AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಬರ್ಟ್’ ಸಿನಿಮಾ ಗಳಿಕೆ ಬೀಟ್ ಮಾಡುವ ಸನಿಹದಲ್ಲಿದೆ ಸುದೀಪ್ ನಟನೆಯ ‘ಮ್ಯಾಕ್ಸ್’

ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಯಶಸ್ಸು ಕಾಣುತ್ತಿದೆ. 40 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿರುವ ಈ ಚಿತ್ರ, ದರ್ಶನ್ ನಟನೆಯ ‘ರಾಬರ್ಟ್’ ಚಿತ್ರದ ಗಳಿಕೆಯನ್ನು ಶೀಘ್ರದಲ್ಲೇ ಮೀರಲಿದೆ ಎಂದು ನಿರೀಕ್ಷಿಸಲಾಗಿದೆ. ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಸುದೀಪ್ ಅವರ ಅಭಿನಯ ಮೆಚ್ಚುಗೆ ಪಡೆದಿದೆ.

‘ರಾಬರ್ಟ್’ ಸಿನಿಮಾ ಗಳಿಕೆ ಬೀಟ್ ಮಾಡುವ ಸನಿಹದಲ್ಲಿದೆ ಸುದೀಪ್ ನಟನೆಯ ‘ಮ್ಯಾಕ್ಸ್’
ದರ್ಶನ್-ಸುದೀಪ್
ರಾಜೇಶ್ ದುಗ್ಗುಮನೆ
|

Updated on: Jan 04, 2025 | 8:43 AM

Share

ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಉತ್ತಮ ಗಳಿಕೆ ಮಾಡುತ್ತಿದೆ. ಬಾಕ್ಸ್ ಆಫೀಸ್​ನಲ್ಲಿ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಸಂಕ್ರಾಂತಿವರೆಗೆ ದೊಡ್ಡ ಸಿನಿಮಾಗಳ ಹವಾ ಇಲ್ಲ. ಅಲ್ಲಿವರೆಗೆ ‘ಮ್ಯಾಕ್ಸ್’ ಚಿತ್ರದ ಅಬ್ಬರ ಮುಂದುವರಿಯಲಿದೆ. ಈ ಸಿನಿಮಾ ಹಲವು ದಾಖಲೆಗಳನ್ನು ಪುಡಿ ಮಾಡಿದೆ. ಅದೇ ರೀತಿ, ದರ್ಶನ್ ನಟನೆಯ ‘ರಾಬರ್ಟ್’ ಚಿತ್ರದ ಗಳಿಕೆಯನ್ನು ಈ ಸಿನಿಮಾ ಬೀಟ್ ಮಾಡುವ ಸನಿಹದಲ್ಲಿ ಇದೆ.

‘ರಾಬರ್ಟ್’ ಚಿತ್ರದಲ್ಲಿ ದರ್ಶನ್ ನಟಿಸಿದ್ದರು. 2021ರಲ್ಲಿ ಸಿನಿಮಾ ರಿಲೀಸ್ ಆಗಿ ಸದ್ದು ಮಾಡಿತ್ತು. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ 50 ಕೋಟಿ ರೂಪಾಯಿ ಆಸುಪಾಸಿನಲ್ಲಿ ಗಳಿಕೆ ಮಾಡಿದೆ ಎಂದು ಸ್ವತಃ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರೇ ಹೇಳಿಕೊಂಡಿದ್ದರು. ಈಗ ಆ ಗಳಿಕೆಯನ್ನು ‘ಮ್ಯಾಕ್ಸ್’ ಚಿತ್ರ ಬೀಟ್ ಮಾಡುವ ಸನಿಹದಲ್ಲಿ ಇದೆ.

ಸದ್ಯ ‘ಮ್ಯಾಕ್ಸ್’ ಚಿತ್ರದ ಗಳಿಕೆ 40 ಕೋಟಿ ರೂಪಾಯಿ ಸಮೀಪಿಸಿದೆ. ಇನ್ನೊಂದು ವಾರದಲ್ಲಿ ಸುದೀಪ್ ಸಿನಿಮಾ ‘ರಾಬರ್ಟ್’ ಚಿತ್ರದ ಗಳಿಕೆಯನ್ನು ಹಿಂದಿಕ್ಕಲಿದೆ ಎಂಬುದು ಬಾಕ್ಸ್ ಆಫೀಸ್ ಪಂಡಿತರ ಲೆಕ್ಕಾಚಾರ. ದರ್ಶನ್ ನಟನೆಯ ಮತ್ತೊಂದು ಸೂಪರ್ ಹಿಟ್ ಚಿತ್ರ ‘ಕಾಟೇರ’ದ ಅಧಿಕೃತ ಕಲೆಕ್ಷನ್ 70 ಕೋಟಿ ರೂಪಾಯಿ ಆಸುಪಾಸಿನಲ್ಲಿ ಇದೆ. ಇದನ್ನು ಹಿಂದಿಕ್ಕಲು ‘ಮ್ಯಾಕ್ಸ್’ ಚಿತ್ರಕ್ಕೆ ಅಸಾಧ್ಯ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ವಾರದ ದಿನವೂ ಹಣ ಬಾಚಿಕೊಂಡ ‘ಮ್ಯಾಕ್ಸ್’; ಸುದೀಪ್ ಚಿತ್ರಕ್ಕೆ ಕಲೆಕ್ಷನ್ ಹೊಳೆ

‘ಮ್ಯಾಕ್ಸ್’ ಚಿತ್ರದಲ್ಲಿ ಸುದೀಪ್ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಅವರು ಪೊಲೀಸ್ ಅಧಿಕಾರಿಯ ಪಾತ್ರ ಮಾಡಿದ್ದಾರೆ. ಒಂದೇ ರಾತ್ರಿಯಲ್ಲಿ ನಡೆಯುವ ಕಥೆಯನ್ನು ಈ ಚಿತ್ರ ಹೊಂದಿದೆ. ಪೊಲೀಸ್ ಠಾಣೆಯಲ್ಲಿ ನಡೆಯುವ ರಾಜಕಾರಣಿ ಮಕ್ಕಳ ಕೊಲೆ ಹಾಗೂ ಅದನ್ನು ಸುದೀಪ್ ಹೇಗೆ ನಿರ್ವಹಿಸುತ್ತಾರೆ ಎಂಬುದೇ ಚಿತ್ರದ ಕಥೆ. ಈ ಸಿನಿಮಾಗೆ ಕಲೈಪ್ಪುಲಿ ಧಾನು ಬಂಡವಾಳ ಹೂಡಿದರೆ ವಿಜಯ್ ಕರ್ತಿಕೇಯ ಆ್ಯಕ್ಷನ್ ಕಟ್ ಹೇಳಿದ್ದಾರೆ. ಮೊದಲ ಸಿನಿಮಾದಲ್ಲೇ ಮೆಚ್ಚುಗೆ ಪಡೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!