ಶಂಕರ್​ನಾಗ್ ಸ್ಟೈಲ್​ನಲ್ಲಿ ಮಾತನಾಡಿದ್ದ ಯಶ್; ಎಷ್ಟು ಪರ್ಫೆಕ್ಟ್ ಮಿಮಿಕ್ರಿ ನೋಡಿ

ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮದಿನ ಸಮೀಪಿಸಿದೆ. ಅವರ ಹಳೆಯ ವಿಡಿಯೋಗಳು ಮತ್ತೆ ವೈರಲ್ ಆಗುತ್ತಿವೆ. ಇತ್ತೀಚೆಗೆ, ಯಶ್ ಅವರು ಶಂಕರ್ ನಾಗ್ ಅವರ ಶೈಲಿಯನ್ನು ಅನುಕರಿಸಿದ ವಿಡಿಯೋ ವೈರಲ್ ಆಗಿದೆ. 'ಕಾಸ್​​ಗೆ ಟಾಸ್' ಕಾರ್ಯಕ್ರಮದಲ್ಲಿ ಈ ಅನುಕರಣೆ ನಡೆದಿದ್ದು, ಯಶ್ ಅವರ ಶಂಕರ್ ನಾಗ್ ಅವರ ಮೇಲಿನ ಅಭಿಮಾನವನ್ನು ಪ್ರದರ್ಶಿಸುತ್ತದೆ.

ಶಂಕರ್​ನಾಗ್ ಸ್ಟೈಲ್​ನಲ್ಲಿ ಮಾತನಾಡಿದ್ದ ಯಶ್; ಎಷ್ಟು ಪರ್ಫೆಕ್ಟ್ ಮಿಮಿಕ್ರಿ ನೋಡಿ
ಶಂಕರ್ ನಾಗ್-ಯಶ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jan 04, 2025 | 7:50 AM

ರಾಕಿಂಗ್ ಸ್ಟಾರ್ ಯಶ್ ಅವರಿಗೆ ಜನ್ಮದಿನ ಸಮೀಪಿಸಿದೆ. ಇನ್ನು ಕೆಲವೇ ದಿನಗಳಲ್ಲಿ ಯಶ್ ಅವರ ಜನ್ಮದಿನವು ಆಗಮಿಸಲಿದೆ. ಈ ಸಂದರ್ಭದಲ್ಲಿ ಯಶ್ ಅವರ ಹಳೆಯ ವಿಡಿಯೋಗಳು ವೈರಲ್ ಆಗುತ್ತಾ ಇವೆ. ಈ ಮಧ್ಯೆ ಯಶ್ ಅವರು ಮಿಮಿಕ್ರಿ ಮಾಡಿದ ಒಂದು ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಯಶ್ ಅವರು ಶಂಕರ್​ನಾಗ್ ಸ್ಟೈಲ್​ನ ಅನುಕರಿಸಿದ್ದರು. ಈ ವಿಡಿಯೋ ಮತ್ತೆ ವೈರಲ್ ಆಗಿ ಗಮನ ಸೆಳೆದಿದೆ.

ಯಶ್ ಅವರು ಶಂಕರ್​ನಾಗ್ ಅವರ ಅಭಿಮಾನಿ. ಇದನ್ನು ಅನೇಕ ಬಾರಿ ಅವರು ಹೇಳಿಕೊಂಡಿದ್ದು ಇದೆ. ‘ಗೂಗ್ಲಿ’ ಸಿನಿಮಾದಲ್ಲಿ ಶಂಕರ್​ನಾಗ್​ ಅವರ ಪೊಲೀಸ್​​ ಗೆಟಪ್​ನಲ್ಲಿ ಬಂದು ಎಲ್ಲರ ಗಮನ ಸೆಳೆದಿದ್ದರು. ಆ ಸಂದರ್ಭದಲ್ಲಿ ಅವರ ಗೆಟಪ್ ಸಾಕಷ್ಟು ಸದ್ದು ಮಾಡಿತ್ತು. ಈಗ ಯಶ್ ಅವರು ಶಂಕರ್​ನಾಗ್ ಸ್ಟೈಲ್​ನ ಅನುಕರಿಸಿದ ವಿಡಿಯೋ ಗಮನ ಸೆಳೆಯುತ್ತಿದೆ.

