Amaravati as Andhra Capital: ಆಂಧ್ರದಲ್ಲಿನ್ನು ಬಾಬು ಆಡಳಿತ -ಚಂದ್ರಬಾಬು ಕನಸಿನ ಅಮರಾವತಿ ಮತ್ತೆ ರಾಜಧಾನಿಯಾಗಲಿದೆಯೇ?

ಟಿಡಿಪಿ-ಬಿಜೆಪಿ-ಜೆಎಸ್‌ಪಿ ಮೈತ್ರಿಕೂಟ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ, ಆಂಧ್ರಪ್ರದೇಶದ ಜನರು ಅಮರಾವತಿಯ ಬೆಳವಣಿಗೆ ಮತ್ತು ಬಹುನಿರೀಕ್ಷಿತ ಅಭಿವೃದ್ಧಿ ಭರವಸೆಗಳ ಈಡೇರಿಕೆಯನ್ನು ಎದುರು ನೋಡುತ್ತಿದ್ದಾರೆ. ವಿಜಯವಾಡ ಮತ್ತು ಗುಂಟೂರಿನ ಎರಡು ನೋಡಲ್ ನಗರ ಕೇಂದ್ರಗಳ ನಡುವೆ ಇರುವ ಆಯಕಟ್ಟಿನ ಸ್ಥಳದಲ್ಲಿ ಅಮರಾವತಿಯನ್ನು ಆಂಧ್ರಪ್ರದೇಶದ ಹೊಸ ರಾಜಧಾನಿಯಾಗಿ ಅಭಿವೃದ್ಧಿಪಡಿಸಲಾಗುತ್ತದೆ. ಸುಸ್ಥಿರತೆ ಮತ್ತು ವಾಸಯೋಗ್ಯ ತತ್ವಗಳ ಸುತ್ತ ನಿರ್ಮಿಸಲಾಗುವ ಜನ ಕೇಂದ್ರಿತ ಅತ್ಯಾಧುನಿಕ ಸ್ಮಾರ್ಟ್ ಸಿಟಿಯಾಗಿ ಇದು ನಿರ್ಮಾಣವಾಗಲಿದೆ.

Amaravati as Andhra Capital: ಆಂಧ್ರದಲ್ಲಿನ್ನು ಬಾಬು ಆಡಳಿತ -ಚಂದ್ರಬಾಬು ಕನಸಿನ ಅಮರಾವತಿ ಮತ್ತೆ ರಾಜಧಾನಿಯಾಗಲಿದೆಯೇ?
ಚಂದ್ರಬಾಬು ಕನಸಿನ ಅಮರಾವತಿ ಮತ್ತೆ ರಾಜಧಾನಿಯಾಗಲಿದೆಯೇ?
Follow us
|

Updated on:Jun 06, 2024 | 11:25 AM

ತೆಲುಗು ದೇಶಂ ಪಕ್ಷ (Telugu Desam Party -ಟಿಡಿಪಿ), ಭಾರತೀಯ ಜನತಾ ಪಕ್ಷ (BJP -ಬಿಜೆಪಿ) ಮತ್ತು ಜನಸೇನಾ ಪಕ್ಷ (Jana Sena Party -ಜೆಎಸ್‌ಪಿ) ಮೈತ್ರಿಕೂಟದ (TDP-BJP-JSP alliance) ಇತ್ತೀಚಿನ ವಿಜಯವು ಅಮರಾವತಿಯನ್ನು ಆಂಧ್ರಪ್ರದೇಶದ ಏಕಮೇವ ನೂತನ ರಾಜಧಾನಿಯಾಗಿ ಅಭಿವೃದ್ಧಿಪಡಿಸುವ ಗಮ್ಯ, ಗಮನ ಹೊಂದಿದೆ ಅನ್ನಿಸುತ್ತಿದೆ. ರಾಜ್ಯದ ಶುಭ ಘಳಿಗೆಯಾಗಿ ಜೂನ್ 12 ರಂದು ಅಮರಾವತಿಯಲ್ಲಿ (Amaravati) ಆಂಧ್ರದ ನೂತನ ಸಿಎಂ ಆಗಿ ಚಂದ್ರಬಾಬು ಪ್ರಮಾಣ ವಚನ ಸ್ವೀಕರಿಸಲು ದಿನಾಂಕ ನಿಗದಿಯಾಗಿದೆ. ಚಂದ್ರಬಾಬು ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮೋದಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಇನ್ನು ಜನಸೇನಾ ನೇತಾರರು ಸಮಾರಂಭದಲ್ಲಿ ತಮ್ಮ ಅಧೇಇಪತ್ಯ ಸ್ಥಾಪಿಸಲಿದ್ದಾರೆ. ಹಾಗಾಗಿ ಚಂದ್ರಬಾಬು ಕನಸಿನ ಅಮರಾವತಿ ಮತ್ತೆ ಆಂದ್ರದ ರಾಜಧಾನಿಯಾಗಲಿದೆಯೇ (Andhra Pradesh Capital) ಎಂಬುದಕ್ಕೆ ಪುಷ್ಟಿ ಸಿಕ್ಕಿದೆ.

