ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
‘ಹನುಮಂತ ಮದುವೆಯಾದರೆ ನಿಮ್ಮ ಸೊಸೆ ಇದೇ ರೀತಿ ಬಟ್ಟೆ ಹಾಕಬೇಕಾ’ ಎಂದು ರಜತ್ ಅವರು ಪ್ರಶ್ನೆ ಮಾಡಿದ್ದಾರೆ. ‘ಹೌದು, ಅದಕ್ಕೆ ನಾನು ನಾಲ್ಕು ಜೊತೆ ಬಟ್ಟೆ ಹೊಲೆದಿದ್ದೇನೆ. ಅದು ರೂಢಿ ಆಗುತ್ತದೆ. ಇವತ್ತು ಭಾರ ಎನಿಸುತ್ತದೆ. ಆದರೆ ನಾಳೆ ಹಗುರ ಎನಿಸುತ್ತದೆ. ನಮ್ಮದು ಹೆಣ್ಣು ದೇವತೆ ಮನೆ. ಬೇರೆ ಬಟ್ಟೆ ನಡೆಯಲ್ಲ’ ಎಂದು ಹನುಮಂತನ ತಾಯಿ ಹೇಳಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋಗೆ ಹನುಮಂತ ಅವರ ತಂದೆ-ತಾಯಿ ಅತಿಥಿಯಾಗಿ ಬಂದಿದ್ದಾರೆ. ಮಗನ ಮದುವೆ ಬಗ್ಗೆಯೂ ಅವರು ಮಾತನಾಡಿದ್ದಾರೆ. ತಮ್ಮ ಮನೆಯ ಸೊಸೆ ಆಗುವವಳು ಯಾವ ರೀತಿ ಇರಬೇಕು ಎಂಬುದನ್ನು ಅಮ್ಮ ಹೇಳಿದ್ದಾರೆ. ತಮ್ಮ ರೀತಿಯೇ ಬಟ್ಟೆ ಧರಿಸಬೇಕು ಎಂದು ಅವರು ಷರತ್ತು ಹಾಕಿದ್ದಾರೆ. ಜನವರಿ 3ರ ಸಂಚಿಕೆಯ ಪ್ರೋಮೋ ಇಲ್ಲಿದೆ ನೋಡಿ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos