Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶ್​ಗೆ ಇದೆ ನುಗ್ಗಿ ನಡೆಯೋ ಗುಣ; ‘ಕೆಜಿಎಫ್’ ಚಿತ್ರ ಕಾಡ್ಗಿಚ್ಚಾಗಲು ಕಿಡಿ ಹಚ್ಚಿದ್ದೇ ಇವರು

ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮದಿನದಂದು, ಅವರು ಆಚರಣೆ ಬೇಡ ಎಂದು ಕೋರಿದ್ದಾರೆ. ಅವರ ಹಿಂದಿನ ಚಲನಚಿತ್ರಗಳ ವೈರಲ್ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಯಶ್ ಅವರ ಪ್ಯಾನ್ ಇಂಡಿಯಾ ಯಶಸ್ಸು ಪಡೆದಿದ್ದಾರೆ. ಅವರ ಶ್ರಮ ಮತ್ತು ಯಶಸ್ಸಿನ ಹಿಂದಿನ ಬಗ್ಗೆ ಇಲ್ಲಿದೆ ವಿವರ.

ಯಶ್​ಗೆ ಇದೆ ನುಗ್ಗಿ ನಡೆಯೋ ಗುಣ; ‘ಕೆಜಿಎಫ್’ ಚಿತ್ರ ಕಾಡ್ಗಿಚ್ಚಾಗಲು ಕಿಡಿ ಹಚ್ಚಿದ್ದೇ ಇವರು
ಯಶ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Jan 03, 2025 | 8:07 AM

ರಾಕಿಂಗ್ ಸ್ಟಾರ್ ಯಶ್ ಅವರಿಗೆ ಜನ್ಮದಿನವು ಸಮೀಪಿಸಿದೆ. ಜನವರಿ 8 ಅವರ ಬರ್ತ್​ಡೇ. ಈಗಾಗಲೇ ಯಶ್ ಅವರು ಜನ್ಮದಿನದ ಆಚರಣೆ ಬೇಡ ಎಂಬ ಮಾತನ್ನು ನೇರವಾಗಿ ಹೇಳಿದ್ದಾರೆ. ಈ ಬಗ್ಗೆ ಅಭಿಮಾನಿಗಳ ಬಳಿ ಕೋರಿಕೆಯನ್ನೂ ಇಟ್ಟಿದ್ದಾರೆ. ಅವರ ಜನ್ಮದಿನಗಳ ಸಂದರ್ಭದಲ್ಲಿ ಯಶ್ ಅವರ ಹಳೆಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಾ ಇದ್ದಾರೆ.

ಯಶ್ ಅವರು ಕಷ್ಟದಿಂದ ಮೇಲೆ ಬಂದವರು. ಅವರು ಈಗ ಸೂಪರ್​ ಸ್ಟಾರ್ ಆಗಿದ್ದಾರೆ. ಅದರ ಹಿಂದೆ ಸಾಕಷ್ಟು ಶ್ರಮ ಇದೆ. ಯಶ್ ಅವರು ಪಟ್ಟ ಕಷ್ಟಕ್ಕೆ ಈಗ ಪ್ರತಿಫಲ ಸಿಕ್ಕಿದೆ. ಯಶ್ ಸ್ಟಾರ್​ಗಿರಿಯನ್ನು ಎಲ್ಲರೂ ಕೊಂಡಾಡುತ್ತಾ ಇದ್ದಾರೆ. ಅವರು ನುಗ್ಗಿ ಹೊಡೆಯುವ ಗುಣ ಹೊಂದಿದ್ದಾರೆ. ಇದರಿಂದ ಸಾಕಷ್ಟು ಗಳಿಸಿದ್ದಾರೆ. ಈ ಬಗ್ಗೆ ಸಂದರ್ಶನಗಳಲ್ಲಿ ಮಾತನಾಡಿದ್ದರು.