ನಾಲ್ಕು ದಿನಗಳ ಹಿಂದೆ, ಜೂನ್ 2 ರಿಂದ ಜಾರಿಗೆ ಬರುವಂತೆ ತೆಲಂಗಾಣ ಮತ್ತು ಆಂಧ್ರಪ್ರದೇಶದ ಜಂಟಿ ರಾಜಧಾನಿಯಾಗಿ ಹೈದರಾಬಾದ್ ನಗರದ ಅಸ್ತಿತ್ವ ಸ್ಥಗಿತಗೊಳ್ಳಲಿದೆ. 2014 ರ ಆಂಧ್ರ ಪ್ರದೇಶ ಮರುಸಂಘಟನೆ ಕಾಯಿದೆಗೆ ಅನುಗುಣವಾಗಿ ಮುತ್ತಿನನಗರಿ ಕಳೆದೊಂದು ದಶಕದಿಂದ ಜಂಟಿ ರಾಜಧಾನಿಯಾಗಿ ಅಸ್ತಿತ್ವದಲ್ಲಿತ್ತು.

ನಾರಾ ಚಂದ್ರಬಾಬು ನಾಯ್ಡು (Chandrababu Naidu) ಅವರು ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ 2015 ರಲ್ಲಿ ಅಮರಾವತಿಯನ್ನು ಆಂಧ್ರ ಪ್ರದೇಶದ ರಾಜಧಾನಿ ಎಂದು ಘೋಷಿಸಿದ್ದರು. ಅವರ ಆಡಳಿತದಲ್ಲಿ, ರಾಜ್ಯದ ಆಡಳಿತಾತ್ಮಕ ಕಾರ್ಯಗಳನ್ನು ಅಮರಾವತಿಗೆ ಸ್ಥಳಾಂತರಿಸುವ ಪ್ರಕ್ರಿಯೆಯೂ ಪ್ರಾರಂಭವಾಯಿತು, ಮಧ್ಯಂತರ ಸರ್ಕಾರಿ ವ್ಯವಸ್ಥೆಗಳಿಗಾಗಿ ವಿಜಯವಾಡವನ್ನು ರಾಜಧಾನಿಯ ಭಾಗವಾಗಿ ಸ್ಥಾಪಿಸಲಾಯಿತು.

ಅಂದು ನಾಯ್ಡು ಆಡಳಿತದಲ್ಲಿ ಸೆಕ್ರೆಟರಿಯೇಟ್ ಸೇರಿದಂತೆ ಬಹುತೇಕ ಸರ್ಕಾರಿ ಕಚೇರಿಗಳನ್ನು ಅಮರಾವತಿಗೆ ಸ್ಥಳಾಂತರಿಸಲಾಯಿತು. ನಾಯ್ಡು ಅವರ ದೃಷ್ಟಿಯಲ್ಲಿ ಅಮರಾವತಿಯನ್ನು ವಿಶ್ವದರ್ಜೆಯ ರಾಜಧಾನಿಯನ್ನಾಗಿ ಪರಿವರ್ತಿಸುವುದು, ಆಧುನಿಕ ಮೂಲಸೌಕರ್ಯ ಮತ್ತು ಜಾಗತಿಕ ಹೂಡಿಕೆಗಳೊಂದಿಗೆ ಸಂಪೂರ್ಣ ನಗರಿಯಾಗಿ ಪರಿವರ್ತಿಸುವ ಇಚ್ಛೆಯಿತ್ತು.

