ದೆಹಲಿಯಲ್ಲಿ ಶಿವಕುಮಾರ್ ಮತ್ತು ಜೆಡಿಎಸ್ ಮುಖಂಡರು ನಡೆಸಿದ ಗುಸುಗುಸು ಮಾತುಕತೆ ಚರ್ಚೆಗೆ ಗ್ರಾಸ!
ಮತ್ತೊಂದು ಭಾಗದಲ್ಲೂ ಶಿವಕುಮಾರ್, ಮಹೇಶ್ ಮತ್ತು ಕಾಶೆಂಪುರ ಗಹನವಾದ ಚರ್ಚೆಯಲ್ಲಿ ಮುಳುಗಿರುವುದನ್ನು ಇಲ್ಲಿ ನೋಡಬಹುದು. ಪತ್ರಕರ್ತರು ಅವರ ಹತ್ತಿರ ಬಂದಿರೋದನ್ನು ಗಮನಿಸುವ ಶಿವಕುಮಾರ್ ಹೋಗ್ರೀ ಆಚೆ ಎನ್ನುವಂತೆ ಸನ್ನೆ ಮಾಡುತ್ತಾರೆ. ಈ ಮೂವರ ನಡುವೆ ನಡೆದಿರಬಹುದಾದ ಮಾತುಕತೆಯ ಬಗ್ಗೆ ಸಹಜವಾಗೇ ಕುತೂಹಲ ಸೃಷ್ಟಿಯಾಗಿದೆ.
ದೆಹಲಿ: ಸದ್ಯಕ್ಕೆ ದೆಹಲಿಯಲ್ಲಿರುವ ಉಪ ಮುಖ್ಯಮಂತ್ರಿ ಡಿಕೆ ಡಿಕೆ ಶಿವಕುಮಾರ್ ಅವರನ್ನು ಜೆಡಿಎಸ್ ಮುಖಂಡರಾದ ಸಾ ರಾ ಮಹೇಶ್ ಮತ್ತು ಬಂಡೆಪ್ಪ ಕಾಶೆಂಪುರ ಭೇಟಿಯಾಗಿರುವುದು ಅಥವಾ ಖುದ್ದು ಡಿಸಿಎಂ ಆ ನಾಯಕರನ್ನು ಭೇಟಿಯಾಗಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ. ಮೂವರು ಒಟ್ಟಿಗೆ ನಿಂತಿರುವುದನ್ನು ಮಾಧ್ಯಮ ಕೆಮೆರಾಗಳು ಸೆರೆಹಿಡಿಯುವಾಗ ಶಿವಕುಮಾರ್ ಸಿಡಿಸಿದ ಜೋಕ್ ಗೆ ಜೆಡಿಎಸ್ ಮುಖಂಡರು ನಗುತ್ತಾರೆ. ನಂತರ ಶಿವಕುಮಾರ್ ನಮ್ಮ ಪೋಟೋ ತೆಗೆದಿದ್ದು ಆಯ್ತಲ್ಲ, ಹೊರಡಿ ಇನ್ನು ಅಂತ ಮಾಧ್ಯಮದವರಿಗೆ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದೆಹಲಿ ಅಸೆಂಬ್ಲಿ ಚುನಾವಣೆ ಹಿನ್ನೆಲೆಯಲ್ಲಿ ಹೈಕಮಾಂಡ್ ಕೇವಲ ಶಿವಕುಮಾರ್ರನ್ನು ಮಾತ್ರ ಚರ್ಚೆಗೆ ಕರೆದಿದ್ದು ಯಾಕೆ?
Latest Videos