AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಾರವೂ ಬಿಗ್ ಬಾಸ್ ಮನೆಯಲ್ಲಿ ಇಲ್ಲ ಎಲಿಮಿನೇಷನ್; ಮುಂದಿನ ವಾರ ಟ್ವಿಸ್ಟ್ ಪಕ್ಕಾ

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಎಲಿಮಿನೇಷನ್ ಇಲ್ಲದ ವಾರಗಳ ಸಂಖ್ಯೆ ಹೆಚ್ಚಾಗಿದೆ. ಹಬ್ಬಗಳು, ಹೊಡೆದಾಟ ಮುಂತಾದ ಕಾರಣಗಳಿಂದ ಎಲಿಮಿನೇಷನ್ ನಡೆದಿಲ್ಲ. ಈ ವಾರ ಫ್ಯಾಮಿಲಿ ವೀಕ್ ಆಗಿದ್ದು, ಯಾವುದೇ ನಾಮಿನೇಷನ್ ನಡೆದಿಲ್ಲ. ಈ ಬಾರಿಯ ಬಿಗ್ ಬಾಸ್ ನಿರ್ವಹಣೆ ವಿವಾದಕ್ಕೆ ಒಳಗಾಗಿದೆ.

ಈ ವಾರವೂ ಬಿಗ್ ಬಾಸ್ ಮನೆಯಲ್ಲಿ ಇಲ್ಲ ಎಲಿಮಿನೇಷನ್; ಮುಂದಿನ ವಾರ ಟ್ವಿಸ್ಟ್ ಪಕ್ಕಾ
ಬಿಗ ಬಾಸ್
ರಾಜೇಶ್ ದುಗ್ಗುಮನೆ
|

Updated on: Jan 03, 2025 | 1:02 PM

Share

ಈ ಬಾರಿಯ ಬಿಗ್ ಬಾಸ್​ನಲ್ಲಿ ಎಲಿಮಿನೇಷನ್ ಇಲ್ಲದೆ ನಡೆದ ವಾರಗಳ ಪಟ್ಟಿ ದೊಡ್ಡದಿದೆ. ಒಂದು ವಾರ ಹೊಡೆದಾಡಿಕೊಂಡು ಇಬ್ಬರು ಎಲಿಮಿನೇಷನ್ ಆದರು ಎಂಬ ಕಾರಣಕ್ಕೆ, ಮತ್ತೊಂದು ವಾರ ಹಬ್ಬದ ಕಾರಣಕ್ಕೆ, ಮತ್ತೊಂದು ವಾರ ಯಾವುದೇ ಕಾರಣ ಇಲ್ಲದೆ ಹೀಗೆ ಅನೇಕ ಬಾರಿ ‘ನೋ ಎಲಿಮಿನೇಷನ್ ವೀಕ್’ ಆಗಿದೆ. ಅದಕ್ಕೆ ಈ ವಾರ ಹೊಸ ಸೇರ್ಪಡೆ. ಹೀಗಾಗಿ, ಮುಂದಿನ ವಾರ ಡಬಲ್ ಎಲಿಮಿನೇಷನ್ ನಡೆಯಬಹುದು ಎಂದು ಊಹಿಸಲಾಗುತ್ತಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ ಒಳ್ಳೆಯ ಟಿಆರ್​ಪಿ ಪಡೆಯುತ್ತಿದೆ ನಿಜ. ಅದರ ಜೊತೆಗೆ ಡ್ರಾಮಾಗಳ ಸಂಖ್ಯೆಯೂ ಅಧಿಕವಾಗಿದೆ. ಸುಖಾಸುಮ್ಮನೆ ಎಲಿಮಿನೇಷನ್ ಮಾಡದೆ ಇರುವ ಕೆಲಸ ಆಗುತ್ತಿದೆ. ಈಗ ಈ ವಾರ ಫ್ಯಾಮಿಲಿ ವೀಕ್ ಆಗಿದ್ದು, ಯಾವುದೇ ನಾಮಿನೇಷನ್ ಪ್ರಕ್ರಿಯೆ ನಡೆದಿಲ್ಲ.