ಆದರೆ ಜಗನ್ ಮೋಹನ್ ರೆಡ್ಡಿ ನೇತೃತ್ವದ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ (ವೈಎಸ್‌ಆರ್‌ಸಿಪಿ Yuvajana Sramika Rythu Congress Party -YSRCP) 2019 ರಲ್ಲಿ ಅಧಿಕಾರಕ್ಕೆ ಬಂದಾಗ ವಿಕೇಂದ್ರೀಕೃತ ಆಡಳಿತಕ್ಕೆ ಒತ್ತು ನೀಡಿದರು. ಅದಕ್ಕಾಗಿ ಮೂರು ರಾಜಧಾನಿ ಮಾದರಿಯನ್ನು ಪ್ರಸ್ತಾಪಿಸಲಾಯಿತು. ಅದರಿಂದ ಚಂದ್ರಬಾಬು ಅವರ ಮಹತ್ವಾಕಾಂಕ್ಷೆಯ ಯೋಜನೆಗಳು ಸವಾಲುಗಳನ್ನು ಎದುರಿಸಿದವು.

Also Read: ಸಮಾಜವಾದಿ ಸೋಗಿನಲ್ಲಿ 4 ವರ್ಷ ಕಾಲ ಆದಾಯ ತೆರಿಗೆಯನ್ನು ಶೇ 97.5 ಕ್ಕೆ ಏರಿಸಿದ್ದ ಪ್ರಧಾನಿ ಇಂದಿರಾ! ಏನಾಯ್ತು ಆಗ?

ಜಗನ್ ಮಾದರಿಯಂತೆ ವಿಶಾಖಪಟ್ಟಣವನ್ನು ಕಾರ್ಯಕಾರಿ ರಾಜಧಾನಿಯಾಗಿ, ಅಮರಾವತಿಯನ್ನು ಶಾಸಕಾಂಗ ರಾಜಧಾನಿಯಾಗಿ ಮತ್ತು ಕರ್ನೂಲ್ ಅನ್ನು ನ್ಯಾಯಾಂಗ ರಾಜಧಾನಿಯಾಗಿ ಗೊತ್ತುಪಡಿಸಿತು. ಆದಾಗ್ಯೂ, YSRCP ಸರ್ಕಾರವು ತನ್ನ ಮೂರು-ರಾಜಧಾನಿ ಯೋಜನೆಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಸಾಧ್ಯವಾಗಲಿಲ್ಲ.

ಈಗ ಟಿಡಿಪಿ-ಬಿಜೆಪಿ-ಜೆಎಸ್‌ಪಿ ಮೈತ್ರಿಕೂಟ ಅಧಿಕಾರದಲ್ಲಿದ್ದು, ರಾಜಧಾನಿಯಾಗಿ ಅಮರಾವತಿ ಅಭಿವೃದ್ಧಿ ಪುನರಾರಂಭಗೊಳ್ಳಲಿದೆ. ಅಮರಾವತಿ ಅಭಿವೃದ್ಧಿಗೆ ಅಂದಾಜು 2.5 ಲಕ್ಷ ಕೋಟಿ ರೂ. ಗಳಿಂದ 3 ಲಕ್ಷ ಕೋಟಿ ರೂ. ಆಸುಪಾಸಿನಲ್ಲಿದೆ. ಟಿಡಿಪಿ-ಬಿಜೆಪಿ-ಜೆಎಸ್‌ಪಿ ಮೈತ್ರಿಕೂಟದ ಪ್ರಣಾಳಿಕೆಯು ಎಲ್ಲಾ ಅಗತ್ಯ ಮೂಲಸೌಕರ್ಯ ಮತ್ತು ಸೌಲಭ್ಯಗಳೊಂದಿಗೆ ರಾಜಧಾನಿಯಾಗಿ ಅಮರಾವತಿಯನ್ನು ಅಭಿವೃದ್ಧಿಪಡಿಸಲು ಒತ್ತು ನೀಡಿದೆ.

