ಜಾರಕಿಹೊಳಿ ಮನೇಲಿ ಸೇರಿದ್ದು ಊಟಕ್ಕೆ, ಸಚಿವ ಸಂಪುಟದಲ್ಲಿ ಯಾವುದೇ ಬದಲಾವಣೆ ಇಲ್ಲ: ಸಿದ್ದರಾಮಯ್ಯ
ಸಂಪುಟದಲ್ಲಿ ಬದಲಾವಣೆಗಳನ್ನು ಮಾಡುವ ವದಂತಿಯನ್ನು ಸುಳ್ಳು ಅಂತ ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಸ್ ಟಿಕೆಟ್ ದರ ಹೆಚ್ಚಿಸಿರುವ ಬಗ್ಗೆಯೂ ಅಸ್ಪಷ್ಟವಾದ ಉತ್ತರ ನೀಡಿದರು. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಸಾರಿಗೆ ಸಚಿವರಾಗಿದ್ದ ಆರ್ ಅಶೋಕ ಅವರು ಬಸ್ ಪ್ರಯಾಣದ ದರ ಹೆಚ್ಚಿಸಿರಲಿಲ್ಲವೇ ಎಂದು ಅವರು ಪ್ರಶ್ನಿಸಿದರು. ಪತ್ರಕರ್ತರು ಕೇಳಿದ ಪ್ರಶ್ನೆಗೆ ಇದು ಉತ್ತರ ಹೇಗಾದೀತು?
ಬೆಂಗಳೂರು: ಇಂದು ಸಾಯಂಕಾಲ ಮಾಧ್ಯಮಗಳೊಂದಿಗೆ ಮಾತಾಡುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಧಾವಂತದಲ್ಲಿದ್ದರು ಮತ್ತು ಕೋಪದಲ್ಲೂ ಇದ್ದರು. ಅಸಲಿಗೆ ಅವರು ಮಾಧ್ಯಮಗಳೊಂದಿಗೆ ಮಾತಾಡುವ ಮೂಡ್ನಲ್ಲಿರಲಿಲ್ಲ. ಸತೀಶ್ ಜಾರಕಿಹೊಳಿ ಮನೆಯಲ್ಲಿ ಡಿನ್ನರ್ ಮೀಟಿಂಗ್ ಬಗ್ಗೆ ಕೇಳಿದ ಪ್ರಶ್ನೆಗೆ ಅವರಿಂದ ಸಮಂಜಸ ಉತ್ತರ ಸಿಗಲಿಲ್ಲ. ಊಟಕ್ಕೆ ಅಂತ ಸೇರಿದಾಗ ಇಲ್ಲಸಲ್ಲದ ಊಹಾಪೋಹಗಳನ್ನು ಸೃಷ್ಟಿಸಿದರೆ ಯಾರೇನು ಮಾಡಲಾಗುತ್ತದೆ ಎಂದು ಸಿಎಂ ಹೇಳಿದರು. ಒಕ್ಕಲಿಗ ಶಾಸಕರು ಪ್ರತ್ಯೇಕವಾಗಿ ಸಭೆ ನಡೆಸುತ್ತಿದ್ದಾರೆ ಅಂದಾಗ ಮುಖ್ಯಮಂತ್ರಿ ಅದನ್ನು ಕಿವಿಗೆ ಹಾಕ್ಕೊಳ್ಳಲಿಲ್ಲ. ಡಿಕೆ ಶಿವಕುಮಾರ್ ವಿದೇಶ ಪ್ರವಾಸದಲ್ಲಿರುವಾಗ ಮೀಟಿಂಗ್ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಿದ್ದರಾಮಯ್ಯ ಮತ್ತು ಅಹಿಂದ ನಾಯಕರ ಜೊತೆ ಡಿನ್ನರ್ ಮೀಟಿಂಗ್ ಡೌನ್ ಪ್ಲೇ ಮಾಡಿದ ಸತೀಶ್ ಜಾರಕಿಹೊಳಿ
Latest Videos