AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾರದ ದಿನವೂ ಹಣ ಬಾಚಿಕೊಂಡ ‘ಮ್ಯಾಕ್ಸ್’; ಸುದೀಪ್ ಚಿತ್ರಕ್ಕೆ ಕಲೆಕ್ಷನ್ ಹೊಳೆ

Max Movie Collection: ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅಭೂತಪೂರ್ವ ಯಶಸ್ಸನ್ನು ಕಂಡಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರವಾಗಿ ಹೆಸರು ಮಾಡಿದೆ. ರಜಾದಿನಗಳಲ್ಲಷ್ಟೇ ಅಲ್ಲ, ವಾರದ ದಿನಗಳಲ್ಲೂ ಉತ್ತಮ ಸಂಗ್ರಹ ಮಾಡುತ್ತಿದೆ. 'ಯುಐ' ಚಿತ್ರದ ಪ್ರದರ್ಶನ ಕಡಿಮೆಯಾಗುತ್ತಿರುವುದರಿಂದ 'ಮ್ಯಾಕ್ಸ್' ಚಿತ್ರದ ಗಳಿಕೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.

ವಾರದ ದಿನವೂ ಹಣ ಬಾಚಿಕೊಂಡ ‘ಮ್ಯಾಕ್ಸ್’; ಸುದೀಪ್ ಚಿತ್ರಕ್ಕೆ ಕಲೆಕ್ಷನ್ ಹೊಳೆ
ಸುದೀಪ್
ರಾಜೇಶ್ ದುಗ್ಗುಮನೆ
|

Updated on: Jan 03, 2025 | 10:51 AM

Share

ಕಿಚ್ಚ ಸುದೀಪ್ ಅವರು ವೃತ್ತಿ ಜೀವನದಲ್ಲಿ ಇಷ್ಟು ದೊಡ್ಡ ಯಶಸ್ಸು ಕಂಡು ಅದೆಷ್ಟೋ ವರ್ಷಗಳೇ ಆಗಿ ಹೋಗಿದ್ದವು. ‘ಮ್ಯಾಕ್ಸ್’ ಸಿನಿಮಾ ಅವರ ವೃತ್ತಿ ಜೀವನಕ್ಕೆ ದೊಡ್ಡ ಗೆಲುವನ್ನೇ ತಂದುಕೊಟ್ಟಿದೆ. ಈ ಚಿತ್ರ ರಜಾ ದಿನಗಳಲ್ಲಿ ಮಾತ್ರವಲ್ಲ, ವಾರದ ದಿನವೂ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಇದು ಸುದೀಪ್ ಖುಷಿಯನ್ನು ಹೆಚ್ಚಿಸಿದೆ. ನಟನಾಗಿ, ನಿರ್ಮಾಪಕನಾಗಿ ಅವರು ದೊಡ್ಡ ಮಟ್ಟದ ಗೆಲುವು ಕಂಡಿದ್ದಾರೆ. ಚಿತ್ರದ ಒಟ್ಟಾರೆ ಗಳಿಕೆ ಬಗ್ಗೆ ಈ ಸ್ಟೋರಿಯಲ್ಲಿ ವಿವರ ಇದೆ.

‘ಮ್ಯಾಕ್ಸ್’ ಸಿನಿಮಾ ಕಳೆದ ವರ್ಷ ಡಿಸೆಂಬರ್ 25ರಂದು ತೆರೆಗೆ ಬಂತು. ಈ ಸಿನಿಮಾ ಕರ್ನಾಟಕದಲ್ಲಿ ಕಳೆದ ವರ್ಷ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನ್ನುವ ಖ್ಯಾತಿ ಪಡೆಯಿತು. ಈಗ 2025ರಲ್ಲೂ ಚಿತ್ರದ ಅಬ್ಬರ ಮುಂದುವರಿದಿದೆ. ಹೊಸ ವರ್ಷಕ್ಕೆ ರಜೆ ಇದ್ದ ಕಾರಣ ಸಿನಿಮಾ 4.62 ಕೋಟಿ ರೂಪಾಯಿ ಗಳಿಸಿತ್ತು. ಜನವರಿ 2ರಂದು ಸಿನಿಮಾ 1.75 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಜನವರಿ 1ಕ್ಕೆ ಹೋಲಿಕೆ ಮಾಡಿದರೆ ಗುರುವಾರದ ಕಲೆಕ್ಷನ್ ಕೊಂಚ ಕಡಿಮೆಯೇ. ಆದರೆ, ವಾರದ ದಿನವೂ ಸಿನಿಮಾ ಸುಮಾರು 2 ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತದೆ ಎಂದರೆ ಅದು ನಿಜಕ್ಕೂ ಖುಷಿಯ ವಿಚಾರ. ಸದ್ಯ ಎಲ್ಲ ಕಡೆಗಳಲ್ಲಿ ‘ಯುಐ’ ಚಿತ್ರದ ಹವಾ ಕಡಿಮೆ ಆಗುತ್ತಿದೆ. ಹೀಗಾಗಿ ಹಲವು ಕಡೆಗಳಲ್ಲಿ ‘ಯುಐ’ ಬದಲು ‘ಮ್ಯಾಕ್ಸ್’ ಪ್ರದರ್ಶನ ಆರಂಭಿಸಿದೆ.

ಕರ್ನಾಟಕದ ಹಲವು ತಾಲೂಕುಗಳಲ್ಲಿ ಒಂದೇ ಥಿಯೇಟರ್​ ಇದೆ. ಅಲ್ಲಿ ಇಷ್ಟು ದಿನ ‘ಯುಐ’ ಪ್ರದರ್ಶನ ಕಾಣುತ್ತಿತ್ತು. ಇಂದಿನಿಂದ (ಜನವರಿ 3) ‘ಯುಐ’ ಬದಲು ‘ಮ್ಯಾಕ್ಸ್’ ಸಿನಿಮಾನ ಪ್ರದರ್ಶನ ಮಾಡಲಾಗುತ್ತಿದೆ. ಹೀಗಾಗಿ ವಾರಂತ್ಯದಲ್ಲಿ ಸಿನಿಮಾ ಮತ್ತಷ್ಟು ಗಳಿಕೆ ಮಾಡುವ ನಿರೀಕ್ಷೆ ಇದೆ.

ಇದನ್ನೂ ಓದಿ: ಹೊಸ ವರ್ಷದ ಮೊದಲ ದಿನವೇ ದಾಖಲೆಯ ಗಳಿಕೆ ಮಾಡಿದ ‘ಮ್ಯಾಕ್ಸ್’; ಮಂಕಾದ ‘ಯುಐ’

‘ಮ್ಯಾಕ್ಸ್’ ಚಿತ್ರಕ್ಕೆ ಸುದೀಪ್ ಹೀರೋ ಆದರೆ, ಉಗ್ರಂ ಮಂಜು, ಇಳವರಸು, ಸಂಯುಕ್ತಾ ಹೊರನಾಡು ಮೊದಲಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ್ ಕಾರ್ತಿಕೇಯ ನಿರ್ದೇಶನದ ಈ ಚಿತ್ರಕ್ಕೆ ಕಲೈಪ್ಪುಲಿ ಧಾನು ಬಂಡವಾಳ ಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?