ಹಲವಾರು ಸಾರ್ವಜನಿಕ ಸಭೆಗಳಲ್ಲಿ, ಟಿಡಿಪಿ ನಾಯಕ ಎನ್ ಚಂದ್ರಬಾಬು ನಾಯ್ಡು, ಬಿಜೆಪಿ ನಾಯಕರು ಮತ್ತು ಜೆಎಸ್ಪಿ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಅಮರಾವತಿಯನ್ನು ರಾಜಧಾನಿಯಾಗಿ ಅಭಿವೃದ್ಧಿಪಡಿಸುವ ಬದ್ಧತೆಯ ಬಗ್ಗೆ ಬಲವಾದ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದರು ಎಂಬುದು ಗಮನಾರ್ಹ.

Also Read: ಆಂಧ್ರ ಅಸೆಂಬ್ಲಿ ಚುನಾವಣೆ: ಚಂದ್ರಬಾಬು ನಾಯ್ಡುಗೆ ಅಳಿವು ಉಳಿವಿನ ಪ್ರಶ್ನೆ, ಟಿಡಿಪಿಗೆ ಮತ್ತೆ ‘ಅಳಿಯನ ಕಂಟಕ’ ಎದುರಾಗಬಹುದೇ?

ಮುಂದಿನ ಮುಖ್ಯಮಂತ್ರಿ ನಾಯ್ಡು ಅವರು ಇತ್ತೀಚೆಗೆ ಅಮರಾವತಿ ರಾಜಧಾನಿ ಬಗ್ಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ “ಭೂಮಿಯ ಮೇಲಿನ ಯಾವುದೇ ಶಕ್ತಿಯು ಅಮರಾವತಿಯನ್ನು ಅಡ್ಡಿಪಡಿಸಲು ಸಾಧ್ಯವಿಲ್ಲ, ಅದು ರಾಜ್ಯದ ರಾಜಧಾನಿಯಾಗಿ ಮುಂದುವರಿಯುತ್ತದೆ” ಎಂದು ಘಂಟಾಘೋಷವಾಗಿ ಹೇಳಿದ್ದಾರೆ. ಅಲ್ಲಿಗೆ ಅಮರಾವತಿ ಆಂಧ್ರ ಪ್ರದೇಶದ ರಾಜಧಾನಿಯಾಗಿ ಮಂದಿನ 5 ವರ್ಷಗಳಲ್ಲಿ ಪರಿಪೂರ್ಣವಾಗಿ ಮಾರ್ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಅಮರಾವತಿ ರಾಜಧಾನಿ ಬಗ್ಗೆ ಒಂದಿಷ್ಟು:

ವಿಜಯವಾಡ ಮತ್ತು ಗುಂಟೂರಿನ ಎರಡು ನೋಡಲ್ ನಗರ ಕೇಂದ್ರಗಳ ನಡುವೆ ಇರುವ ಆಯಕಟ್ಟಿನ ಸ್ಥಳದಲ್ಲಿ ಅಮರಾವತಿಯನ್ನು ಆಂಧ್ರಪ್ರದೇಶದ ಹೊಸ ರಾಜಧಾನಿಯಾಗಿ ಅಭಿವೃದ್ಧಿಪಡಿಸಲಾಗುತ್ತದೆ. ಸುಸ್ಥಿರತೆ ಮತ್ತು ವಾಸಯೋಗ್ಯ ತತ್ವಗಳ ಸುತ್ತ ನಿರ್ಮಿಸಲಾಗುವ ಜನ ಕೇಂದ್ರಿತ ಅತ್ಯಾಧುನಿಕ ಸ್ಮಾರ್ಟ್ ಸಿಟಿಯಾಗಿ ಇದು ನಿರ್ಮಾಣವಾಗಲಿದೆ. ನಗರವು 217.23 ಚದರ ಕಿಮೀ ವಿಸ್ತೀರ್ಣವನ್ನು ಹೊಂದಿದೆ, ಮತ್ತು ಗುಂಟೂರು ಜಿಲ್ಲೆಯ 3 ಮಂಡಲಗಳಲ್ಲಿ (ತುಲ್ಲೂರು, ಮಂಗಳಗಿರಿ ಮತ್ತು ತಾಡೆಪಲ್ಲಿ) 25 ಹಳ್ಳಿಗಳಲ್ಲಿ ಹರಡಿಕೊಂಡಿದೆ.