ಸದ್ಯ 9 ಮಂದಿ ಬಿಗ್ ಬಾಸ್​ನಲ್ಲಿ ಇದ್ದು, ಜನವರಿ ಅಂತ್ಯಕ್ಕೆ ಫಿನಾಲೆ ನಡೆಯುವ ಸಾಧ್ಯತೆ ಇದೆ. ದೊಡ್ಮನೆಯಲ್ಲಿ ಈಗ ಉಳಿದುಕೊಂಡಿರೋದು 9 ಮಂದಿ. ಹೀಗಾಗಿ, ಮುಂದಿನ ವಾರ ಡಬಲ್ ಎಲಿಮಿನೇಷನ್ ನಡೆಯುವ ಸಾಧ್ಯತೆ ದಟ್ಟವಾಗಿದೆ. ಆ ವಾರ ಯಾರು ಹೊರ ಹೋಗುತ್ತಾರೆ ಎನ್ನುವ ಕುತೂಹಲ ಮೂಡಿದೆ.

ಈಗ ಕ್ಯಾಪ್ಟನ್ ಆಗುವುದು ತುಂಬಾನೇ ಮುಖ್ಯವಾಗುತ್ತದೆ. ಈ ವಾರ ಕ್ಯಾಪ್ಟನ್ ಆದರೆ ಮುಂದಿನ ವಾರಕ್ಕೆ ಇಮ್ಯೂನಿಟಿ ಸಿಗಲಿದೆ. ಈ ವಾರವಂತೂ ಯಾವುದೇ ಎಲಿಮಿನೇಷನ್ ಇಲ್ಲದೆ ಅವರು ಸೇಫ್ ಆಗಲಿದ್ದಾರೆ. ಇದರ ಜೊತೆಗೆ ಮುಂದಿನ ವಾರ ಡಬಲ್ ಎಲಿಮಿನೇಷನ್ ನಡೆಯುವ ಸಾಧ್ಯತೆ ಇದೆ.

ಇದನ್ನೂ ಓದಿ: ಬಿಗ್ ಬಾಸ್​ನಿಂದ ಹೊರ ಬಂದಮೇಲೆ ಮೋಕ್ಷಿತಾ ಮದುವೆ 

ಈ ಬಾರಿಯ ಬಿಗ್ ಬಾಸ್ ನಿರ್ವಹಣೆ ಬಗ್ಗೆ ಅಪಸ್ವರ ಎದ್ದಿದೆ. ಸರಿಯಾದ ರೀತಿಯಲ್ಲಿ ಎಲಿಮಿನೇಷನ್ ಪ್ರಕ್ರಿಯೆ ನಡೆಸಲಾಗುತ್ತಿಲ್ಲ ಎನ್ನುವ ಆರೋಪವನ್ನು ಅನೇಕರು ಮಾಡಿದ್ದಾರೆ. ಈ ಮೊದಲ ಸೀಸನ್​ಗಳಲ್ಲಿ ಎಲಿಮಿನೇಷನ್ ಇಲ್ಲದ ವಾರಗಳನ್ನು ಹುಡುಕ ಬೇಕಿತ್ತು. ಆದರೆ, ಈಗ ಹಾಗಿಲ್ಲ. ಸದ್ಯ ದೊಡ್ಮನೆಯಲ್ಲಿ ಉಗ್ರಂ ಮಂಜು, ಮೋಕ್ಷಿತಾ, ಗೌತಮಿ, ರಜತ್, ಧನರಾಜ್, ಹನುಮಂತ, ಚೈತ್ರಾ, ತ್ರಿವಿಕ್ರಂ ಹಾಗೂ ಭವ್ಯಾ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