ಚೈತ್ರಾ ಕುಟುಂಬದವರು ಬರುತ್ತಿದ್ದಂತೆ ರಜತ್‌ಗೆ ಎಚ್ಚರಿಕೆ ಕೊಟ್ಟ ಬಿಗ್ ಬಾಸ್
ಬಿಗ್ ಬಾಸ್ ಕನ್ನಡದಲ್ಲಿ ರಜತ್ ಮತ್ತು ಚೈತ್ರಾ ನಡುವಿನ ಕಿರಿಕ್‌ಗಳು ಮುಂದುವರೆದಿವೆ. ಚೈತ್ರಾ ಅವರ ಕುಟುಂಬ ದೊಡ್ಮನೆಗೆ ಭೇಟಿ ನೀಡಿದಾಗ, ರಜತ್ ಚೈತ್ರಾ ಅವರ ತಂಗಿಯನ್ನು ಕಾಲೆಳೆದರು. ಇದರಿಂದ ಬಿಗ್ ಬಾಸ್ ರಜತ್‌ಗೆ ಎಚ್ಚರಿಕೆ ನೀಡಿದರು. ಚೈತ್ರಾ ಅವರ ತಾಯಿ ಮತ್ತು ತಂಗಿಯ ಆಗಮನದಿಂದ ದೊಡ್ಮನೆಯಲ್ಲಿ ಹೊಸ ಉತ್ಸಾಹ ಮೂಡಿದೆ.
ರಜತ್ ಹಾಗೂ ಚೈತ್ರಾ ಮಧ್ಯೆ ನಡೆದ ಕಿರಿಕ್‌ಗಳು ಒಂದೆರಡಲ್ಲ. ಚೈತ್ರಾ ಅವರನ್ನು ಗೋಳು ಹೊಯ್ದುಕೊಳ್ಳುವದರಲ್ಲಿ ರಜತ್ ಅವರು ಯಾವಾಗಲೂ ಮುಂದಿರುತ್ತಾರೆ. ಇದು ಪದೇ ಪದೇ ಸಂಭವಿಸುತ್ತಿದೆ. ಇತ್ತೀಚೆಗೆ ಅದು ಫನ್ ಆಗಿ ಬದಲಾಗಿದೆ. ರಜತ್ ಅವರು ನಿರಂತರವಾಗಿ ಚೈತ್ರಾ ಅವರ ಕಾಲೆಳೆಯುತ್ತಾರೆ. ಇದಕ್ಕೆ ಚೈತ್ರಾ ಅವರು ಬೇಸರ ಮಾಡಿಕೊಳ್ಳದೆ ನಗುತ್ತಾರೆ. ಈಗ ಚೈತ್ರಾ ಅವರ ಕುಟುಂಬ ದೊಡ್ಮನೆಗೆ ಬಂದಿದೆ. ಈ ವೇಳೆ ರಜತ್‌ಗೆ ಬಿಗ್ ಬಾಸ್ ಒಂದು ಎಚ್ಚರಿಕೆ ನೀಡಿದ್ದಾರೆ.
ಚೈತ್ರಾ ಕುಂದಾಪುರ ಅವರ ತಾಯಿ ರೋಹಿಣಿ ಹಾಗೂ ತಂಗಿ ಮಾನ್ಯ ದೊಡ್ಮನೆಗೆ ಬಂದರು. ಆಗ ರಜತ್ ಅವರು ಮಾನ್ಯ ಬಳಿ ಹೋಗಿ, ‘ಅಕ್ಕನಿಗಿಂತ ನೀನೆ ಚೆನ್ನಾಗಿದೀಯಾ’ ಎಂದರು. ಆಗ ಮಾನ್ಯ ಅವರು ನಕ್ಕರು. ಆ ಬಳಿಕ ತಾಯಿ ಎದುರು ಚೈತ್ರಾ ಅವರು ಕಣ್ಣೀರು ಹಾಕಿದರು. ಈ ವೇಳೆ ರಜತ್ ಅವರು ಚೈತ್ರಾರ ಕಾಲೆಳೆಯುವ ಪ್ರಯತ್ನ ಮಾಡಿದರು.
‘ಇವಳು ನನ್ನ ತಂಗಿ. ನನ್ನಷ್ಟೇ ಹೈಟ್ ಹಾಗೂ ಬಣ್ಣ ಇದಾಳೆ’ ಎಂದರು ಚೈತ್ರಾ. ‘ನಿನಗಿಂತ ಅವಳೇ ಚೆನ್ನಾಗಿದ್ದಾಳೆ’ ಎಂದರು ರಜತ್. ‘ಎಲ್ಲರೂ ನನ್ನನ್ನೇ ತಂಗಿ ಎಂದುಕೊಳ್ಳುತ್ತಾರೆ. ಆದರೆ, ನನಗಿಂತ ಅವಳು 12 ವರ್ಷ ಚಿಕ್ಕವಳು’ ಎಂದರು ಚೈತ್ರಾ. ಆಗ ರಜತ್ ಅವರು ‘ಇಲ್ಲೂ ಲೆವೆಲ್ ಹಾಕ್ಕೊಂಡು ಬಿಟ್ಯಲ್ಲ’ ಎಂದು ಹೇಳುತ್ತಿದ್ದಂತೆ, ‘ಈಗ ದೊಡ್ಮನೆಯಲ್ಲಿ ಇಬ್ಬರು ಚೈತ್ರಾ ಇದ್ದಾರೆ ಹುಶಾರು’ ಎಂದು ಬಿಗ್ ಬಾಸ್ ಎಚ್ಚರಿಕೆ ಕೊಟ್ಟರು.
ಚೈತ್ರಾ ಹಾಗೂ ಮಾನ್ಯ ಮಧ್ಯೆ ನೋಡೋಕೆ ಸ್ವಲ್ಪ ಹೋಲಿಕೆ ಇದೆ. ದೊಡ್ಮನೆಗೆ ಬಂದ ಮಾನ್ಯ ಹಾಗೂ ತಾಯಿಯನ್ನು ನೋಡಿ ಚೈತ್ರಾಗೆ ಹೊಸ ಹುರುಪು ಬಂದಿದೆ. ಎಲ್ಲರ ಆಟದಲ್ಲೂ ಬದಲಾವಣೆಯನ್ನು ನಿರೀಕ್ಷಿಸುವ ಸಾಧ್ಯತೆ ಇದೆ. ಈ ವಾರ ನಾಮಿನೇಷನ್ ನಡೆಯದ ಕಾರಣ ಎಲಿಮಿನೇಷನ್ ನಡೆಯೋದು ಅನುಮಾನ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಬಂದ ಪತ್ನಿ ಬಳಿ ಎರಡನೇ ಮಗುವಿಗೆ ಬೇಡಿಕೆ ಇಟ್ಟ ಧನರಾಜ್
ಬಿಗ್ ಬಾಸ್ ಈಗಾಗಲೇ 95 ದಿನಗಳನ್ನು ಪೂರ್ಣಗೊಳಿಸಿದೆ. ಇನ್ನೂ ಒಂದು ತಿಂಗಳು ಬಿಗ್ ಬಾಸ್ ನಡೆಯುವ ಸಾಧ್ಯತೆ ಇದೆ. ಇದು ಸುದೀಪ್ ಅವರ ಕೊನೆಯ ಸೀಸನ್ ಎಂದು ಹೇಳಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.