AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಮನೆಯಲ್ಲಿ ವೆಕೇಶನ್ ಮುಗಿಸಿದವರಿಗೆ ಸುದೀಪ್ ಕ್ಲಾಸ್; ಈ ವಾರವೂ ಕಿಚ್ಚನ ಪಾಠ

ಈ ವಾರದ ಬಿಗ್ ಬಾಸ್ ಕನ್ನಡದಲ್ಲಿ ಕುಟುಂಬ ಸದಸ್ಯರ ಭೇಟಿಯ ನಂತರ, ಕಿಚ್ಚ ಸುದೀಪ್ ಅವರು ಸ್ಪರ್ಧಿಗಳಿಗೆ ಎಚ್ಚರಿಕೆ ನೀಡಲಿದ್ದಾರೆ. ಮನೆಯಲ್ಲಿ ನಡೆದ ಘಟನೆಗಳು ಮತ್ತು ಸ್ಪರ್ಧಿಗಳ ನಡವಳಿಕೆಗಳ ಕುರಿತು ಅವರು ಚರ್ಚಿಸಲಿದ್ದಾರೆ. ಪ್ರಮುಖವಾಗಿ ಗೌತಮಿ ಮತ್ತು ಮಂಜು ಕುಟುಂಬದ ವಿಚಾರ ಪ್ರಮುಖವಾಗಿ ಚರ್ಚೆಯಾಗಲಿದೆ.

ಬಿಗ್ ಬಾಸ್ ಮನೆಯಲ್ಲಿ ವೆಕೇಶನ್ ಮುಗಿಸಿದವರಿಗೆ ಸುದೀಪ್ ಕ್ಲಾಸ್; ಈ ವಾರವೂ ಕಿಚ್ಚನ ಪಾಠ
ಸುದೀಪ್
ರಾಜೇಶ್ ದುಗ್ಗುಮನೆ
|

Updated on: Jan 04, 2025 | 2:52 PM

Share

ಕಿಚ್ಚ ಸುದೀಪ್ ಅವರು ಪ್ರತಿ ವಾರ ಬಿಗ್ ಬಾಸ್​ನಲ್ಲಿ ಶನಿವಾರದ ಎಪಿಸೋಡ್​ನ ಸ್ಪರ್ಧಿಗಳಿಗೆ ಬುದ್ಧಿವಾದ ಹೇಳಲು ಬಯಸಿದರೆ ಭಾನುವಾರದ ಎಪಿಸೋಡ್​ನ ಫನ್ ಆಗಿ ನಡೆಸಿಕೊಡುತ್ತಾರೆ. ಈ ವಾರ ದೊಡ್ಮನೆಯಲ್ಲಿ ಎಲ್ಲವೂ ಫನ್ ಆಗಿ ನಡೆಯಿತು. ಮನೆಯಿಂದ ಸ್ಪರ್ಧಿಗಳ ಕುಟುಂಬದವರು ಬಂದಿದ್ದರು. ಹೀಗಾಗಿ, ಎಲ್ಲರೂ ಸಖತ್ ಜಾಲಿಯಾಗಿದ್ದರು. ಹೀಗಾಗಿ, ವೀಕೆಂಡ್ ಎಪಿಸೋಡ್ ಫನ್ ಆಗಿರುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಅದು ಸುಳ್ಳಾಗಿದೆ. ಈ ವಾರವೂ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಳ್ಳೋದು ಪಕ್ಕಾ ಆಗಿದೆ.

