ರಿಷಬ್ ಶೆಟ್ಟಿ ಬಳಿಕ ತೆಲುಗಿನ ರಾಣಾ ದಗ್ಗುಬಾಟಿ ಶೋಗೆ ಬಂದ ಮತ್ತೋರ್ವ ಕನ್ನಡಿಗ
ರಾಣಾ ದಗ್ಗುಬಾಟಿ ಅವರ ‘ದಿ ರಾಣಾ ದಗ್ಗುಬಾಟಿ ಶೋ’ಗೆ ಕನ್ನಡದ ಹೀರೋ ಒಬ್ಬರ ಆಗಮನ ಆಗಿದೆ. ಇತ್ತೀಚೆಗೆ ಸೂಪರ್ ಹಿಟ್ ಆದ ಚಿತ್ರದ ಯಶಸ್ಸಿನ ನಂತರ ಈ ಆಗಮನ ನಡೆದಿದೆ. ಉಪೇಂದ್ರ ಅವರ ವಿಶಿಷ್ಟವಾದ ಆಲೋಚನೆಗಳು ಮತ್ತು ಅಭಿಪ್ರಾಯಗಳನ್ನು ಈ ಶೋನಲ್ಲಿ ಕಾಣಬಹುದು. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಈ ಎಪಿಸೋಡ್ ಪ್ರಸಾರವಾಗಲಿದೆ. ಶರ್ಮಿಳಾ ಮಾಂಡ್ರೆ ಕೂಡ ಈ ಶೋನಲ್ಲಿ ಭಾಗವಹಿಸಿದ್ದಾರೆ.
ರಾಣಾ ದಗ್ಗುಬಾಟಿ ಅವರಿಗೆ ಯಾವುದೇ ಭಾಷೆಯ ಮಿತಿ ಇಲ್ಲ. ಅವರು ಆ ರೀತಿಯ ಗಡಿಯನ್ನು ಹಾಕಿಕೊಂಡವರಲ್ಲ. ಎಲ್ಲಾ ಚಿತ್ರರಂಗ ಒಂದು ಎಂದುಕೊಂಡವರು ಅವರು. ಈಗ ಅವರು ‘ದಿ ರಾಣಾ ದಗ್ಗುಬಾಟಿ ಶೋ’ನ ನಡೆಸಿಕೊಡುತ್ತಿದ್ದಾರೆ. ಇತ್ತೀಚೆಗೆ ರಿಷಬ್ ಶೆಟ್ಟಿ ಅವರು ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ರಾಣಾ ಅವರೇ ಕುಂದಾಪುರಕ್ಕೆ ತೆರಳಿ ಶೂಟ್ ಮಾಡಿದ್ದರು. ಈಗ ಮತ್ತೋರ್ವ ಕನ್ನಡಿಗನಿಗೆ ಈ ಶೋನಲ್ಲಿ ಅವಕಾಶ ಸಿಕ್ಕಿದೆ. ಅವರು ಬೇರಾರೂ ಅಲ್ಲ, ರಿಯಲ್ ಸ್ಟಾರ್ ಉಪೇಂದ್ರ.
ಉಪೇಂದ್ರ ಅವರು ಇತ್ತೀಚೆಗೆ ‘ಯುಐ’ ಚಿತ್ರದ ಮೂಲಕ ಗೆಲುವು ಕಂಡರು. ಈ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರವನ್ನು ಕನ್ನಡದವರು ಮಾತ್ರವಲ್ಲದೆ, ಪರಭಾಷಿಗರು ಕೂಡ ಇಷ್ಟಪಟ್ಟಿದ್ದಾರೆ. ಈ ಸಿನಿಮಾದ ಕಲೆಕ್ಷನ್ ಕೂಡ ಜೋರಾಗಿದೆ. ಕನ್ನಡದ ಜೊತೆಗೆ ತೆಲುಗು ಹಾಗೂ ತಮಿಳಿನ ಪ್ರೇಕ್ಷಕರಿಗೂ ಸಿನಿಮಾ ಇಷ್ಟ ಆಗುತ್ತಿದೆ. ಅವರು ಗೆಲುವಿನ ಖುಷಿಯಲ್ಲಿ ಇದ್ದಾರೆ. ಇದೇ ಖುಷಿಯಲ್ಲಿ ಅವರು ‘ದಿ ರಾಣಾ ದಗ್ಗುಬಾಟಿ’ ಶೋಗೆ ಆಗಮಿಸಿದ್ದಾರೆ.
