ಬಿಗ್ ಬಾಸ್ ಆಟದಲ್ಲಿ ಎಷ್ಟೇ ಕಷ್ಟಪಟ್ಟರೂ ಈ ಸ್ಪರ್ಧಿಗಳಿಗೆ ಕಾಣುತ್ತಿದೆ ಮನೆ ದಾರಿ

‘ಬಿಗ್ ಬಾಸ್ ಕನ್ನಡ ಸೀಸನ್​ 11’ ರಿಯಾಲಿಟಿ ಶೋ ಕೊನೆ ಹಂತವನ್ನು ತಲುಪುತ್ತಿದೆ. ಇಲ್ಲಿಯವರೆಗೂ ಕಷ್ಟಪಟ್ಟು ಪೈಪೋಟಿ ನೀಡಿದ ಸ್ಪರ್ಧಿಗಳಿಗೆ ಕೊನೇ ಟಾಸ್ಕ್​ನಲ್ಲಿ ನಿರೀಕ್ಷಿತ ಗೆಲವು ಸಿಕ್ಕಿಲ್ಲ. ಹಾಗಾಗಿ ಮನೆಯ ದಾರಿ ಕಾಣಲು ಆರಂಭಿಸಿದೆ. ಇವರ ಪೈಕಿ ಯಾರು ಈ ವಾರ ಬಿಗ್ ಬಾಸ್​ ಆಟಕ್ಕೆ ವಿದಾಯ ಹೇಳಬೇಕಾಗುತ್ತದೆ ಎಂಬುದನ್ನು ಸದ್ಯದಲ್ಲೇ ನಿರ್ಧಾರ ಆಗಲಿದೆ.

ಬಿಗ್ ಬಾಸ್ ಆಟದಲ್ಲಿ ಎಷ್ಟೇ ಕಷ್ಟಪಟ್ಟರೂ ಈ ಸ್ಪರ್ಧಿಗಳಿಗೆ ಕಾಣುತ್ತಿದೆ ಮನೆ ದಾರಿ
Bigg Boss Kannada Season 11
Follow us
ಮದನ್​ ಕುಮಾರ್​
|

Updated on: Jan 07, 2025 | 10:11 PM

ಪ್ರತಿ ವಾರವೂ ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್​ ಪ್ರತಿಕ್ರಿಯೆ ಬೇರೆ ಬೇರೆ ರೀತಿ ನಡೆಯುತ್ತದೆ. ಈ ವಾರ ‘ಟಿಕೆಟ್​ ಟು ಫಿನಾಲೆ’ ಮತ್ತು ‘ಟಿಕೆಟ್​ ಹೋಮ್’ ಎಂದು ವಿಂಗಡಿಸಿ ಟಾರ್ಗೆಟ್ ನೀಡಲಾಗಿದೆ. ಫಿನಾಲೆ ಟಿಕೆಟ್ ಪಡೆಯಲು ಎಲ್ಲರೂ ಕಷ್ಟಪಡುತ್ತಿದ್ದಾರೆ. ಅದರ ನಡುವೆ 5 ಸುತ್ತಿನ ಆಟದಲ್ಲಿ ಹಿನ್ನಡೆ ಕಂಡ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ತ್ರಿವಿಕ್ರಮ್, ಭವ್ಯಾ ಗೌಡ, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ ಹಾಗೂ ಧನರಾಜ್ ಅವರ ಹೆಸರನ್ನು ನಾಮಿನೇಟ್ ಮಾಡಲಾಗಿದೆ. ಗೌತಮಿ ಜಾದವ್, ಉಗ್ರಂ ಮಂಜು, ಹನುಮಂತ ಹಾಗೂ ರಜತ್ ಅವರು ಸದ್ಯಕ್ಕೆ ಸೇಫ್ ಆಗಿದ್ದಾರೆ.

