ಬಿಗ್ ಬಾಸ್ ಮನೆಯಲ್ಲಿ ಸಾಲದ ವಿಚಾರ ಮಾತನಾಡಿದ ಹನುಮಂತನ ತಾಯಿ

ಬಿಗ್ ಬಾಸ್ ಕನ್ನಡದಲ್ಲಿ ಹನುಮಂತನ ಪೋಷಕರ ಭೇಟಿ ಅನೇಕರಿಗೆ ಖುಷಿ ಕೊಟ್ಟಿದೆ. ಅವರ ಆರ್ಥಿಕ ಸಂಕಷ್ಟ ಮತ್ತು ಸಾಲದ ಬಗ್ಗೆ ಬಹಿರಂಗ ಆಗಿದೆ. ಹನುಮಂತನ ತಂದೆ-ತಾಯಿ ಲಂಬಾಣಿ ಭಾಷೆಯಲ್ಲಿ ಮಾತನಾಡಿದ್ದು ವಿಶೇಷ. ಮುಂದಿನ ದಿನಗಳಲ್ಲಿ ಹನುಮಂತ ಹೇಗೆ ಆಡುತ್ತಾನೆ ಎಂಬ ಕುತೂಹಲ ಮೂಡಿದೆ.

ಬಿಗ್ ಬಾಸ್ ಮನೆಯಲ್ಲಿ ಸಾಲದ ವಿಚಾರ ಮಾತನಾಡಿದ ಹನುಮಂತನ ತಾಯಿ
ಹನುಮಂತ ಕುಟುಂಬ
Follow us
ರಾಜೇಶ್ ದುಗ್ಗುಮನೆ
|

Updated on: Jan 04, 2025 | 7:00 AM

ಬಿಗ್ ಬಾಸ್ ಮನೆಯಲ್ಲಿ ಈ ವಾರ ಎಲ್ಲವೂ ಸೊಗಸಾಗಿ ಸಾಗಿದೆ. ಫ್ಯಾಮಿಲಿ ವೀಕ್, ಕಿಚ್ಚನ ಅಡುಗೆ ಹೀಗೆ ಎಲ್ಲ ವಿಚಾರಗಳು ದೊಡ್ಮನೆಯವರಿಗೆ ಸರ್​ಪ್ರೈಸ್ ಕೊಟ್ಟಿದೆ. ಹನುಮಂತನ ತಂದೆ-ತಾಯಿ ಕೂಡ ದೊಡ್ಮನೆಗೆ ಬಂದಿದ್ದಾರೆ. ಹನುಮಂತನ ತಂದೆ ಹೆಸರು ಮೇಘಪ್ಪ, ತಾಯಿ ಹೆಸರು ಶೀಲವ್ವ. ಈ ಎಪಿಸೋಡ್ ಗಮನ ಸೆಳೆದಿದೆ. ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ಹೊತ್ತು ಹನುಮಂತ ಹಾಗೂ ಶೀಲವ್ವ ಲಂಬಾಣಿ ಭಾಷೆಯಲ್ಲಿ ಮಾತನಾಡಿದ್ದೇ ಹೆಚ್ಚು.

‘ಚೆನ್ನಾಗಿರು ಮಗನೆ’ ಎಂದು ಹನುಮಂತಗೆ ತಂದೆ-ತಾಯಿ ಹೇಳಿದರು. ಆ ಬಳಿಕ ಹನುಮಂತನ ಬಳಿ ತಮ್ಮದೇ ಭಾಷೆಯಲ್ಲಿ ಕಷ್ಟದ ಬಗ್ಗೆ ಹೇಳಿಕೊಂಡರು ಅವರ ತಾಯಿ. ‘ಕಂತು ಕಟ್ಟೋದು ಬಂದಿತ್ತು. ಕಂತು ಕಟ್ಟಿಲ್ಲ. ಹಣ ಇಲ್ಲ. ಮೆಕ್ಕೆ ಜೋಳವನ್ನು ಬಸಣ್ಣ ಸಂದೀಪ್​ಗೆ ತುಂಬೋಕೆ ಹೇಳಿ ಬಂದಿದ್ದೇವೆ’ ಎಂದರು ಶೀಲವ್ವ.

‘ಮೆಕ್ಕೆ ಜೋಳನ ಮಿಷನ್​ಗೆ ಹಾಕಿದೀರಾ, ಯಾವಾಗ ಹಾಕಿದಿರಿ’ ಎಂದು ಹನುಮಂತ ಕೇಳಿದರು. ‘ಹೂವಿನ ಅಮವಾಸ್ಯೆ ದಿನ ಹಾಕಿದೆವು’ ಎಂದು ಶೀಲವ್ವ ಅಂದರು. ಆದರೆ, ದೊಡ್ಮನೆಯಲ್ಲಿ ಯಾವಾಗ ಅಮವಾಸ್ಯೆ, ಯಾವಾಗ ಹುಣ್ಣಿಮೆ ಅನ್ನೋದು ಗೊತ್ತಾಗುವುದಿಲ್ಲ. ಹೀಗಾಗಿ, ಅಮವಾಸ್ಯೆ ಯಾವಾಗ ಆಯ್ತೋ ಗೊತ್ತಿಲ್ಲ ಎಂದರು ಹನುಮಂತ.

ಹನುಮಂತ ಹಾಯಾಗಿ ಇದ್ದಾರೆ, ಸಾಕಷ್ಟು ಹಣ ಮಾಡಿಕೊಂಡಿದ್ದಾರೆ ಎಂದೆಲ್ಲ ಸುದ್ದಿ ಆಗಿತ್ತು. ಆದರೆ, ಅಸಲಿಗೆ ಅವರ ಜೀವನ ಹಾಗಿಲ್ಲ. ಅವರ ಮನೆಯಲ್ಲೂ ಸಾಲ ಇದೆ. ಅದು ದೊಡ್ಮನೆಯಲ್ಲಿ ಸ್ಪಷ್ಟವಾಗಿದೆ. ಬಿಗ್ ಬಾಸ್ ಪೂರ್ಣಗೊಂಡ ಬಳಿಕ ಮದುವೆ ನಡೆಯಲಿದೆಯಂತೆ ಹೌದೇ ಎನ್ನುವ ಪ್ರಶ್ನೆಯನ್ನು ರಜತ್ ಕೇಳಿದರು. ಇದಕ್ಕೆ ಹೌದು ಎನ್ನುವ ಉತ್ತರ ಶೀಲವ್ವ ಕಡೆಯಿಂದ ಬಂತು.

ಇದನ್ನೂ ಓದಿ: ಅರ್ಥವಾಗಲೇ ಇಲ್ಲ ಹನುಮಂತ ಜೊತೆ ತಂದೆ-ತಾಯಿ ನಡೆಸಿದ ಸಂಭಾಷಣೆ; ಆಡಿದ್ದು ಯಾವ ಭಾಷೆ?

ಹನುಮಂತ ಅವರು ಇಷ್ಟು ದಿನ ಡಲ್ ಆಗಿದ್ದರು. ಈಗ ಅವರು ಮತ್ತೆ ಚಾರ್ಜ್ ಆಗಿದ್ದಾರೆ. ‘ಇನ್ನೂ ಮೂರು ತಿಂಗಳು ಇರಬಹುದು’ ಎಂದು ಹೇಳಿದ್ದಾರೆ. ಅವರು ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಆಡುತ್ತಾರೆ ಎಂಬ ಕುತೂಹಲ ಅನೇಕರಿಗೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.