ರಾಣಾ ದಗ್ಗುಬಾಟಿ ಅವರು ನಟನಾಗಿ ಹೆಚ್ಚು ಗುರುತಿಸಿಕೊಂಡಿದ್ದಾರೆ. ಅವರು ‘ಯುಐ’ ಚಿತ್ರಕ್ಕಾಗಿ ಒಂದು ಪ್ರಮೋಷನಲ್ ವಿಡಿಯೋ ಕೂಡ ಮಾಡಿದ್ದರು. ಉಪೇಂದ್ರ ಜೊತೆ ಒಂದಷ್ಟು ಚರ್ಚೆಗಳನ್ನು ನಡೆಸಿದ್ದರು. ಈಗ ಉಪೇಂದ್ರ ಅವರನ್ನು ತಮ್ಮ ಶೋಗೇ ಕರೆಸಿಕೊಂಡಿದ್ದಾರೆ. ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಶೋ ಪ್ರಸಾರ ಕಾಣಲಿದೆ. ಇದರ ಶೂಟ್ ಮುಂಜಾನೆ 3 ಗಂಟೆಗೆ ನಡೆದಿದೆ.
View this post on Instagram
ಶರ್ಮಿಳಾ ಮಾಂಡ್ರೆ ಕೂಡ ಶೂಟ್ನಲ್ಲಿ ಭಾಗಿ ಆಗಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಅವರು ಈ ಶೋನ ಭಾಗವಾಗಿರುವುದಕ್ಕೆ ಸಖತ್ ಎಗ್ಸೈಟ್ ಆಗಿದ್ದಾರೆ. ಈ ಎಪಿಸೋಡ್ ಯಾವಾಗ ಪ್ರಸಾರ ಕಾಣುತ್ತದೆ ಎನ್ನುವ ಕುತೂಹಲ ಮೂಡಿದೆ.
ಇದನ್ನೂ ಓದಿ: ಉಪೇಂದ್ರಗೆ ತಮ್ಮ ಈ ಸಿನಿಮಾವನ್ನು ಹಿಂದಿಗೆ ರೀಮೇಕ್ ಮಾಡುವಾಸೆ
ಉಪೇಂದ್ರ ಅವರು ಫಿಲ್ಟರ್ಲೆಸ್ ಮಾತುಗಳ ಮೂಲಕ ಇಷ್ಟ ಆಗುತ್ತಾರೆ. ಅವರು ಏನು ಮಾತನಾಡುತ್ತಾರೆ ಅದು ಅನೇಕರಿಗೆ ಇಷ್ಟ ಆಗುತ್ತದೆ. ಅವರ ಆಲೋಚನೆಗಳು ಕೂಡ ಭಿನ್ನವಾಗಿವೆ. ಈಗ ಅಮೇಜಾನ್ ಪ್ರೈಮ್ ವಿಡಿಯೋ ಶೋನಲ್ಲಿ ಅವರು ಏನೆಲ್ಲ ಮಾತನಾಡುತ್ತಾರೆ ಎನ್ನುವ ಕುತೂಹಲ ಮೂಡಿದೆ. ಮುಂದಿನ ದಿನಗಳಲ್ಲಿ ‘ಯುಐ’ ಚಿತ್ರ ಒಟಿಟಿಗೆ ರಿಲೀಸ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.