ಟಿಡಿಪಿ-ಬಿಜೆಪಿ-ಜೆಎಸ್‌ಪಿ ಮೈತ್ರಿಕೂಟ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ, ಆಂಧ್ರಪ್ರದೇಶದ ಜನರು ಅಮರಾವತಿಯ ಬೆಳವಣಿಗೆ ಮತ್ತು ಬಹುನಿರೀಕ್ಷಿತ ಅಭಿವೃದ್ಧಿ ಭರವಸೆಗಳ ಈಡೇರಿಕೆಯನ್ನು ಎದುರು ನೋಡುತ್ತಿದ್ದಾರೆ.

ಅಮರಾವತಿ ಇತಿಹಾಸದ ಬಗ್ಗೆ ಒಂದಿಷ್ಟು:

ಅಮರಾವತಿ ಎಂಬುದು ಆಂಧ್ರ ಪ್ರದೇಶ ರಾಜ್ಯದಲ್ಲಿರುವ ಒಂದು ಐತಿಹಾಸಿಕ ಪಟ್ಟಣ. ಇದು ಗುಂಟೂರು ಜಿಲ್ಲೆಯ ಕೃಷ್ಣಾನದಿಯ ದಡದಲ್ಲಿದೆ. ಈ ಪಟ್ಟಣದ ಉತ್ತರದಲ್ಲಿರುವ ಧರಣಿಕೋಟ ಎಂಬ ಸ್ಥಳವು ಆಂಧ್ರದಲ್ಲಿ ಬೌದ್ಧರ ರಾಜಧಾನಿಯಾಗಿತ್ತು. ಇಲ್ಲಿ ಮೌರ್ಯರ ಕಾಲಕ್ಕಿಂತಲೂ ಹಿಂದಿನ ಸ್ತೂಪ ಇದೆ. ಇಲ್ಲಿರುವ ಅಮೃತೇಶ್ವರ ಗುಡಿಯು ಬಹು ಪ್ರಸಿದ್ಧವಾಗಿದೆ. ಈ ಪಟ್ಟಣವು ಶಾತವಾಹನರ ರಾಜಧಾನಿಯೂ ಆಗಿತ್ತು.

ಅಮರಾವತಿಯ ಪವಿತ್ರ ಸ್ಮಾರಕಗಳ ಇತಿಹಾಸ:

ಈ ಸ್ಥಳವು ಸ್ಕಂದ ಪುರಾಣದಲ್ಲಿಯೂ ಉಲ್ಲೇಖವನ್ನು ಹೊಂದಿದೆ. ಬೌದ್ಧರ ವಜ್ರಾಯನ ಶಾಖೆಯ ಪ್ರಕಾರ ಗೌತಮ ಬುದ್ಧ ಇಲ್ಲಿ ಅಂದರೆ ಧರಣಿಕೋಟದಲ್ಲಿ ಉಪದೇಶವನ್ನು ನೀಡಿದ. ಇದರ ಅನ್ವಯ ಇಲ್ಲಿನ ಇತಿಹಾಸವು ಕ್ರಿಸ್ತಪೂರ್ವ ೫೦೦ ರಿಂದಲೇ ಪ್ರಾರಂಭವಾಗುತ್ತದೆ. ಲಿಖಿತ ಉಲ್ಲೇಖಗಳ ಪ್ರಕಾರ ಈ ಪ್ರದೇಶವು ಶಾತವಾಹನರಿಂದ ಆಳಲ್ಪಟ್ಟಿತ್ತು. ಮುಂದೆ ಪಲ್ಲವರು, ಪೂರ್ವ ಚಾಲುಕ್ಯರು, ತೆಲುಗು ಚೋಳರು ಈ ಪ್ರದೇಶದ ಆಧಿಪತ್ಯ ಹೊಂದಿದ್ದರು. ಸುಮಾರು ೧೧ ನೆಯ ಶತಮಾನದಲ್ಲಿ ಈ ಪ್ರದೇಶವು ಕಾಕತೀಯರಿಂದ ಆಳಲ್ಪಟ್ಟು ಮುಂದೆ ವಿಶಾಲ ಆಂಧ್ರದಲ್ಲಿ ವಿಲೀನವಾಯಿತು.

