- Kannada News Photo gallery Rocking Star Yash Celebrate New Year With Radhika Pandit And Children | Cinema News in Kannada
Yash: ರಾಧಿಕಾ ಪಂಡಿತ್ ಹಾಗೂ ಮಕ್ಕಳ ಜೊತೆ ಸಿಂಪಲ್ ಆಗಿ ಹೊಸ ವರ್ಷ ಆಚರಿಸಿದ ಯಶ್
ಬೆಂಗಳೂರಿನ ಗಾಲ್ಫ್ಕೋರ್ಸ್ನಲ್ಲಿರುವ ಪ್ರೆಸ್ಟೀಜ್ ಅಪಾರ್ಟ್ಮೆಂಟ್ನಲ್ಲಿ ಯಶ್ ಫ್ಲ್ಯಾಟ್ ಹೊಂದಿದ್ದಾರೆ. ಕುಟುಂಬದ ಜೊತೆ ಯಶ್ ಅವರು ಅಲ್ಲಿ ವಾಸವಾಗಿದ್ದಾರೆ. ಈಗ ಅವರು ಹೊಸ ವರ್ಷದ ಆಚರಣೆಯನ್ನು ಫ್ಯಾಮಿಲಿ ಜೊತೆ ಮಾಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
Updated on: Jan 01, 2025 | 1:06 PM

ರಾಕಿಂಗ್ ಸ್ಟಾರ್ ಯಶ್ ಅವರು ಪಕ್ಕಾ ಫ್ಯಾಮಿಲಿ ಮ್ಯಾನ್. ಸಮಯ ಸಿಕ್ಕಾಗ ಅವರು ಕುಟುಂಬದ ಜೊತೆ ಸಮಯ ಕಳೆಯಲು ಆದ್ಯತೆ ನೀಡುತ್ತಾರೆ. ಈಗ ಅವರು ಕುಟುಂಬದ ಜೊತೆ ಹೊಸ ವರ್ಷ ಆಚರಣೆ ಮಾಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಬೆಂಗಳೂರಿನ ಗಾಲ್ಫ್ಕೋರ್ಸ್ ಬಳಿ ಯಶ್ ನಿವಾಸ ಇದೆ. ಪ್ರೆಸ್ಟೀಜ್ ಅಪಾರ್ಟ್ಮೆಂಟ್ನಲ್ಲಿ ಅವರು ಅಪಾರ್ಟ್ಮೆಂಟ್ ಹೊಂದಿದ್ದಾರೆ. ಕುಟುಂಬದ ಜೊತೆ ಯಶ್ ಅವರು ಅಲ್ಲಿ ವಾಸವಾಗಿದ್ದಾರೆ. ಈಗ ಅವರು ಹೊಸ ವರ್ಷದ ಆಚರಣೆಯನ್ನು ಫ್ಯಾಮಿಲಿ ಜೊತೆ ಮಾಡಿದ್ದಾರೆ.

ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಪೆಂಟ್ಹೌಸ್ನಲ್ಲಿರುವ ಸೋಫಾ ರೀತಿಯ ವಸ್ತುವಿನ ಮೇಲೆ ಕುಳಿತಿದ್ದಾರೆ. ಆಯ್ರಾ ಯಶ್ ಕಾಲ ಮೇಲೆ ಕುಳಿತರೆ, ಯಥರ್ವ್ ಅಲ್ಲಿಯೇ ಪಕ್ಕದಲ್ಲಿ ಕುಳಿತಿದ್ದಾನೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಯಶ್ ಅವರು ಸಿನಿಮಾ ಶೂಟಿಂಗ್ ಬಿಡುವಿನಲ್ಲಿ ಮನೆಯಲ್ಲೇ ಸಮಯ ಕಳೆಯುತ್ತಾರೆ. ಅವರು ಕುಟುಂಬದ ಜೊತೆ ಹಬ್ಬಗಳನ್ನು ಆಚರಿಸುತ್ತಾರೆ. ಈಗ ಅವರು ಹೊಸ ವರ್ಷವನ್ನು ಫ್ಯಾಮಿಲಿ ಜೊತೆಯೇ ಆಚರಿಸಿದ್ದಾರೆ.

ರಾಧಿಕಾ ಪಂಡಿತ್ ಅವರು ಇತ್ತೀಚೆಗೆ ಕ್ರಿಸ್ಮಸ್ ಸಂದರ್ಭದಲ್ಲಿ ಮಕ್ಕಳ ಜೊತೆ ಕೇಕ್ ಕತ್ತಿರುಸುತ್ತಿರುವ ಫೋಟೋ ವೈರಲ್ ಆಗಿತ್ತು. ಈ ಫೋಟೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡಿದ್ದರು. ಈ ಮುದ್ದಾದ ಕುಟುಂಬ ನೋಡಿ ಅನೇಕರಿಗೆ ಖುಷಿ ಆಗಿದೆ.