‘ಧೈರ್ಯವಾಗಿ ನುಗ್ಗಬೇಕು, ಡಿಫೆನ್ಸ್​ ಎಷ್ಟು ವರ್ಷ ಆಡ್ತೀರಾ? ನುಗ್ಗಿ ಹೊಡೆಯಬೇಕು ಎಂಬ ಅಭ್ಯಾಸ. ಇದರಲ್ಲಿ ನಂಬಿಕೆ ಹೆಚ್ಚು. ಅದಕ್ಕೆ ತಕ್ಕಂತೆ ಗೌರವ ಕೊಟ್ಟಿದ್ದಾರೆ’ ಎಂದಿದ್ದರು ಯಶ್. ಪ್ರಶಾಂತ್ ನೀಲ್ ಕೂಡ ಯಶ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು. ‘ಪ್ಯಾನ್ ಇಂಡಿಯಾ ವೇವ್ ಇದೆ. ನುಗ್ಗಿ ಬಿಡೋಣ ಎಂಬುದು ಯಾವಾಗಲೂ ಇರಲಿಲ್ಲ. ಆದರೆ, ಯಶ್​ಗೆ ಅದೇನು ಸ್ಪಾರ್ಕ್​ ಹೊಡೆಯಿತೋ ಏನೋ ಗೊತ್ತಿಲ್ಲ, ಇದನ್ನು (ಕೆಜಿಎಫ್) ಪ್ಯಾನ್ ಇಂಡಿಯಾ ಸಿನಿಮಾ ಮಾಡಬೇಕು ಎಂದರು. ಅದಕ್ಕೆ ಸಾಕಷ್ಟು ಓಡಾಟ ಮಾಡಿದರು. ಬಿಡಲೇ ಇಲ್ಲ. ಅವನಿಗೆ ಇರೋವಷ್ಟು ಹಠವನ್ನು ಯಾರಲ್ಲೂ ನೋಡಿಲ್ಲ’ ಎಂದಿದ್ದರು ಪ್ರಶಾಂತ್ ನೀಲ್.

ಈಗ ಯಶ್ ಅವರು ‘ಟಾಕ್ಸಿಕ್’ ಚಿತ್ರವನ್ನು ಪ್ಯಾನ್ ವರ್ಲ್ಡ್​ನಲ್ಲಿ ರಿಲೀಸ್ ಮಾಡಲು ಆಲೋಚನೆ ಮಾಡಿದ್ದೀರಾ ಎಂಬ ಪ್ರಶ್ನೆ ಮೂಡಿದೆ. ಅವರ 21st ಸೆಂಚುರಿ ಸ್ಟುಡಿಯೋ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಎಲ್ಲರೂ ಪ್ಯಾನ್ ಇಂಡಿಯಾ ಎಂದು ನುಗ್ಗುತ್ತಿದ್ದಾರೆ. ಆದರೆ, ಯಶ್ ಅವರು ಈ ವಿಚಾರದಲ್ಲಿ ಒಂದು ಹಂತ ಮುಂದೆ ಹೋದರೇ ಎನ್ನುವ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: Yash: ರಾಧಿಕಾ ಪಂಡಿತ್ ಹಾಗೂ ಮಕ್ಕಳ ಜೊತೆ ಸಿಂಪಲ್ ಆಗಿ ಹೊಸ ವರ್ಷ ಆಚರಿಸಿದ ಯಶ್

ಯಶ್ ಅವರು ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇದರ ಜೊತೆಗೆ ಹಿಂದಿಯ ‘ರಾಮಾಯಣ’ ಸಿನಿಮಾದಲ್ಲಿ ರಾವಣನ ಪಾತ್ರ ಮಾಡುತ್ತಿದ್ದು, ಇದಕ್ಕಾಗಿ 200 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:04 am, Fri, 3 January 25

