ಬಿಗ್ ಬಾಸ್ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್ಗೆ ಹನುಮಂತ ಫಿದಾ
ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಸ್ಪರ್ಧಿಗಳಿಗೆ ವಿಶೇಷವಾದ ಪ್ರೀತಿ ತೋರಿಸುತ್ತಾರೆ. ಪ್ರತಿ ಸೀಸನ್ ಕೊನೆಗೊಳ್ಳುವಾಗಲೂ ಅವರು ಸ್ಪರ್ಧಿಗಳಿಗಾಗಿ ಅಡುಗೆ ಮಾಡಿ ಕಳಿಸುತ್ತಾರೆ. ಅದು ಈ ಸೀಸನ್ನಲ್ಲೂ ಮುಂದುವರಿದಿದೆ. ಸುದೀಪ್ ಅವರು ತಮ್ಮ ಕೈಯಾರೆ ತಯಾರಿಸಿದ ಊಟವನ್ನು ದೊಡ್ಮನೆಗೆ ಕಳಿಸಿಕೊಟ್ಟಿದ್ದಾರೆ. ಅದನ್ನು ಸವಿದು ಮನೆ ಮಂದಿ ಖುಷಿಪಟ್ಟಿದ್ದಾರೆ.
ಬಿಗ್ ಬಾಸ್ ಮನೆ ಮಂದಿಗೆ ಕಿಚ್ಚನ ಕೈ ರುಚಿ ಸವಿಯುವ ಅವಕಾಶ ಸಿಕ್ಕಿದೆ. ಪ್ರತಿ ಸದಸ್ಯರ ಹೆಸರು ಬರೆದು ಊಟವನ್ನು ಕಳಿಸಲಾಗಿದೆ. ಕಿಚ್ಚ ಸುದೀಪ್ ಕಡೆಯಿಂದ ಈ ಪರಿ ಪ್ರೀತಿ ಸಿಕ್ಕಿದ್ದಕ್ಕೆ ಹನುಮಂತ, ತ್ರಿವಿಕ್ರಮ್, ಗೌತಮಿ ಜಾದವ್, ಮೋಕ್ಷಿತಾ, ಚೈತ್ರಾ ಕುಂದಾಪುರ, ಭವ್ಯಾ ಗೌಡ, ಉಗ್ರಂ ಮಂಜು, ಧನರಾಜ್, ರಜತ್ ಅವರು ಖುಷಿಪಟ್ಟಿದ್ದಾರೆ. ‘ನಾವು ಬಿಗ್ ಬಾಸ್ ಮನೆಗೆ ಬಂದಿದ್ದಕ್ಕೆ ಸಾರ್ಥಕ ಆಯಿತು’ ಎಂದು ಹನುಮಂತ ಅವರು ಹೇಳಿದ್ದಾರೆ. ಜ.3ರ ಸಂಚಿಕೆಯಲ್ಲಿ ಇದು ಪ್ರಸಾರ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos