Marriage Life : ನಿಮ್ಮ ಪತಿಯು ಬಯಸುವ ಈ ಗುಣಗಳು ನಿಮ್ಮಲ್ಲಿದೆಯಾ? ಹಾಗಾದ್ರೆ ನಿಮಗೆ ಇದು ತಿಳಿದಿರಬೇಕು

ಮದುವೆ ಎನ್ನುವುದು ಎರಡು ಕುಟುಂಬಗಳ ಬೆಸುಗೆ, ಎರಡು ಮನಸ್ಸುಗಳ ಮಿಲನ. ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಹೆಣ್ಣಾದವಳು ಗಂಡನ ಮನೆಯ ಆಚಾರ, ವಿಚಾರಗಳಿಗೆ ಹೊಂದಿಕೊಳ್ಳಬೇಕಾಗುತ್ತದೆ. ಗಂಡು ತನ್ನನ್ನೆ ನಂಬಿಕೊಂಡು ಬಂದ ಪತ್ನಿಯ ಸುಖ ಕಷ್ಟಗಳಿಗೆ ಜೊತೆಯಾಗಬೇಕು. ಸಂಸಾರದಲ್ಲಿ ಹೆಣ್ಣು ಗಂಡಿನಿಂದ ಪ್ರೀತಿಯನ್ನು ಬಯಸೋದು ಸಹಜ. ಆದರೆ ಪ್ರತಿ ಗಂಡು ತನ್ನ ಮಡದಿಯಿಂದ ಈ ಕೆಲವುದನ್ನು ಬಯಸುತ್ತಾನಂತೆ. ಇದನ್ನರಿತು ಪತಿಯ ಇಚ್ಛೆಯಂತೆ ಪತ್ನಿಯು ನಡೆದರೆ ಸಂಸಾರವು ಸ್ವರ್ಗವಾಗುತ್ತದೆ.

Marriage Life : ನಿಮ್ಮ ಪತಿಯು ಬಯಸುವ ಈ ಗುಣಗಳು ನಿಮ್ಮಲ್ಲಿದೆಯಾ? ಹಾಗಾದ್ರೆ ನಿಮಗೆ ಇದು ತಿಳಿದಿರಬೇಕು
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 05, 2024 | 3:04 PM

ಪ್ರತಿಯೊಬ್ಬರ ಜೀವನದ ಸುಂದರವಾದ ಅಧ್ಯಾಯವೇ ಈ ಮದುವೆ. ಗಂಡು ಹೆಣ್ಣಿನ ಜೀವನದಲ್ಲಿ ತಿರುವಿನ ಘಟ್ಟವು ಕೂಡ. ಹೀಗಾಗಿ ಹೆಣ್ಣು ಗಂಡು ಮದುವೆಯಾದ ಬಳಿಕ ಎಲ್ಲಾ ರೀತಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಹೆಣ್ಣಿನಂತೆ ಗಂಡಿಗೂ ಕೂಡ ಆಸೆ ಆಕಾಂಕ್ಷೆಗಲಿರುವುದು ಸಹಜ. ತನ್ನ ಸಂಗಾತಿಯೂ ಹೀಗೆ ಇರಬೇಕೆಂದು ಕನಸು ಕಂಡಿರುತ್ತಾರೆ. ಗಂಡು ಮದುವೆಯಾದ ಬಳಿಕ ಪತ್ನಿಯಿಂದ ಇದನ್ನು ನಿರೀಕ್ಷೆ ಮಾಡುತ್ತಾನೆ.

* ನಂಬಿಕೆಯೇ ಜೀವಾಳ : ಯಾವುದೇ ಸಂಬಂಧದಲ್ಲಿಯೂ ನಂಬಿಕೆಯೂ ಬಹಳ ಮುಖ್ಯ. ಹೀಗಾಗಿ ತನ್ನ ಮಡದಿಯೂ ಸದಾ ನನ್ನ ಮೇಲೆ ನಂಬಿಕೆ ಇಡಬೇಕು. ಯಾವುದೇ ಕಾರಣಕ್ಕೂ ಅನುಮಾನಪಡಬಾರದೆಂದು ಬಯಸುತ್ತಾನೆ.