ಕ್ರಿಸ್ತಪೂರ್ವ ೫೦೦ ನೆಯ ಸುಮಾರು ಇಲ್ಲಿ ಬೌದ್ಧಧರ್ಮವು ಪ್ರವರ್ಧಮಾನವಾಗಿತ್ತು. ಇಲ್ಲಿ ದೊರೆತ, ಅಶೋಕ ನಿರ್ಮಿಸಿದ ಸುಂದರ ಸ್ತೂಪವು ಇದಕ್ಕೆ ಸಾಕ್ಷಿಯಾಗಿದೆ. ಇದರ ಫಲಕಗಳಲ್ಲಿ ಗೌತಮಬುದ್ಧನ ಕತೆಯನ್ನು ಕೆತ್ತಲಾಗಿದೆ. ಕ್ರಿಸ್ತಪೂರ್ವ ೨ ನೆಯ ಶತಮಾನದಿಂದ ಕ್ರಿಸ್ತಶಕ ೨ ನೆಯ ಶತಮಾನದವರೆಗೆ ಶಾತವಾಹನರು ಈ ಧರಣಿಕೋಟವನ್ನು ರಾಜಧಾನಿಯನ್ನಾಗಿಸಿಕೊಂಡರು. ಅನಂತರ ಬೌದ್ಧಧರ್ಮವು ಕ್ಷೀಣಗೊಂಡು ಹಿಂದೂಧರ್ಮವು ಪ್ರಬಲವಾದನಂತರ ಈ ಸ್ಥಳವು ಅವಗಣನೆಗೆ ತುತ್ತಾಯಿತು. ಈ ಸ್ಥಳಗಳಲ್ಲಿ ದೊರೆತ ಹಲವಾರು ಚಿತ್ರಿಕೆಗಳು, ವಸ್ತುಗಳು ಚೆನ್ನೈ ಮತ್ತು ಲಂಡನ್ ವಸ್ತುಸಂಗ್ರಹಾಲಯಗಳಲ್ಲಿ ರಕ್ಷಿಸಲ್ಪಟ್ಟಿವೆ.

ಅಮರಾವತಿಯು ಅಮರೇಶ್ವರ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ, ಇದು ಶಿವನಿಗೆ ಸಮರ್ಪಿತವಾಗಿದೆ, ಇದು 2 ನೇ ಶತಮಾನದ BCE ಗೆ ಹಿಂದಿನದು ಮತ್ತು ಒಮ್ಮೆ ಶಾತವಾಹನರು ಮತ್ತು ಪಲ್ಲವ ರಾಜರ ರಾಜಧಾನಿಯಾಗಿತ್ತು. ಶಾತವಾಹನರ ಉದಯದ ಮೊದಲು ಅಮರಾವತಿ ಬೌದ್ಧ ಧರ್ಮದ ಸ್ಥಾನವಾಗಿತ್ತು ಮತ್ತು ಮೌರ್ಯ ಸಾಮ್ರಾಜ್ಯದ ಅಡಿಯಲ್ಲಿ ಚಕ್ರವರ್ತಿ ಅಶೋಕ (269-232 BC) ಆಳ್ವಿಕೆಯಲ್ಲಿ ಸ್ತೂಪ ಮತ್ತು ಮಠವನ್ನು ನಿರ್ಮಿಸಲಾಯಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:21 am, Thu, 6 June 24

ತಾಜಾ ಸುದ್ದಿ