ಹಳ್ಳಿಯಿಂದ ಬಂದ ಅಪ್ಪ, ಅಮ್ಮನಿಗೆ ಹೆಮ್ಮೆಯಿಂದ ಬಿಗ್ ಬಾಸ್ ಮನೆ ತೋರಿಸಿದ ಹನುಮಂತ

ಬಿಗ್ ಬಾಸ್ ಮನೆಯಲ್ಲಿ ಈ ವಾರ ಫ್ಯಾಮಿಲಿ ಸಂಚಿಕೆಗಳು ನಡೆಯುತ್ತಿವೆ. ದೊಡ್ಮನೆಯ ಸದಸ್ಯರ ಕುಟುಂಬದವರು ಬಿಗ್ ಬಾಸ್​ಗೆ ಅತಿಥಿಯಾಗಿ ಬಂದಿದ್ದಾರೆ. ಹನುಮಂತ ಅವರ ತಂದೆ-ತಾಯಿ ಕೂಡ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಅವರು ಬಂದಿದ್ದಕ್ಕೆ ಹನುಮಂತಗೆ ಖುಷಿ ಆಗಿದೆ. ಬಹಳ ಹೆಮ್ಮೆಯಿಂದ ಅವರು ಬಿಗ್ ಬಾಸ್ ಮನೆಯನ್ನು ತಂದೆ-ತಾಯಿಗೆ ತೋರಿಸಿದ್ದಾರೆ.

ಹಳ್ಳಿಯಿಂದ ಬಂದ ಅಪ್ಪ, ಅಮ್ಮನಿಗೆ ಹೆಮ್ಮೆಯಿಂದ ಬಿಗ್ ಬಾಸ್ ಮನೆ ತೋರಿಸಿದ ಹನುಮಂತ
Bigg Boss Kannada 11
Follow us
ಮದನ್​ ಕುಮಾರ್​
|

Updated on: Jan 03, 2025 | 10:25 PM

ಸಿಂಗರ್ ಹನುಮಂತ ಪಕ್ಕಾ ಹಳ್ಳಿ ಹೈದ. ಅವರಿಗೆ ರಿಯಾಲಿಟಿ ಶೋಗಳಲ್ಲಿ ಅವಕಾಶ ಸಿಕ್ಕಿದ್ದರಿಂದ ಬದುಕು ಬದಲಾಯಿತು. ಅವರ ಪೋಷಕರು ಈಗಲೂ ಹಳ್ಳಿಯಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಪಟ್ಟಣದ ಜೀವನದ ಬಗ್ಗೆ ಅವರಿಗೆ ಅಷ್ಟಾಗಿ ಪರಿಚಯ ಇಲ್ಲ. ಈಗ ಮಗ ಬಿಗ್ ಬಾಸ್​ ಶೋನಲ್ಲಿ ಸ್ಪರ್ಧಿಸುತ್ತಿದ್ದಾನೆ ಎಂಬ ಕಾರಣಕ್ಕೆ ಅವರು ಬೆಂಗಳೂರಿಗೆ ಬಂದಿದ್ದಾರೆ. ಬಿಗ್ ಬಾಸ್ ಮನೆಯ ಒಳಗೆ ಅವರು ಕಾಲಿಟ್ಟಿದ್ದಾರೆ. ಹಳ್ಳಿಯಿಂದ ಬಂದಿರುವ ಅಪ್ಪ ಮೇಘಪ್ಪ, ಅಮ್ಮ ಶೀಲವ್ವ ಅವರಿಗೆ ಹನುಮಂತ ಅವರು ತುಂಬ ಹೆಮ್ಮೆಯಿಂದ ಬಿಗ್ ಬಾಸ್ ಮನೆಯನ್ನು ತೋರಿಸಿದ್ದಾರೆ.