ಕಿಚ್ಚ ಸುದೀಪ್ ಶನಿವಾರ ಬೆಳಿಗ್ಗೆಯೇ ವೇದಿಕೆ ಏರಿ ಎಪಿಸೋಡ್ ನಡೆಸಿಕೊಡುತ್ತಾರೆ. ಇದರ ಮೊದಲ ಪ್ರೋಮೋನ ಮಧ್ಯಾಹ್ನ ಹಂಚಿಕೊಳ್ಳಲಾಗುತ್ತದೆ. ಆ ಎಪಿಸೋಡ್​ನಲ್ಲಿ ಸುದೀಪ್ ಅವರು ಯಾವ ವಿಚಾರದ ಬಗ್ಗೆ ಮಾತನಾಡುತ್ತಾರೆ? ಅವರು ಕ್ಲಾಸ್ ತೆಗೆದುಕೊಳ್ಳುವ ಮೂಡ್​ನಲ್ಲಿದ್ದಾರಾ ಅಥವಾ ಸೈಲೆಂಟ್ ಆಗಿದ್ದಾರಾ ಎಂಬಿತ್ಯಾದಿ ಸೂಚನೆ ಸಿಗುತ್ತದೆ. ಈಗ ರಿಲೀಸ್ ಆಗಿರೋ ಪ್ರೋಮೋ ನೋಡಿದರೆ ಸುದೀಪ್​ ಕ್ಲಾಸ್ ತೆಗೆದುಕೊಳ್ಳೋದು ಪಕ್ಕಾ ಆಗಿದೆ.

ಫ್ಯಾಮಿಲಿ ವೀಕ್ ಹಾಗೂ ಸುದೀಪ್ ಅವರು ಮಾಡಿಕೊಟ್ಟ ಅಡುಗೆಯ ಕಾರಣಕ್ಕೆ ಎಲ್ಲವೂ ಫನ್ ಆಗಿತ್ತು. ಸ್ಪರ್ಧೆ ಎಂಬುದನ್ನು ಮರೆತು ಎಲ್ಲರೂ ಒಟ್ಟಾಗಿ ಬೆರೆತರು. ಕುಟುಂಬದ ಜೊತೆ ಸಮಯ ಕಳೆದರು. ಇದನ್ನೇ ಇಟ್ಟುಕೊಂಡು ಸುದೀಪ್ ಈ ವಾರದ ಎಪಿಸೋಡ್ ನಡೆಸಕೊಡಲಿದ್ದಾರೆ. ‘ಈ ವಾರ ಸ್ಪರ್ಧಿಗಳು ರಕ್ತ ಸಂಬಂಧಿಗಳನ್ನು ಭೇಟಿ ಮಾಡಿದರು. ಮನೆ ಊಟ ತಿಂದು ಮೈಮರೆತವರು ಯಾರು? ಮನೆಯವರ ಮಾತು ಕೇಳಿ ಎಚ್ಚರ ಆದವರು ಯಾರು’ ಎಂದು ಸುದೀಪ್ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ‘ರಾಬರ್ಟ್’ ಸಿನಿಮಾ ಗಳಿಕೆ ಬೀಟ್ ಮಾಡುವ ಸನಿಹದಲ್ಲಿದೆ ಸುದೀಪ್ ನಟನೆಯ ‘ಮ್ಯಾಕ್ಸ್’

ಈ ವಾರ ಮನೆಯಿಂದ ಬಂದ ಅನೇಕರು ಸ್ಪರ್ಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಮಂಜು ಕುಟುಂಬದವರು ಗೌತಮಿ ಜೊತೆಗಿನ ಬಾಂಧವ್ಯ ವಿಚಾರವನ್ನು ಪ್ರಶ್ನೆ ಮಾಡಿದ್ದಾರೆ. ಗೌತಮಿ ಪತಿ ಮಂಜು ಅವರಿಂದ ದೂರ ಇರುವಂತೆ ಪತ್ನಿಗೆ ಸಲಹೆ ನೀಡಿದ್ದಾರೆ. ಹೀಗಾಗಿ, ಸ್ಪರ್ಧಿಗಳಿಗೆ ಒಂದಷ್ಟು ಇನ್​ಪುಟ್ ಅಂತೂ ಸಿಕ್ಕಿದೆ. ಈ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More