ಮಾವು ತಿಂದ ತಕ್ಷಣವೇ ನೀರು ಕುಡಿಯುವುದರಿಂದ ಆರೋಗ್ಯ ಸಮಸ್ಯೆಗಳೇ ಹೆಚ್ಚು!
ಹಣ್ಣುಗಳ ರಾಜ ಎಂದೇ ಖ್ಯಾತಿ ಪಡೆದಿರುವ ಮಾವು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಇಷ್ಟ ಪಟ್ಟು ಸೇವಿಸುತ್ತಾರೆ. ಘಮ್ ಎನ್ನುವ ಮಾವು ತಿನ್ನಲು ರುಚಿಕರವಾಗಿದ್ದೂ, ಇದು ವಿಟಮಿನ್ ಗಳು, ಫೈಬರ್ ಮತ್ತು ಇತರ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಈ ಹಣ್ಣಿನ ನಿಯಮಿತ ಸೇವನೆಯಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಆದರೆ ಮಾವಿನ ಹಣ್ಣು ತಿಂದು ನೀರು ಕುಡಿಯುವುದು ಒಳ್ಳೆಯದಲ್ಲ, ಇದ್ರಿಂದ ಆಗುವ ತೊಂದರೆಗಳೇನು ಎನ್ನುವುದರ ಸಂಪೂರ್ಣ ಮಾಹಿತಿಯೂ ಇಲ್ಲಿದೆ.
ಮಾವಿನ ಹಣ್ಣು ಸೀಸನ್ ಆರಂಭವಾಗುತ್ತಿದ್ದಂತೆ ಮಾರುಕಟ್ಟೆ ತುಂಬೆಲ್ಲಾ ಮಾವುಗಳದ್ದೇ ಕಾರುಬಾರು. ರಸಭರಿತವಾದ ಮತ್ತು ಸಿಹಿಯಾದ ಮಾವಿನಹಣ್ಣನ್ನು ಬಾಯಲ್ಲಿಟ್ಟರೆ ರುಚಿಯನ್ನು ಸವಿದವನೇ ಬಲ್ಲನು. ಈ ಮಾವಿನ ಹಣ್ಣಿನಲ್ಲಿ ಹಲವಾರು ರೀತಿಯ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಅತಿಯಾದ ಸೇವನೆಯಿಂದ ಅಡ್ಡಪರಿಣಾಮಗಳೇ ಹೆಚ್ಚು. ಕೆಲವರಿಗೆ ಮಾವಿನ ಹಣ್ಣು ತಿಂದ ಬಳಿಕ ನೀರು ಕುಡಿಯುತ್ತಾರೆ. ಆದರೆ ಈ ಅಭ್ಯಾಸವು ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರುತ್ತದೆ.
ಮಾವಿನ ಹಣ್ಣನ್ನಷ್ಟೇ ಅಲ್ಲ ಯಾವುದೇ ಹಣ್ಣು ತಿಂದ ತಕ್ಷಣ ನೀರು ಕುಡಿಯಬಾರದು. ನೀರು ಕುಡಿಯುವುದರಿಂದ ಹೊಟ್ಟೆ ನೋವು, ಅನಿಲ ಮತ್ತು ಆಮ್ಲ ರಚನೆಯಾಗುತ್ತದೆ. ಇದರಿಂದ ಹೊಟ್ಟೆ ಉಬ್ಬುವುದು, ಅಜೀರ್ಣ ಮುಂತಾದ ಸಮಸ್ಯೆ ಕಾಡುತ್ತದೆ. ಅದಲ್ಲದೇ, ಕರುಳಿನ ಸೋಂಕಿಗೂ ಕಾರಣವಾಗಬಹುದು. ಹೀಗಾಗಿ ಮಾವಿನಹಣ್ಣು ತಿಂದ ಅರ್ಧ ಅಥವಾ ಒಂದು ಗಂಟೆಯ ನಂತರ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಯಾವುದೇ ಅಡ್ಡಪರಿಣಾಮಗಳನ್ನು ಬೀರುವುದಿಲ್ಲ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: