗುವ ನೋವು ಅಷ್ಟಿಷ್ಟಲ್ಲ. ಆಡಿ ಬೆಳೆದ ಮನೆ, ಅಮ್ಮ ಅಪ್ಪನ ಪ್ರೀತಿ, ಅಣ್ಣ ತಮ್ಮಂದಿರ ಕಾಳಜಿ ಈ ಎಲ್ಲವನ್ನು ತೊರೆದು ಬೇರೊಂದು ಮನೆಯ ದೀಪವನ್ನು ಹಚ್ಚುವುದು ಹೆಣ್ಣಾದವಳಿಗೆ ಅನಿವಾರ್ಯ. ಆದರೆ ಹೆಣ್ಣಿನ ತವರು ತಂದು ಕೊಡುವ ಬೆಚ್ಚನೆಯ ಅನುಭವವನ್ನು ಗಂಡನ ಮನೆ ತಂದುಕೊಡುವುದಿಲ್ಲ. ತವರಿನಲ್ಲಿ ಸಿಗುವ ಬೆಚ್ಚನೆಯ ಪ್ರೀತಿ, ಕಾಳಜಿ, ಅಕ್ಕರೆ ತುಂಬಿದ ಮಾತಿಗೆ ಸರಿಸಾಟಿಯೇ ಇಲ್ಲ.

ಆದರೆ ಪದೇ ಪದೇ ತಾಯಿ ಮನೆಗೆ ಬರುವ ಹೆಣ್ಣು ಮಕ್ಕಳಿಗೆ ಈ ಕೆಲವು ವಿಚಾರಗಳು ಗೊತ್ತಿರಲೇಬೇಕು. ಬಿಡುವು ಸಿಕ್ಕಾಗಲೆಲ್ಲಾ ತವರಿಗೆ ಹೋಗುವುದು ಒಳ್ಳೆಯದಲ್ಲ ಎನ್ನುತ್ತದೆ ಶಾಸ್ತ್ರ. ಮನೆಯ ಲಕ್ಷ್ಮಿ ಎನ್ನಲಾಗುವ ಹೆಣ್ಣು ತನ್ನ ತವರಿಗೆ ಬರುವ ಮುನ್ನ ದಿನ ಹಾಗೂ ಸಮಯ ನೋಡಬೇಕೆಂತೆ. ಕೆಟ್ಟ ಸಮಯ ಹಾಗೂ ಕೆಟ್ಟ ದಿನದಲ್ಲಿ ಹೆಣ್ಣು ತನ್ನ ತವರಿಗೆ ಬಂದರೆ ಎರಡು ಮನೆಗೂ ಸಮಸ್ಯೆಗಳಾಗುತ್ತದೆ. ಹುಟ್ಟಿದ ಮನೆ ಹಾಗೂ ಮೆಟ್ಟಿನ ಮನೆಗೂ ಶ್ರೇಯಸಲ್ಲವಂತೆ.

ಇದನ್ನೂ ಓದಿ: ನಿಮ್ಮ ಪತಿಯು ಬಯಸುವ ಈ ಗುಣಗಳು ನಿಮ್ಮಲ್ಲಿದೆಯಾ? ಹಾಗಾದ್ರೆ ನಿಮಗೆ ಇದು ತಿಳಿದಿರಬೇಕು

ಈ ದಿನಗಳಲ್ಲಿ ತವರು ಮನೆಗೆ ಹೋಗಲೇಬೇಡಿ

* ತಾಯಿ ಮನೆಗೆ ಅಮವಾಸ್ಯೆ ದಿನ, ಅಮವಾಸ್ಯೆಯ ಹಿಂದಿನ ಹಾಗೂ ಮುಂದಿನ ದಿನ ಹೋಗಬಾರದು. ಈ ಮೂರು ದಿನಗಳಲ್ಲಿ ತವರು ಮನೆಯಿಂದ ಗಂಡನ ಮನೆಗೂ ಬರಬಾರದು ಎನ್ನಲಾಗುತ್ತದೆ.

* ಸೂರ್ಯ ಗ್ರಹಣ ಅಥವಾ ಚಂದ್ರ ಗ್ರಹಣವಿರುವ ದಿನ ತವರು ಮನೆಗೆ ಹೋಗಬಾರದು, ತವರಿನಿಂದ ಗಂಡನ ಮನೆಗೆ ಬರಬಾರದು. ಒಂದು ವೇಳೆ ಈ ಸಮಯದಲ್ಲಿ ಬಂದರೆ ತನ್ನ ಎರಡು ಮನೆಯಲ್ಲಿಯೂ ಆರ್ಥಿಕವಾಗಿ ಸಮಸ್ಯೆಗಳು ಉಂಟಾಗುತ್ತದೆ.

* ಹೆಣ್ಣು ಯಾವತ್ತಿಗೂ ಗಂಡನ ಜೊತೆ ಜಗಳ ಮಾಡಿಕೊಂಡು ತಾಯಿ ಮನೆಗೆ ಹೋಗಬಾರದು. ಹೆಣ್ಣು ಹೀಗೆ ಮಾಡಿದರೆ ಸಂಸಾರದಲ್ಲಿ ಬಿರುಕು ಮೂಡಿ ಸಮಸ್ಯೆಗೂ ಕಾರಣವಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್