ಅಮಿತ್ ಶಾ ಹೇಳಿಕೆ ಖಂಡಿಸಿ ವಿವಿಧ ಸಂಘಟನೆಗಳು ನೀಡಿರುವ ಮೈಸೂರು ಬಂದ್ ಕರೆಗೆ ಉತ್ತಮ ಪ್ರತಿಕ್ರಿಯೆ

ಅಮಿತ್ ಶಾ ಹೇಳಿಕೆ ಖಂಡಿಸಿ ವಿವಿಧ ಸಂಘಟನೆಗಳು ನೀಡಿರುವ ಮೈಸೂರು ಬಂದ್ ಕರೆಗೆ ಉತ್ತಮ ಪ್ರತಿಕ್ರಿಯೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 07, 2025 | 12:17 PM

ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಡಾ ಬಿಅರ್ ಅಂಬೇಡ್ಕರ್ ವಿರುದ್ಧ ಅವಹೇಳನಕಾರಿಯಾಗಿ ಮಾತಾಡಿರುವರೆಂದು ವಿವಿಧ ಸಂಘಟನೆಗಳು ಮೈಸೂರು ಮತ್ತು ಮಂಡ್ಯ ಬಂದ್​ಗೆ ಕರೆ ನೀಡಿವೆ. ಮಂಡ್ಯದಲ್ಲಿ ಚಿತ್ರಣ ಬೇರೆಯಾಗಿದೆ. ಬಂದ್​​ಗೆ ಜನರ ಪ್ರತಿಕ್ರಿಯೆ ನೀರಸವಾಗಿದೆ. ಮುಚ್ಚಿದ್ದ ಅಂಗಡಿ ಮುಂಗಟ್ಟುಗಳನ್ನು ತೆರೆಸುವ ಕೆಲಸ ಅಲ್ಲಿನ ಬಿಜೆಪಿ ಕಾರ್ಯಕರ್ತರು ಮಾಡುತ್ತಿದ್ದಾರೆ.

ಮೈಸೂರು: ಇವತ್ತು ಮೈಸೂರು ಬಂದ್ ಗೆ ವಿವಿಧ ಸಂಘಟನೆಗಳು ನೀಡಿರುವ ಕರೆಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ನಗರದ ಬಸ್ ನಿಲ್ದಾಣ ಮತ್ತು ಅದರ ಮುಂಭಾಗದಲ್ಲಿನ ದೃಶ್ಯಗಳನ್ನು ಇಲ್ಲಿ ನೋಡಬಹುದು. ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳು ಬಸ್ ಗಾಗಿ ಕಾಯುತ್ತಿದ್ದಾರೆ, ಬಸ್ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಕೆಎಸ್ಸಾರ್ಟಿಸಿ ಬಸ್​​ಗಳ ಚಾಲಕರು ಮತ್ತು ನಿರ್ವಾಹಕರು ನಿಲ್ದಾಣದಲ್ಲಿ ನಿಂತು ಲೋಕಾಭಿರಾಮವಾಗಿ ಹರಟುತ್ತಿರುವುದನ್ನು ನೋಡಬಹುದು. ಅಲ್ಲೊಂದು ಇಲ್ಲೊಂದು ಆಟೋ ಕಾಣುತ್ತಿವೆಯಾದರೂ ಮುಖ್ಯರಸ್ತೆಗಳಲ್ಲಿ ಪ್ರತಿಭಟನೆಕಾರರು ಅವುಗಳನ್ನು ನಿಲ್ಲಿಸಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮೈಸೂರು ಬಂದ್ ಹೇಗಿದೆ ನೋಡಿ