ಚಿರ ಯೌವನ್ನಿಗ ನಾಯ್ಡು ಫುಡ್ಡು ಏನು ಗೊತ್ತಾ! ಅಮರಾವತಿ ನೂತನ ಸಾರಥಿ ಚಂದ್ರಬಾಬು ಆಹಾರಶೈಲಿ ಹೀಗಿದೆ

Chandrababu Naidu Food style: ತಾವು ತಿನ್ನುವ ಆಹಾರದ ಬಗ್ಗೆ ಸ್ವತಃ ಚಂದ್ರಬಾಬು ನಾಯ್ಡು ಸಂದರ್ಶನವೊಂದರಲ್ಲಿ ಹೀಗೆ ಹೇಳಿದ್ದಾರೆ: ಬದುಕಲು ತಿನ್ನುತ್ತಾನೆಯೇ ಹೊರತು ತಿನ್ನಲು ಬದುಕುವುದಿಲ್ಲ ಎಂದಿದ್ದಾರೆ. ತನ್ಮೂಲಕ ತಾವು ತಿನ್ನುವ ಆಹಾರವು ತುಂಬಾ ಸರಳವಾಗಿದೆ ಎಂದು ಅವರು ಬಹಿರಂಗಪಡಿಸಿದ್ದಾರೆ.

ಚಿರ ಯೌವನ್ನಿಗ ನಾಯ್ಡು ಫುಡ್ಡು ಏನು ಗೊತ್ತಾ! ಅಮರಾವತಿ ನೂತನ ಸಾರಥಿ ಚಂದ್ರಬಾಬು ಆಹಾರಶೈಲಿ ಹೀಗಿದೆ
Chandrababu Foods: ಚಿರ ಯೌವನ್ನಿಗ ನಾಯ್ಡು ಫುಡ್ಡು ಏನು ಗೊತ್ತಾ!
Follow us
ಸಾಧು ಶ್ರೀನಾಥ್​
|

Updated on:Jun 06, 2024 | 4:39 PM

ಆಂಧ್ರಪ್ರದೇಶದಲ್ಲಿ ಇತ್ತೀಚೆಗೆ ನಡೆದ ಅಸೆಂಬ್ಲಿ ಮತ್ತೊ ಲೋಕಸಭೆ ಚುನಾವಣೆಗಳಲ್ಲಿ ತೆಲುಗು ದೇಶಂ ಪಕ್ಷ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಚಂದ್ರಬಾಬು ನಾಯ್ಡು ಎಂಬ ಚಿರ ಯೌವನ್ನಿಗ ಮುಂದಿನ ವಾರದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅಂದಹಾಗೆ ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರಿಗೆ 74 ವರ್ಷ ವಯಸ್ಸಾಗಿದೆ. ಪಾದರಸದಂತೆ ಸಕ್ರಿಯವಾಗಿ (Chandrababu Naidu Life Style) ಅವರು ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ಹಾಗಾದರೆ ಚಂದ್ರಬಾಬು ನಾಯ್ಡು ಅಷ್ಟೋಂದು ಆರೋಗ್ಯವಾಗಿರಲು ಏನೆಲ್ಲಾ ಆಹಾರ ತಿನ್ನುತ್ತಾರೆ? ಅವರು ಯಾವ ರೀತಿಯ ಆಹಾರಕ್ರಮವನ್ನು ಅನುಸರಿಸುತ್ತಾರೆ? (Chandrababu Naidu Food style)

ತಾವು ತಿನ್ನುವ ಆಹಾರದ ಬಗ್ಗೆ ಸ್ವತಃ ಚಂದ್ರಬಾಬು ನಾಯ್ಡು ಸಂದರ್ಶನವೊಂದರಲ್ಲಿ ಹೀಗೆ ಹೇಳಿದ್ದಾರೆ: ಬದುಕಲು ತಿನ್ನುತ್ತಾನೆಯೇ ಹೊರತು ತಿನ್ನಲು ಬದುಕುವುದಿಲ್ಲ ಎಂದಿದ್ದಾರೆ. ತನ್ಮೂಲಕ ತಾವು ತಿನ್ನುವ ಆಹಾರವು ತುಂಬಾ ಸರಳವಾಗಿದೆ ಎಂದು ಅವರು ಬಹಿರಂಗಪಡಿಸಿದ್ದಾರೆ. ಯಾವುದೇ ತರಹದ ವಿಶೇಷ, ನಿರ್ದಿಷ್ಟ ಆಹಾರ ತೆಗೆದುಕೊಳ್ಳುವುದಿಲ್ಲ. ಆರೋಗ್ಯಕರವಾದುದನ್ನೇ ತಿನ್ನುತ್ತೇನೆ ಎಂದಿದ್ದಾರೆ. ನಾವು ಎಷ್ಟು ತಿನ್ನುತ್ತೇವೆ ಮತ್ತು ಎಷ್ಟು ಕ್ಯಾಲೊರಿಗಳನ್ನು ಖರ್ಚು ಮಾಡುತ್ತಿದ್ದೇವೆ ಎಂದು ಅವರು ಪಕ್ಕಾ ಲೆಕ್ಕ ಹಾಕುತ್ತಾರಂತೆ.

ಇದನ್ನೂ ಓದಿ: ಸಂಜಯ್ ಗಾಂಧಿ ಕಟ್ಟಾ ಬೆಂಬಲಿಗ, ಸೈಬರಾಬಾದ್ ಖ್ಯಾತಿಯ ಚಂದ್ರಬಾಬು ನಾಯ್ಡು ಕೈಗೆ ಮತ್ತೆ ಆಂಧ್ರ ಚುಕ್ಕಾಣಿ

ಚಂದ್ರಬಾಬು ಡಯಟ್ ಚಾರ್ಟ್​ ಹೀಗಿದೆ:

ದಿನಾ ಬೆಳಗ್ಗೆ: ಇಡ್ಲಿ- ಸಾಂಬಾರು, ರಾಗಿ ಇಡ್ಲಿ, ಓಟ್ಸ್ ಉಪ್ಮಾ, ಎರಡು ದೋಸೆ, ಸ್ವಲ್ಪ ಚಟ್ನಿ, ಎರಡು ಬೇಯಿಸಿದ ಮೊಟ್ಟೆಗಳು. ಇವುಗಳಲ್ಲಿ ಒಂದನ್ನು ಉಪಾಹಾರಕ್ಕಾಗಿ ತೆಗೆದುಕೊಳ್ಳಲಾಗುತ್ತದೆ. ಬೆಳಗಿನ ಉಪಾಹಾರ ಮತ್ತು ಊಟದ ನಡುವೆ ಹಣ್ಣು ತಗೋತಾರೆ.

ಮಧ್ಯಾಹ್ನ: ರಾಗಿ ಮುದ್ದೆ, ಸಾಂಬಾರು, ರೊಟ್ಟಿ ಅಥವಾ ಅನ್ನ, ಎರಡು ಅಥವಾ ಮೂರು ಸಾಂಬಾರು. ಹೆಚ್ಚು ಎಣ್ಣೆ ಇಲ್ಲ, ಸ್ವಲ್ಪ ಮೊಸರು. ಮಧ್ಯಾಹ್ನ ಮತ್ತು ಸಂಜೆಯ ತಿಂಡಿಗಳ ನಡುವೆ ಸ್ವಲ್ಪ ನಟ್ಸ್ ಅಥವಾ ಜ್ಯೂಸ್ ಸೇವಿಸುತ್ತಾರೆ.

ಸಂಜೆ: ಯಾವುದಾದರೂ ಸೂಪ್, ಕೆಲವು ಅಲ್ಪಾಹಾರದ ತಿಂಡಿ, ಮೊಟ್ಟೆ.

Also Read: Amaravati as Andhra Capital – ಆಂಧ್ರದಲ್ಲಿನ್ನು ಬಾಬು ಆಡಳಿತ -ಚಂದ್ರಬಾಬು ಕನಸಿನ ಅಮರಾವತಿ ಮತ್ತೆ ರಾಜಧಾನಿಯಾಗಲಿದೆಯೇ?

ರಾತ್ರಿ: ರಾತ್ರಿ ಮಲಗುವ ಮುನ್ನ ಕೇವಲ ಒಂದು ಲೋಟ ಹಾಲು. ತುಂಬಾ ಹಸಿವಾದರೆ ಚಿಕ್ಕ ಹಣ್ಣು.

ಇದರ ಜೊತೆಗೆ ಆರರಿಂದ ಏಳು ಗಂಟೆಗಳ ನಿದ್ದೆ ಮಾಡುತ್ತೇನೆ ಎಂದು ಅವರು ಬಹಿರಂಗಪಡಿಸಿದ್ದಾರೆ. ಈ ಆಹಾರ ಕ್ರಮವನ್ನು ಅನುಸರಿಸುವಾಗ, ಅವರು ವಾಕಿಂಗ್ ಅಥವಾ ಸಣ್ಣ ವ್ಯಾಯಾಮಗಳನ್ನು ಮಾಡುತ್ತಾರಂತೆ. ಕೆಲವೊಮ್ಮೆ ತಿನ್ನುವ ಆಹಾರದ ಆಧಾರದ ಮೇಲೆ ವ್ಯಾಯಾಮವೂ ಬದಲಾಗುತ್ತದೆ. ಇದು ಚಂದ್ರಬಾಬು ಅವರ ಪಥ್ಯ. ಎಲ್ಲೇ ಇದ್ದರೂ ಈ ಡಯಟ್ ಫಾಲೋ ಮಾಡುತ್ತೇನೆ ಎಂದು ಬಾಬು ಹೇಳುತ್ತಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 4:35 pm, Thu, 6 June 24

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್