* ಪ್ರಾಮಾಣಿಕತೆಯಿರಲಿ : ಸಂಸಾರದಲ್ಲಿ ಒಬ್ಬರಿಗೊಬ್ಬರು ಪ್ರಾಮಾಣಿಕರಾಗಿರಬೇಕು. ಗಂಡಂದಿರು ತಮ್ಮ ಸಂಗಾತಿಯೂ ಸಂಬಂಧದಲ್ಲಿ ಸದಾ ಪ್ರಾಮಾಣಿಕರಾಗಿರಬೇಕೆಂದು ಬಯಸುತ್ತಾರೆ.

* ಅರ್ಥಮಾಡಿಕೊಳ್ಳುವುದು : ವೈವಾಹಿಕ ಜೀವನದಲ್ಲಿ ಪರಸ್ಪರ ಅರ್ಥಮಾಡಿಕೊಂಡರೆ ಸಂಸಾರವು ಸರಾಗವಾಗಿ ಸಾಗಲು ಸಾಧ್ಯ. ಹೀಗಾಗಿ ಪತ್ನಿಯಾದವಳು ತನ್ನ ಅಗತ್ಯತೆಗಳನ್ನು ಪೂರೈಸುತ್ತ, ತನ್ನ ಬೇಕು ಬೇಡಗಳನ್ನು ಅರ್ಥ ಮಾಡಿಕೊಳ್ಳಲಿ ಎನ್ನುವ ನಿರೀಕ್ಷೆಯನ್ನು ಇಟ್ಟುಕೊಂಡಿರುತ್ತಾನೆ.

* ಪರಸ್ಪರ ಗೌರವವಿರಲಿ : ಸಂಸಾರದಲ್ಲಿ ಪರಸ್ಪರ ಗೌರವ ನೀಡುವುದು ಸಂಬಂಧವನ್ನು ಮತ್ತಷ್ಟು ಗಟ್ಟಿಯಾಗಿಸುತ್ತದೆ. ಹೆಂಡತಿಯೂ ಸದಾ ಪತಿಯ ಆಲೋಚನೆಗಳು, ಸಲಹೆಗಳು ಹಾಗೂ ನಿರ್ಧಾರಗಳನ್ನು ಗೌರವಿಸುತ್ತಿರಬೇಕು. ಹೀಗಾಗಿ ಪತಿಯೂ ಪತ್ನಿಯಿಂದ ಸದಾ ಗೌರವವನ್ನು ಬಯಸುತ್ತಾನೆ.

ಇದನ್ನೂ ಓದಿ: ಈ ಸಂದರ್ಭದಲ್ಲಿ ನೀವು ಅಪ್ಪಿತಪ್ಪಿಯೂ ಮಾತನಾಡಲೇಬೇಡಿ, ಇದ್ರಿಂದ ತೊಂದರೆಯೇ ಹೆಚ್ಚು

* ಆರ್ಥಿಕವಾಗಿ ಸಹಕರಿಸಲಿ : ಸಂಸಾರವು ಸುಗಮವಾಗಿ ನಡೆಯಬೇಕಾದರೆ ಆರ್ಥಿಕ ಸ್ಥಿತಿಯೂ ಚೆನ್ನಾಗಿರಬೇಕು. ಪತ್ನಿಯಾದವಳು ತನ್ನ ಜವಾಬ್ದಾರಿಯನ್ನು ಅರಿತು, ಆರ್ಥಿಕವಾಗಿ ಬೆಂಬಲ ನೀಡಲಿ ಎಂದು ಪತ್ನಿಯಾದವನು ಸದಾ ಬಯಸುತ್ತಾನೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: