National Doctors Day: 3 ಅಡಿ ಎತ್ತರದ ಗಣೇಶ್ ಬಾರಯ್ಯ ವಿಶ್ವದ ಅತ್ಯಂತ ಕುಳ್ಳಗಿನ ಡಾಕ್ಟರ್
ಗಣೇಶ್ ಬಾರಯ್ಯ ವಿಶ್ವದಲ್ಲೇ ಅತ್ಯಂತ ಕುಳ್ಳಗಿನ ವೈದ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಡಾ. ಗಣೇಶ್ ಅವರು ಎಲ್ಲಾ ಅಡೆತಡೆಗಳನ್ನು ಮೆಟ್ಟಿ ನಿಂತು ಇದೀಗಾ ವೈದ್ಯರಾಗಿ ತನ್ನ ಸೇವೆಯನ್ನು ಪ್ರಾರಂಭಿಸಿದ್ದಾರೆ. 2018ರಲ್ಲಿ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಸಮಿತಿಯು ಕುಳ್ಳಗಿರುವುದರಿಂದ ಗಣೇಶ್ ಅವರನ್ನು ಎಂಬಿಬಿಎಸ್ ಕೋರ್ಸ್‌ಗೆ ಪ್ರವೇಶ ತಿರಸ್ಕರಿಸಿತ್ತು. ಎತ್ತರ ಕಡಿಮೆ ಇರುವ ಕಾರಣ ತುರ್ತು ಚಿಕಿತ್ಸೆ ಸಮಯದಲ್ಲಿ ನಿಭಾಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಗುಜರಾತ್ ಮೂಲದ ಗಣೇಶ್ ಬಾರಯ್ಯ ಅವರು ವಿಶ್ವದಲ್ಲೇ ಅತ್ಯಂತ ಕುಳ್ಳಗಿನ ವೈದ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೇವಲ 3 ಅಡಿ 4 ಇಂಚು ಎತ್ತರದ ಡಾ. ಗಣೇಶ್ ಅವರ ದೃಢಸಂಕಲ್ಪ ಮತ್ತು ಎಲ್ಲಾ ಅಡೆತಡೆಗಳನ್ನು ಮೆಟ್ಟಿ ನಿಂತು ಇದೀಗಾ ವೈದ್ಯರಾಗಿ ತನ್ನ ಸೇವೆಯನ್ನು ಪ್ರಾರಂಭಿಸಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಜ್ಞಾನದ ಹೊರತಾಗಿಯೂ, ಗಣೇಶ್ ಅವರು ತಮ್ಮ ಎತ್ತರದಿಂದಾಗಿ ಹಲವಾರು ಟೀಕೆ ಹಾಗೂ ಸವಾಲುಗಳನ್ನು ಎದುರಿಸಿದ್ದರು.
2018 ರಲ್ಲಿ, ಬೋರ್ಡ್‌ಗಳಲ್ಲಿ 87 ಪ್ರತಿಶತ ಮತ್ತು NEET ನಲ್ಲಿ 233 ಅಂಕಗಳನ್ನು ಗಳಿಸಿದ್ದರೂ ಗುಜರಾತ್ ಸರ್ಕಾರವು MBBS ಅನ್ನು ಮುಂದುವರಿಸಲು ಅನುಮತಿಯನ್ನು ನಿರಾಕರಿಸಿತ್ತು. ಬಳಿಕ ತನ್ನ ಕಾಲೇಜಿನ ಪ್ರಾಂಶುಪಾಲರ ಸಹಾಯ ಪಡೆದು ಜಿಲ್ಲಾಧಿಕಾರಿ, ರಾಜ್ಯ ಶಿಕ್ಷಣ ಸಚಿವರನ್ನು ಸಂಪರ್ಕಿಸಿ ನಂತರ ಗುಜರಾತ್ ಹೈಕೋರ್ಟ್ ವರೆಗೂ ಹೋಗಿದ್ದಾರೆ. ಹೈಕೋರ್ಟ್‌ನಲ್ಲಿ ಕೇಸ್ ಸೋತ ನಂತರವೂ ಡಾ.ಬಾರಯ್ಯ ಭರವಸೆ ಕಳೆದುಕೊಳ್ಳಲಿಲ್ಲ. ಅವರು ಸುಪ್ರೀಂ ಕೋರ್ಟ್ ಸಂಪರ್ಕಿಸಿ 2018 ರಲ್ಲಿ ಪ್ರಕರಣವನ್ನು ಗೆದ್ದು, 2019 ರಲ್ಲಿ MBBS ಗೆ ಪ್ರವೇಶ ಪಡೆದರು ಮತ್ತು ಈಗ ಅವರ MBBS ಮುಗಿಸಿದ ನಂತರ ಭಾವನಗರದ Sir-T ಆಸ್ಪತ್ರೆಯಲ್ಲಿ ಇಂಟರ್ನ್ ಆಗಿ ಕೆಲಸ ಮಾಡುತ್ತಿದ್ದಾರೆ.
“ನಾನು 12 ನೇ ತರಗತಿಯಲ್ಲಿ ಉತ್ತೀರ್ಣನಾದೆ ಮತ್ತು MBBS ಗೆ ಸೇರಲು NEET ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ, ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಸಮಿತಿಯು ನಾನು ಕುಳ್ಳಗಿರುವುದರಿಂದ ನನ್ನನ್ನು ತಿರಸ್ಕರಿಸಿತು. ಎತ್ತರ ಕಡಿಮೆ ಇರುವ ಕಾರಣ ತುರ್ತು ಚಿಕಿತ್ಸೆ ಸಮಯದಲ್ಲಿ ನಿಭಾಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ನಂತರ, ನಾನು ನೀಲಕಂಠ ವಿದ್ಯಾಪೀಠದ ನನ್ನ ಪ್ರಾಂಶುಪಾಲ ಡಾ ದಲಪತ್ ಭಾಯಿ ಕಟಾರಿಯಾ ಮತ್ತು ರೇವೀಶ್ ಸರ್ವೈಯಾ ಅವರೊಂದಿಗೆ ಈ ಬಗ್ಗೆ ಮಾತನಾಡಿದೆ ಮತ್ತು ಇದರ ಬಗ್ಗೆ ನಾವು ಏನು ಮಾಡಬಹುದು ಎಂದು ಕೇಳಿದ್ದೆ” ಎಂದು ಡಾ ಬಾರಯ್ಯ ತಮ್ಮ ಆರಂಭಿಕ ದಿನದ ಹೋರಾಟದ ಬಗ್ಗೆ ANI ಗೆ ಹೇಳಿದ್ದಾರೆ.
ಇದನ್ನೂ ಓದಿ: Mental Abuse: ಫಸ್ಟ್ ನೈಟ್ ದಿನದಿಂದಲೇ ಗಂಡು ಮಗು ಹೆರುವಂತೆ ಅತ್ತೆ ಮಾವನಿಂದ ಕಿರುಕುಳ; ಕೋರ್ಟ್ ಮೆಟ್ಟಿಲೇರಿದ ಯುವತಿ
“ಭಾವನಗರ ಕಲೆಕ್ಟರ್ ಮತ್ತು ಗುಜರಾತ್ ಶಿಕ್ಷಣ ಸಚಿವರನ್ನು ಭೇಟಿ ಮಾಡಲು ಅವರು ನನಗೆ ಹೇಳಿದರು. ಭಾವನಗರ ಕಲೆಕ್ಟರ್ ನಿರ್ದೇಶನದ ನಂತರ, ನಾವು ಪ್ರಕರಣವನ್ನು ಗುಜರಾತ್ ಹೈಕೋರ್ಟ್‌ಗೆ ತೆಗೆದುಕೊಳ್ಳಲು ನಿರ್ಧರಿಸಿದ್ದೇವೆ. ವಿಕಲಚೇತನರಾಗಿರುವ ಇಬ್ಬರು ಅಭ್ಯರ್ಥಿಗಳು ನಮ್ಮೊಂದಿಗಿದ್ದರು. ನಾವು ಹೈಕೋರ್ಟ್‌ನಲ್ಲಿ ಪ್ರಕರಣವನ್ನು ಸೋತಿದ್ದೇವೆ ಆದರೆ ನಂತರ ನಾವು ನಿರ್ಧಾರವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ನಿರ್ಧರಿಸಿದ್ದೇವೆ, ”ಎಂದು ಅವರು ಹೇಳಿದರು.
ಅವರ ಎಂಬಿಬಿಎಸ್ ಪ್ರಯಾಣವು ಅಂತಿಮವಾಗಿ ಹೇಗೆ ಪ್ರಾರಂಭವಾಯಿತು ಎಂಬುದರ ಕುರಿತು ಮಾತನಾಡಿದ ಡಾ.ಬಾರಯ್ಯ, “2018 ರಲ್ಲಿ, ನಾನು ಎಂಬಿಬಿಎಸ್ ಕೋರ್ಸ್‌ಗೆ ಪ್ರವೇಶ ಪಡೆಯಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು. 2018 ರ ಎಂಬಿಬಿಎಸ್ ಕೋರ್ಸ್‌ಗೆ ಪ್ರವೇಶ ಪೂರ್ಣಗೊಂಡಿದ್ದರಿಂದ, ನಾನು 2019 ರ ಎಂಬಿಬಿಎಸ್ ಕೋರ್ಸ್‌ಗೆ ಪ್ರವೇಶ ಪಡೆಯುತ್ತೇನೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ನಾನು ಭಾವನಗರದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆದೆ ಮತ್ತು ನನ್ನ MBBS ಪ್ರಯಾಣ ಪ್ರಾರಂಭವಾಯಿತು ಎಂದು ಹೇಳಿಕೊಂಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:08 am, Mon, 1 July 24