ನೋಡನೋಡುತ್ತಿದ್ದಂತೆಯೇ ಬಿಗ್ ಬಾಸ್ ಆಟದಲ್ಲಿ 100 ದಿನಗಳು ಕಳೆದಿವೆ. ಬಿಗ್ ಬಾಸ್​ ಗ್ರ್ಯಾಂಡ್​ ಓಪನಿಂಗ್ ನಿನ್ನೆ-ಮೊನ್ನೆ ಆದಂತೆ ಇದೆ. ಹಲವು ಬಗೆಯ ಟಾಸ್ಕ್​, ನೂರಾರು ಕಿರಿಕ್, ವಾದ-ಪ್ರತಿವಾದ, ಹಲವಾರು ಡ್ರಾಮಾಗಳು ನಡೆದಿವೆ. ಭಾರಿ ಸೌಂಡು ಮಾಡುತ್ತಿದ್ದ ಸ್ಪರ್ಧಿಗಳೆಲ್ಲ ಎಲಿಮಿನೇಟ್ ಆದರು. ಟಾಸ್ಕ್ ಆಡುತ್ತಾ, ತಮ್ಮದೇ ತಂತ್ರಗಾರಿಕೆ ಮಾಡುತ್ತಾ 9 ಜನರು ಈಗ ಉಳಿದುಕೊಂಡಿದ್ದಾರೆ.

ಕಿಚ್ಚ ಸುದೀಪ್ ಅವರು ನಡೆಸಿಕೊಡುವ ಕೊನೇ ಬಿಗ್ ಬಾಸ್ ಸೀಸನ್​ ಇದು. ಆದ್ದರಿಂದ ವೀಕ್ಷಕರಿಗೆ ಇದು ತುಂಬ ವಿಶೇಷವಾದ ಸೀಸನ್. ಕಳೆದ ಸೀಸನ್​ಗಿಂತಲೂ ಹೆಚ್ಚಿನ ಟಿಆರ್​ಪಿ ಪಡೆದುಕೊಳ್ಳುವಲ್ಲಿ ಈ ಸೀಸನ್ ಯಶಸ್ವಿ ಆಗಿದೆ. ಕಳೆದ ವಾರ ಫ್ಯಾಮಿಲಿ ಸಂಚಿಕೆಗಳು ಪ್ರಸಾರ ಆದವು. ಎಲ್ಲರೂ ನಗುವಿನ ಅಲೆಯಲ್ಲಿ ತೇಲಿದ್ದರು. ಆದರೆ ಈ ವಾರ ಟಿಕೆಟ್​ ಟು ಫಿನಾಲೆ ಟಾಸ್ಕ್ ನೀಡಿದ್ದರಿಂದ ಎಲ್ಲರ ಆಟದಲ್ಲಿ ಅಗ್ರೆಷನ್ ಜಾಸ್ತಿ ಆಗಿದೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?

ವೈಲ್ಡ್ ಕಾರ್ಡ್​ ಮೂಲಕ ಬಂದಿರುವ ಹನುಮಂತ, ರಜತ್ ಅವರು ತುಂಬ ಸ್ಟ್ರಾಂಗ್ ಸ್ಪರ್ಧಿಗಳ ಎನಿಸಿಕೊಂಡಿದ್ದಾರೆ. ತ್ರಿವಿಕ್ರಮ್ ಅವರು ಕೇವಲ ಭವ್ಯಾ ಗೌಡ ಜೊತೆ ಹೆಚ್ಚು ಕಾಲ ಕಳೆದಿದ್ದರಿಂದ ಅವರ ಆಟಕ್ಕೆ ಹಿನ್ನಡೆ ಆಗಿದೆ. ಮಂಜು ಮತ್ತು ಗೌತಮಿ ನಡುವಿನ ಸ್ನೇಹ ಕೂಡ ಆಟಕ್ಕೆ ಅಡ್ಡಿ ಆಗಿದೆ. ಇನ್ನು ಕೇವಲ ಮೂರು ವಾರ ಮಾತ್ರ ಬಿಗ್ ಬಾಸ್ ಆಟ ಉಳಿದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?
ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?
ವೇದಿಕೆ ಮೇಲೆ ಚರ್ಚೆಯಲ್ಲಿ ಮಗ್ನರಾದ ಕುಮಾರಸ್ವಾಮಿ ಮತ್ತು ವಿಜಯೇಂದ್ರ
ವೇದಿಕೆ ಮೇಲೆ ಚರ್ಚೆಯಲ್ಲಿ ಮಗ್ನರಾದ ಕುಮಾರಸ್ವಾಮಿ ಮತ್ತು ವಿಜಯೇಂದ್ರ
ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ, ಅವರಿಗೆ ವಿಶ್ರಾಂತಿಯ ಅಗತ್ಯವಿದೆ:ಶಶಿಕಲಾ
ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ, ಅವರಿಗೆ ವಿಶ್ರಾಂತಿಯ ಅಗತ್ಯವಿದೆ:ಶಶಿಕಲಾ