‘ಕಾಸ್​ಗೆ ಟಾಸ್​’ ಕಾರ್ಯಕ್ರಮದಲ್ಲಿ ಯಶ್ ಭಾಗಿ ಆಗಿದ್ದರು. ಜೀ ಕನ್ನಡದಲ್ಲಿ ಪ್ರಸಾರ ಆಗಿದ್ದ ಈ ಶೋನಲ್ಲಿ ಸೃಜನ್​ ಲೋಕೇಶ್ ನಡೆಸಿಕೊಟ್ಟಿದ್ದರು. ‘ಎ’ ಸಿನಿಮಾದಲ್ಲಿ ಬರೋ ‘ಏನ್ ಮಾಡಿದೀಯಾ? ವರ್ಷಕ್ಕೆ ಎರಡು ಬಾರಿ ಬರ್ತೀಯಾ, ಡೆಕೋರೇಷನ್ ಮಾಡ್ಕೋತಿಯಾ, ಡ್ಯಾನ್ಸ್ ಮಾಡ್ಕೊಂಡು ಹೋಗ್ತೀಯಾ. ನಿನಗಿಂತ ನಾನೇ ಉತ್ತಮ. ನಾಲ್ಕು ಜನ ಕೆಟ್ಟವರನ್ನು ಮೇಲಕ್ಕೆ ಕಳುಹಿಸಿದ್ದೇನೆ. ಐ ಆ್ಯಮ್ ಗಾಡ್ ಗಾಡ್ ಈಸ್ ಗ್ರೇಟ್’ ಎಂದು ಸೃಜನ್ ಲೋಕೇಶ್ ಅವರು ಯಶ್​ಗೆ ಡೈಲಾಗ್​ನ ಹೇಳಿಕೊಟ್ಟರು.

ಇದೇ ಡೈಲಾಗ್​ನ ಯಶ್ ಅವರು ಅನುಕರಿಸಿದ್ದರು. ಅವರು ಪರ್ಫೆಕ್ಟ್ ಆಗಿ ಶಂಕರ್​​ನಾಗ್​ನ ಅನುಕರಿಸಿದ್ದರು. ಈ ವಿಡಿಯೋ ಈಗ ವೈರಲ್ ಮಾಡಲಾಗುತ್ತಿದೆ. ಫ್ಯಾನ್ಸ್ ಇದಕ್ಕೆ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಾ ಇದ್ದಾರೆ. ಯಶ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ: ಯಶ್​ಗೆ ಇದೆ ನುಗ್ಗಿ ನಡೆಯೋ ಗುಣ; ‘ಕೆಜಿಎಫ್’ ಚಿತ್ರ ಕಾಡ್ಗಿಚ್ಚಾಗಲು ಕಿಡಿ ಹಚ್ಚಿದ್ದೇ ಇವರು

ಶಂಕರ್ ನಾಗ್ ಅವರು ಅನೇಕ ಹೀರೋಗಳಿಗೆ ಸ್ಫೂರ್ತಿ. ಹಲವು ಹೀರೋಗಳಿಗೆ ಅವರು ಮಾರ್ಗದರ್ಶಿ ಆಗಿದ್ದಾರೆ. ಕಡಿಮೆ ಸಮಯದಲ್ಲಿ ಸಾಕಷ್ಟು ಸಿನಿಮಾ ಮಾಡಿದ್ದ ಅವರು ಅಪಘಾತದಲ್ಲಿ ನಿಧನ ಹೊಂದಿದರು. ಆದಾಗ್ಯೂ ಯಶ್ ಅವರಂಥ ಸೂಪರ್​ಸ್ಟಾರ್​ಗಳು ಶಂಕರ್​ನಾಗ್​ನ ಅಭಿಮಾನಿ ಆಗಿದ್ದಾರೆ. ಯಶ್ ಅವರು ಸದ್ಯ ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ‘ರಾಮಾಯಣ’ ಸಿನಿಮಾದಲ್ಲೂ ಅವರು ನಟಿಸಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