- Kannada News Photo gallery Actor Hanumantha Parents enter Bigg Boss House and talked Lambani | Cinema News in Kannada
ಅರ್ಥವಾಗಲೇ ಇಲ್ಲ ಹನುಮಂತ ಜೊತೆ ತಂದೆ-ತಾಯಿ ನಡೆಸಿದ ಸಂಭಾಷಣೆ; ಆಡಿದ್ದು ಯಾವ ಭಾಷೆ?
ಹನುಮಂತ ಅವರು ಹಾವೇರಿ ಮೂಲದವರು. ಅವರು ಕುರಿ ಮೇಯಿಸಿ ಜೀವನ ನಡೆಸಿದವರು. ಅವರ ತಂದೆ-ತಾಯಿಗೆ ನಗರ ಎನ್ನೋದು ಹೊಸದು. ಆದರೆ, ಮಗ ಬಿಗ್ ಬಾಸ್ನಲ್ಲಿ ಇದ್ದಾನೆ ಎಂಬ ಕಾರಣಕ್ಕೆ ಅವರು ಇಲ್ಲಿಗೆ ಬಂದಿದ್ದಾರೆ. ಈ ಎಪಿಸೋಡ್ ಸಖತ್ ಫನ್ ಹಾಗೂ ಭಾವನಾತ್ಮಕ ಆಗಿ ಇತ್ತು.
Updated on: Jan 03, 2025 | 9:00 AM

‘ಬಿಗ್ ಬಾಸ್’ ಮನೆಯಲ್ಲಿ ಹನುಮಂತ ಲಮಾಣಿ ಅವರು ಉತ್ತಮ ರೀತಿಯಲ್ಲಿ ಆಟ ಆಡುತ್ತಿದ್ದಾರೆ. ಅವರ ಆಟ ಗಮನ ಸೆಳೆಯುತ್ತಿದೆ. ಎಲ್ಲಾ ಸ್ಪರ್ಧಿಗಳಿಗೆ ಅವರು ಟಫ್ ಆಗಿ ಸ್ಪರ್ಧೆ ನೀಡುವ ಮೂಲಕ ಗಮನ ಸೆಳೆಯುತ್ತಾ ಇದ್ದಾರೆ. ಈಗ ಹನುಮಂತ ಅವರ ಕುಟುಂಬ ದೊಡ್ಮನೆಗೆ ಬಂದಿದೆ.

ಹನುಮಂತ ಅವರು ಹಾವೇರಿ ಮೂಲದವರು. ಅವರು ಕುರಿ ಮೇಯಿಸಿ ಜೀವನ ನಡೆಸಿದವರು. ಅವರ ತಂದೆ-ತಾಯಿಗೆ ನಗರ ಪ್ರದೇಶ ಹೊಸದು. ಆದರೂ ಮಗನಿಗಾಗಿ ದೊಡ್ಮನೆ ಒಳಗೆ ಬಂದಿದ್ದಾರೆ. ಈ ಎಪಿಸೋಡ್ ಸಖತ್ ಫನ್ ಹಾಗೂ ಭಾವನಾತ್ಮಕ ಆಗಿ ಇತ್ತು.

ಹನುಮಂತ ಅವರ ತಂದೆ ತಾಯಿ ಮನೆ ಒಳಗೆ ಬರುತ್ತಿದ್ದಂತೆ ಅವರದ್ದೇ ಭಾಷೆಯಲ್ಲಿ ಮಾತನಾಡಿದರು. ಹನುಮಂತ ಕೂಡ ಇದೇ ಭಾಷೆಯಲ್ಲಿ ಉತ್ತರ ನೀಡಿದರು. ವೀಕ್ಷಕರಿಗೆ ಸಹಾಯ ಆಗಲಿ ಎಂದು ಬಿಗ್ ಬಾಸ್ ಅವುಗಳ ಅರ್ಥವನ್ನು ಕೆಳಗೆ ಕನ್ನಡದಲ್ಲಿ ನೀಡಿದರು. ಅವರು ಆಡಿದ್ದು ಲಂಬಾಣಿ ಭಾಷೆ.

ಬಿಗ್ ಬಾಸ್ನಲ್ಲಿ ಕನ್ನಡ ಬಿಟ್ಟು ಬೇರೆ ಭಾಷೆ ಬಳಸುವಂತಿಲ್ಲ ಎಂಬ ಸೂಚನೆ ಇದೆ. ಆದರೆ, ಕುಟುಂಬದವರು ಬಂದು ಭಾವುಕರಾಗಿ ಮಾತನಾಡುವಾಗ ‘ಕನ್ನಡ ಬಳಸಿ’ ಎಂದು ಹೇಳುವುದು ಸರಿ ಆಗುವುದಿಲ್ಲ. ಹೀಗಾಗಿ, ಬಿಗ್ ಬಾಸ್ ಯಾವುದೇ ಸೂಚನೆ ಕೊಟ್ಟಿಲ್ಲ.

ಹನುಮಂತ ಅವರು ಇತ್ತೀಚೆಗೆ ಡಲ್ ಆಗಿದ್ದಾರೆ. ಒಂದೊಮ್ಮೆ ಕುಟುಂಬದವರು ಬಂದರೆ ಆ್ಯಕ್ಟೀವ್ ಆಗೋದಾಗಿ ಅವರು ಹೇಳಿದ್ದರು. ಈಗ ಕುಟುಂಬದವರು ಬಂದು ಹೋಗಿದ್ದಾರೆ. ಈಗ ಅವರು ಯಾವ ರೀತಿ ಆಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.



















