Cleaning Tips : ಬೆಳ್ಳಿ ಸಾಮಗ್ರಿಗಳು ಕಪ್ಪಾಗಿದ್ದರೆ ಐದೇ ನಿಮಿಷದಲ್ಲಿ ಫಳ ಫಳ ಹೊಳೆಯುವಂತೆ ಮಾಡುವುದೇಗೆ?
ಪ್ರತಿಯೊಬ್ಬರ ಮನೆಯಲ್ಲಿಯೂ ಬೆಳ್ಳಿ ಪಾತ್ರೆಗಳು ಹಾಗೂ ಆಭರಣಗಳು ಇರುತ್ತದೆ. ಆದರೆ ಈ ಸಾಮಗ್ರಿಗಳು ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ. ಹೀಗಾಗಿ ಇವುಗಳನ್ನು ಬಿಳುಪಾಗಿಸುವುದೇ ಕಷ್ಟದ ಕೆಲಸ. ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ ಬೆಳ್ಳಿಯ ಪಾತ್ರೆ ಹಾಗೂ ಆಭರಣಗಳನ್ನು ಸ್ವಚ್ಛಗೊಳಿಸುವುದು ತುಂಬಾನೇ ಸುಲಭ.
ಬೆಳ್ಳಿ ಪಾತ್ರೆಗಳು ಆಭರಣಗಳನ್ನು ಖರೀದಿ ಮಾಡಿದ ಆರಂಭದಲ್ಲಿ ಫಳಫಳನೇ ಹೊಳೆಯುತ್ತಿರುತ್ತದೆ. ಆದರೆ ದಿನ ಕಳೆದಂತೆ ಇದರ ಬಣ್ಣವು ಮಾಸುತ್ತದೆ. ಈ ಹಬ್ಬ ಹರಿದಿನಗಳಲ್ಲಿ ಈ ಕಪ್ಪಾದ ಬೆಳ್ಳಿ ಸಾಮಗ್ರಿಗಳನ್ನು ಸ್ವಚ್ಛಗೊಳಿಸುವುದೇ ದೊಡ್ಡ ಕೆಲಸ. ಎಷ್ಟು ತಿಕ್ಕಿದರೂ ಕಪ್ಪು ಬಣ್ಣಗಳು ಹೋಗುವುದೇ ಇಲ್ಲ. ಆ ತಕ್ಷಣವೇ ಮನೆಯಲ್ಲಿರುವ ಈ ಕೆಲವು ವಸ್ತುಗಳನ್ನು ಬಳಸಿ ಬೆಳ್ಳಿಯ ವಸ್ತುಗಳ ಬಣ್ಣವು ಮರಳುವಂತೆ ಮಾಡಬಹುದು.
- ವಿನೆಗರ್ ಬಳಸಿ ಬೆಳ್ಳಿಯ ಆಭರಣಗಳು ಅಥವಾ ಪಾತ್ರೆಗಳನ್ನು ಸ್ವಚ್ಛಗೊಳಿಸಬಹುದು. ಸ್ವಲ್ಪ ಪ್ರಮಾಣದಲ್ಲಿ ವಿನೆಗರ್ ಗೆ ಉಪ್ಪು ಬೆರೆಸಿ, ಈ ಮಿಶ್ರಣಕ್ಕೆ ಬೆಳ್ಳಿ ಪಾತ್ರೆಗಳು ಹಾಗೂ ಆಭರಣವನ್ನು ಅದ್ದಿ ಇಡಬೇಕು. ಸ್ವಲ್ಪ ಸಮಯದ ಬಳಿಕ ಈ ಬೆಳ್ಳಿ ಸಾಮಾಗ್ರಿಗಳನ್ನು ತಿಕ್ಕಿ ತೊಳೆದರೆ ಸ್ವಚ್ಛವಾಗುತ್ತದೆ.
- ಬೆಳ್ಳಿಯ ವಸ್ತುಗಳು ಸ್ವಚ್ಛಗೊಳಿಸಲು ಹಲ್ಲುಜ್ಜುವ ಟೂತ್ ಪೇಸ್ಟ್ ಬೆಸ್ಟ್ ಎನ್ನಬಹುದು. ಈ ಬೆಳ್ಳಿ ಪಾತ್ರೆಗಳ ಮೇಲೆ ಟೂತ್ ಪೇಸ್ಟ್ ಹಚ್ಚಿ ಹಾಗೆ ಬಿಡಬೇಕು. ಸ್ವಲ್ಪ ಸಮಯ ಬಿಟ್ಟು ನೀರಿನಿಂದ ತೊಳೆದರೆ ಫಳಫಳನೇ ಹೊಳೆಯುತ್ತದೆ.
- ಬೆಳ್ಳಿ ಪಾತ್ರೆ ಹಾಗೂ ಆಭರಣಗಳನ್ನು ತೊಳೆಯಲು ನಿಂಬೆಯ ರಸಕ್ಕೆ ಉಪ್ಪು ಬೆರೆಸಿ ಮಿಶ್ರಣ ಮಾಡಿಟ್ಟುಕೊಳ್ಳಬೇಕು. ಇದರಿಂದ ತಿಕ್ಕಿ ತೊಳೆದರೆ ಈ ಸಾಮಗ್ರಿಗಳು ಸ್ವಚ್ಛವಾಗುತ್ತದೆ.
- ಒಂದು ಲೋಟ ಬಿಸಿನೀರಿಗೆ ನಿಂಬೆ ರಸ ಹಾಗೂ ಉಪ್ಪು ಸೇರಿಸಿ, ಬೆಳ್ಳಿ ಸಾಮಗ್ರಿಗಳನ್ನು ಇದರಲ್ಲಿ ಅದ್ದಿ ಇಡಬೇಕು. ಸ್ವಲ್ಪ ಸಮಯ ಬಳಿಕ ತೊಳೆದರೆ ಹೊಳೆಯುತ್ತದೆ.
- ಟೊಮೆಟೋ ಸಾಸ್‌ನಿಂದಲೂ ಬೆಳ್ಳಿ ಆಭರಣಗಳು ಹಾಗೂ ಪಾತ್ರೆಗಳು ಹೊಳೆಯುವಂತೆ ಮಾಡಬಹುದು. ಬೆಳ್ಳಿಯ ಪಾತ್ರೆಗಳ ಮೇಲೆ ಟೊಮೆಟೋ ಸಾಸ್ ಅನ್ನು ಹಚ್ಚಿ, ಅರ್ಧ ಘಂಟೆ ಬಳಿಕ ಮೃದುವಾದ ಬ್ರಷ್‌ನಿಂದ ತಿಕ್ಕಿ ತೊಳೆದರೆ ಕಪ್ಪಾದ ಬೆಳ್ಳಿ ಸಾಮಗ್ರಿಗಳು ಬಿಳಿ ಬಣ್ಣಕ್ಕೆ ತಿರುಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: