ಸಿದ್ದರಾಮಯ್ಯ ಮತ್ತು ಶಿವಕುಮಾರ್ ಬ್ಲ್ಯಾಕ್ಮೇಲ್ ಮಾಡೋದನ್ನು ಬಿಟ್ಟು ಆರೋಪಗಳನ್ನು ಪ್ರೂವ್ ಮಾಡಲಿ: ಪ್ರತಾಪ್ ಸಿಂಹ
ವಿರೋಧ ಪಕ್ಷದ ನಾಯಕರು ಸರ್ಕಾರದ ವಿರುದ್ಧ ಮುಡಾ ಹಗರಣ, ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಸೇರಿದಂತೆ ಇನ್ನೂ ಹಲವು ಹಗರಣಗಳ ಬಗ್ಗೆ ಮಾತಾಡಿದಾಗ ಸಿದ್ದರಾಮಯ್ಯ ಮತ್ತು ಶಿವಕುಮಾರ್, ಬಿಜೆಪಿ ನಾಯಕರದ್ದು ತೆರೆದಿಡ್ತೀವಿ, ಬಿಚ್ಚಿಡ್ತೀವಿ ಅಂತ ಬ್ಲ್ಯಾಕ್ಮೇಲ್ ಮಾಡುತ್ತಾರೆ, ಅವರನ್ನು ತಡೆದವರು ಯಾರು ಎಂದು ಪ್ರತಾಪ್ ಸಿಂಹ ಹೇಳಿದರು.
ದೆಹಲಿ: ರಾಷ್ಟ್ರದ ರಾಜಧಾನಿಯಲ್ಲಿ ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಚಿವ ಸಂಪುಟವನ್ನು ತರಾಟೆಗೆ ತೆಗೆದುಕೊಂಡರು. ತಮ್ಮ ಸರ್ಕಾರದ ವಿರುದ್ಧ ಸುಳ್ಳು ಅರೋಪಗಳನ್ನು ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಒಂದೇ ಒಂದು ಅರೋಪವನ್ನು ಪ್ರೂವ್ ಮಾಡಿಲ್ಲ, ಬಿಟ್ ಕಾಯಿನ್ ಹಗರಣ, 40 ಪರ್ಸೆಂಟ್ ಕಮೀಶನ್, ಪಿಎಸ್ಐ ನೇಮಕಾತಿ ಹಗರಣಗಳು ನಡೆದಿವೆ ಅಂತ ಜನರಿಗೆ ಸುಳ್ಳು ಹೇಳಿ ವೋಟು ಗಿಟ್ಟಿಸಿದರೇ ಹೊರತು, ತನಿಖೆಗಳನ್ನು ನಡೆಸಿ ಸತ್ಯಾಂಶವನ್ನು ಹೊರತೆಗೆಯುವುದು ಅವರಿಗೆ ಸಾಧ್ಯವಾಗಲಿಲ್ಲ ಎಂದು ಪ್ರತಾಪ್ ಸಿಂಹ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕಾಂಗ್ರೆಸ್ ಸೇರುವ ವದಂತಿಗಳ ಬಗ್ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಏನಂದ್ರು ನೋಡಿ
Latest Videos