ಪ್ರತಿದಿನ ಮಾಧ್ಯಮಗಳೊಂದಿಗೆ ಮಾತಾಡುವ ರೇಣುಕಾಚಾರ್ಯಗೆ ವಿಷಯಗಳು ಸಿಗುತ್ತಿಲ್ಲ
ಪ್ರತಿದಿನ ಮಾಧ್ಯಮಗಳೊಂದಿಗೆ ಮಾತಾಡುವ ರೇಣುಕಾಚಾರ್ಯಗೆ ವಿಷಯಗಳು ಸಿಗುತ್ತಿಲ್ಲ
ಮಟ ಮಟ ಮಧ್ಯಾಹ್ನ ಫುಲ್ ಟೈಟ್​ ಆಗಿ ಬಂದು ಬಸ್ ಕೆಳಗೆ ಮಲಗಿದ ಕುಡುಕ!
ಮಟ ಮಟ ಮಧ್ಯಾಹ್ನ ಫುಲ್ ಟೈಟ್​ ಆಗಿ ಬಂದು ಬಸ್ ಕೆಳಗೆ ಮಲಗಿದ ಕುಡುಕ!
ಪೊಲೀಸರಿಂದ ಸೂಕ್ತ ತನಿಖೆ ಆಗುತ್ತಿಲ್ಲವೆಂದು ಅರೋಪಿಸಿದ ಸಂಬಂಧಿಕರು
ಪೊಲೀಸರಿಂದ ಸೂಕ್ತ ತನಿಖೆ ಆಗುತ್ತಿಲ್ಲವೆಂದು ಅರೋಪಿಸಿದ ಸಂಬಂಧಿಕರು
ಪ್ರದೀಪ್ ಮಾತುಗಳಿಗೆ ಸಭಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದದರು: ಮೋಹನ್
ಪ್ರದೀಪ್ ಮಾತುಗಳಿಗೆ ಸಭಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದದರು: ಮೋಹನ್
ಬದುಕುಳಿದು ಬಂದು ಅಪಘಾತದ ಭೀಕರತೆ ಬಿಚ್ಚಿಟ್ಟ ಪರಸಪ್ಪ
ಬದುಕುಳಿದು ಬಂದು ಅಪಘಾತದ ಭೀಕರತೆ ಬಿಚ್ಚಿಟ್ಟ ಪರಸಪ್ಪ
VIDEO: ರಾಕಿ ಭಾಯ್ ಸ್ಟೈಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ಗೆ ಕನ್ನಡಿಗನ ಎಂಟ್
VIDEO: ರಾಕಿ ಭಾಯ್ ಸ್ಟೈಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ಗೆ ಕನ್ನಡಿಗನ ಎಂಟ್
ಹತ್ತಿರದ ಸಂಬಂಧಿಯೊಬ್ಬರ ಸಾವಿನ ಕಾರಣ ಪರಮೇಶ್ವರ್ ಭಾಗಿಯಾಗಿರಲಿಲ್ಲ: ಪಾಟೀಲ್
ಹತ್ತಿರದ ಸಂಬಂಧಿಯೊಬ್ಬರ ಸಾವಿನ ಕಾರಣ ಪರಮೇಶ್ವರ್ ಭಾಗಿಯಾಗಿರಲಿಲ್ಲ: ಪಾಟೀಲ್
ಕಾರಿನ ಮೇಲೆ ಬಿದ್ದ ಲಾರಿ: ಭಯಾನಕ ಅಪಘಾತ ಡ್ರೋನ್ ಕ್ಯಾಮರಾದಲ್ಲಿ ಕಂಡಿದ್ದು
ಕಾರಿನ ಮೇಲೆ ಬಿದ್ದ ಲಾರಿ: ಭಯಾನಕ ಅಪಘಾತ ಡ್ರೋನ್ ಕ್ಯಾಮರಾದಲ್ಲಿ ಕಂಡಿದ್ದು
ಕಳ್ಳತನ ಮಾಡಿದ ಬಳಿಕ ತಮ್ಮ ಕಾರನ್ನೇ ಬೆಂಕಿಹಚ್ಚಿ ಸುಟ್ಟುಬಿಡುವ ಖದೀಮರು
ಕಳ್ಳತನ ಮಾಡಿದ ಬಳಿಕ ತಮ್ಮ ಕಾರನ್ನೇ ಬೆಂಕಿಹಚ್ಚಿ ಸುಟ್ಟುಬಿಡುವ ಖದೀಮರು
ದರ್ಶನ್ ನಟನೆಯ ‘ಡೆವಿಲ್’ ಚಿತ್ರಕ್ಕೆ ಮೈಸೂರಿನಲ್ಲಿ ಕೊನೆಯ ದಿನದ ಶೂಟಿಂಗ್
ದರ್ಶನ್ ನಟನೆಯ ‘ಡೆವಿಲ್’ ಚಿತ್ರಕ್ಕೆ ಮೈಸೂರಿನಲ್ಲಿ ಕೊನೆಯ ದಿನದ ಶೂಟಿಂಗ್