ಮೊದಲಿಗೆ ಹನುಮಂತ ಅವರು ಬಿಗ್ ಬಾಸ್ ಮನೆಗೆ ಬಂದಾಗ ಈ ರಿಯಾಲಿಟಿ ಶೋನ ರೀತಿ, ನೀತಿ ಬಗ್ಗೆ ಅವರಿಗೆ ಹೆಚ್ಚೇನೂ ತಿಳಿದಿರಲಿಲ್ಲ. ಆಗ ಧನರಾಜ್ ಅವರು ಎಲ್ಲವನ್ನೂ ತೋರಿಸಿಕೊಟ್ಟಿದ್ದರು. ಈಗ ಹಲವು ದಿನಗಳು ಕಳೆದಿರುವುದರಿಂದ ಹನುಮಂತ ಅವರು ಬಿಗ್ ಬಾಸ್ ಮನೆಗೆ ಹೊಂದಿಕೊಂಡಿದ್ದಾರೆ. ಊರಿಂದ ಬಂದ ತಂದೆ-ತಾಯಿಗೆ ಅವರು ದೊಡ್ಮನೆಯನ್ನು ಪರಿಚಯಿಸಿದ್ದಾರೆ.

ಮೇಘಪ್ಪ ಮತ್ತು ಶೀಲವ್ವ ಅವರು ಬಿಗ್ ಬಾಸ್ ಮನೆಯಲ್ಲಿ ಬಹಳ ಲವಲವಿಕೆಯಿಂದ ಕಾಲ ಕಳೆದಿದ್ದಾರೆ. ತಮ್ಮದೇ ಭಾಷೆಯಲ್ಲಿ ಹಾಡು ಹೇಳಿ ಎಲ್ಲರನ್ನೂ ರಂಜಿಸಿದ್ದಾರೆ. ಊರಿನಿಂದ ತಂದಿದ್ದ ಊಟವನ್ನು ಎಲ್ಲರಿಗೂ ಬಡಿಸಿದ್ದಾರೆ. ಉತ್ತರ ಕರ್ನಾಟಕದ ರೊಟ್ಟಿಯ ಸವಿಯನ್ನು ಎಲ್ಲರಿಗೂ ನೀಡಿದ್ದಾರೆ. ಅಪ್ಪ-ಅಮ್ಮ ಬಿಗ್ ಬಾಸ್ ಮನೆಯಲ್ಲಿ ಇರುವಷ್ಟು ಹೊತ್ತು ಹನುಮಂತ ತುಂಬ ಖುಷಿಪಟ್ಟಿದ್ದಾರೆ.

ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​ಗೆ ಹನುಮಂತ ಫಿದಾ

ಹನುಮಂತನ ಮದುವೆ ಬಗ್ಗೆಯೂ ಬಿಗ್ ಬಾಸ್ ಮನೆಯಲ್ಲಿ ಚರ್ಚೆ ಆಗಿದೆ. ತಮ್ಮ ಮನೆಗೆ ಬರುವ ಸೊಸೆ ತಮ್ಮ ರೀತಿಯೇ ಬಟ್ಟೆ ಧರಿಸಬೇಕು ಎಂದು ಹನುಮಂತ ಅವರ ತಾಯಿ ಹೇಳಿದ್ದಾರೆ. ಶೀಲವ್ವ ತಂದಿದ್ದ ಬಟ್ಟೆಯನ್ನು ಧರಿಸಿಕೊಂಡು ಭವ್ಯಾ ಗೌಡ ಸುತ್ತಾಡಿದರು. ನನಗೂ ಈ ರೀತಿಯ ಬಟ್ಟೆ ಬೇಕು ಎಂದು ಅವರು ಬೇಡಿಕೆ ಇಟ್ಟರು. ಒಟ್ಟಾರೆ ಈ ಸಂಚಿಕೆ ಸಖತ್ ಲವಲವಿಕೆಯಿಂದ ಕೂಡಿತ್ತು. ಬಿಗ್ ಬಾಸ್ ಮನೆಯಲ್ಲಿ 97 ದಿನಗಳ ಕಳೆದಿವೆ. ಸದ್ಯದಲ್ಲೇ ಫಿನಾಲೆ ಬರಲಿದೆ. ಯಾರು ಫಿನಾಲೆಗೆ ಬರಲಿದ್ದಾರೆ ಎಂಬುದನ್ನು ತಿಳಿಯಲು ವೀಕ್ಷಕರು ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.