ಪೆನ್ಡ್ರೈವ್ಗಳ ಬಗ್ಗೆ ಮಾತಾಡುವ ಸೂರಜ್ ರೇವಣ್ಣಗೆ ಆ ಕುಕೃತ್ಯ ರೆಕಾರ್ಡ್ ಮಾಡಿದ್ಯಾರು ಅಂತ ಗೊತ್ತಿಲ್ವೇ? ಶೇಯಸ್ ಪಟೇಲ್
ಆರು ಲಕ್ಷ ಮತ ಪಡೆದಿರುವ ತನಗೆ ಪೆನ್ಡ್ರೈವ್ ಗಳನ್ನು ಬಳಸಿಕೊಂಡು ಸಂಸದನಾಗುವ ದರ್ದು ಇರಲಿಲ್ಲ, ಅಸಲಿಗೆ, ನೂರಾರು ಹೆಣ್ಣುಮಕ್ಕಳ ಬಾಳು ಹಾಳು ಮಾಡಿರುವ ಪೆನ್ಡ್ರೈವ್ ಗಳ ಬಗ್ಗೆ ಮಾತಾಡುವುದು ತನಗೆ ಬೇಕಿಲ್ಲ, ಇಷ್ಟಕ್ಕೂ ಆ ಕುಕೃತ್ಯಗಳನ್ನು ರೆಕಾರ್ಡ್ ಮಾಡಿದ್ದು ಯಾರು? ಆ ಹೆಣ್ಣಮಕ್ಕಳ ನರಕಸದೃಶ ಬದುಕಿಗೆ ಕಾರಣರಾದವರು ಯಾರು? ಎಂದು ಶ್ರೇಯಸ್ ಕೇಳಿದರು.
ಹಾಸನ: ನಿನ್ನೆ ತಮ್ಮ ಭಾಷಣದಲ್ಲಿ ಎಮ್ಮೆಲ್ಸಿ ಸೂರಜ್ ರೇವಣ್ಣ ಮಾಡಿದ ಆರೋಪಗಳಿಗೆ ಹಾಸನದ ಕಾಂಗ್ರೆಸ್ ಸಂಸದ ಶ್ರೇಯಸ್ ಎಂ ಪಟೇಲ್ ಜವಾಬು ನೀಡಿದ್ದಾರೆ. ಸ್ಥಳೀಯ ಸಂಘಸಂಸ್ಥೆಗಳಿಂದ ಎಮ್ಮೆಲ್ಸಿಯಾಗಿ 3 ವರ್ಷ ಕಳೆದರೂ ಇದುವರೆಗೆ ಯಾವುದೇ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿಲ್ಲ, ಮೈಕ್ ಕೈಗೆ ಸಿಕ್ಕ ಕಾರಣ ಜನರ ಚಪ್ಪಾಳೆ, ಶಿಳ್ಳೆ ಗಿಟ್ಟಿಸುವ ಅಂತ ಮಾತಾಡಿದ್ದಾರೆ, ಆ್ಯಸಿಡ್ ವಿಷಯ ಇವರು ಮಾತ್ರ ಯಾಕೆ ಮಾತಾಡುತ್ತಿದ್ದಾರೆ? ಅದು ನಿಜವೇ ಆಗಿದ್ದರೆ ಹೆಚ್ ಡಿ ರೇವಣ್ಣ ಯಾಕೆ ಇದುವರೆಗೆ ಅದರ ಬಗ್ಗೆ ಮಾತಾಡಿಲ್ಲ, ತನ್ನ ಮತ್ತು ಸೂರಜ್ ಅಜ್ಜಿ ಒಟ್ಟಿಗೆ ಒಂದೇ ಕಡೆ ಬೆಳೆದವರು, ಅವರು ಯಾಕೆ ಮಾತಾಡಿಲ್ಲ ಎಂದು ಶ್ರೇಯಸ್ ಪ್ರಶ್ನಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ; ಜೆಡಿಎಸ್ ಎಂಎಲ್ಸಿ ಡಾ.ಸೂರಜ್ ರೇವಣ್ಣ ಜೈಲುಪಾಲು
Latest Videos