AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Doll Day 2024: ವಿಶ್ವ ಗೊಂಬೆ ದಿನ; ಬಾಲ್ಯದ ನೆನಪಿನ ಬುತ್ತಿಯೊಳಗೆ ಗೊಂಬೆಗಳದ್ದೇ ಬಹುಪಾಲು

ಹೆಣ್ಣು ಮಕ್ಕಳಿಗೆ ಗೊಂಬೆಗಳೆಂದರೆ ಬಲು ಪ್ರಿಯ. ಹೀಗಾಗಿ ಹೆಚ್ಚಿನವರು ವಿವಿಧ ವಿವಿಧ ಬಣ್ಣ, ಆಕಾರ ಹಾಗೂ ಗಾತ್ರದ ಗೊಂಬೆಗಳ ಖರೀದಿಯತ್ತ ಒಲವು ತೋರಿಸುತ್ತಿದ್ದಾರೆ. ಆದರೆ ಈ ಗೊಂಬೆಗಳಿಗೆಂದೇ ವಿಶೇಷವಾದ ದಿನವಿದ್ದು, ಅದುವೇ ವಿಶ್ವ ಗೊಂಬೆ ದಿನ. ಈ ಬಾರಿ ಜೂನ್ 8 ರಂದು ವಿಶ್ವ ಗೊಂಬೆ ದಿನವನ್ನು ಆಚರಿಸಲಾಗುತ್ತಿದೆ. ಹಾಗಾದ್ರೆ ಈ ದಿನದ ಇತಿಹಾಸ ಹಾಗೂ ಮಹತ್ವದ ಬಗೆಗಿನ ಮಾಹಿತಿಯೂ ಇಲ್ಲಿದೆ.

World Doll Day 2024: ವಿಶ್ವ ಗೊಂಬೆ ದಿನ; ಬಾಲ್ಯದ ನೆನಪಿನ ಬುತ್ತಿಯೊಳಗೆ ಗೊಂಬೆಗಳದ್ದೇ ಬಹುಪಾಲು
World Doll Day 2024
ಅಕ್ಷತಾ ವರ್ಕಾಡಿ
|

Updated on: Jun 07, 2024 | 6:32 PM

Share

ನಾವೆಲ್ಲಾ ಚಿಕ್ಕವರಿದ್ದಾಗ ಊರಿನ ಜಾತ್ರೆಗಳಲ್ಲಿ ಗೊಂಬೆಗಳನ್ನು ನೋಡಿ ನನಗೂ ಬೇಕು ಎಂದು ಅಮ್ಮನ ಬಳಿ ಹಠ ಮಾಡುತ್ತಿದ್ದ ದಿನಗಳು ಇದ್ದವು. ಆದರೆ ಎಷ್ಟೋ ಬಾರಿ ಅಮ್ಮ ಮಾತ್ರ ಏನೋ ನೆಪ ಹೇಳಿ ಗೊಂಬೆ ತೆಗೆಸಿಕೊಡದಿದ್ದಾಗ ಅಳುತ್ತ ಬರುತ್ತಿದ್ದ ದಿನಗಳು ಈ ಗೊಂಬೆಗಳನ್ನು ನೋಡಿದಾಗ ಈ ನೆನಪಾಗಬಹುದು. ಆದರೆ ಇದೀಗ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯ ಗೊಂಬೆಗಳು ಲಭ್ಯವಿದೆ. ಪ್ರತಿ ವರ್ಷ ಜೂನ್ ತಿಂಗಳ ಎರಡನೇ ಶನಿವಾರದಂದು ವಿಶ್ವ ಗೊಂಬೆ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಗೊಂಬೆ ದಿನದ ಇತಿಹಾಸ ಹಾಗೂ ಮಹತ್ವ:

1986ರಲ್ಲಿ ವಿಶ್ವ ಡಾಲ್ ದಿನವನ್ನು ಮಿಲೈಡ್ ಸೀಲೆ ಆಚರಿಸಲು ನಿರ್ಧರಿಸಿದರು. ಅದಕ್ಕೂ ಮೊದಲು ಈ ಗೊಂಬೆಗಳು ಸಾವಿರಾರು ವರ್ಷಗಳಿಂದ ಮಾನವ ನಾಗರಿಕತೆಯ ಒಂದು ಭಾಗವಾಗಿದೆ. ಕ್ರಿ.ಪೂ 21 ನೇ ಶತಮಾನಕ್ಕಿಂತಲು ಹಿನೆ ಈಜಿಪ್ಟ್ ಸಮಾಧಿಗಳಲ್ಲಿ ಮರದ ಗೊಂಬೆಗಳು ಕಂಡು ಬಂದಿವೆ. ಅದಲ್ಲದೇ, ಪ್ರಾಚೀನ ಗ್ರೀಕ್ ಮತ್ತು ರೋಮನ್ ಮಕ್ಕಳ ಸಮಾಧಿಗಳಲ್ಲಿ ಜೇಡಿಮಣ್ಣಿನ ಗೊಂಬೆಗಳು ಪತ್ತೆಯಾಗಿವೆ. ಹೀಗಾಗಿ ಪುರಾತತ್ವ ಪುರಾವೆಗಳು ಉಲ್ಲೇಖಗಳಲ್ಲಿ ಈ ಗೊಂಬೆಗಳು ಹಳೆಯ ಕಾಲದ ಆಟಿಕೆಗಳಲ್ಲಿ ಒಂದು ಎನ್ನಲಾಗಿದೆ.

ಇದನ್ನೂ ಓದಿ: ಅತ್ತೆ ಸೊಸೆ ಜಗಳ ಶುರುವಾಗುವುದೇ ಇಲ್ಲಿಂದ!

ಆದರೆ ಇದೀಗ ಆಧುನಿಕತೆಗೆ ಒಗ್ಗಿಕೊಂಡಿದ್ದು, ಮಾಟೆಲ್ನ ಬಾರ್ಬಿ ವಿಶ್ವದ ಅತ್ಯಂತ ಜನಪ್ರಿಯ ಗೊಂಬೆಗಳಲ್ಲಿ ಒಂದಾಗಿದೆ.1959 ರಲ್ಲಿ ಮೊದಲ ಬಾರಿಗೆ ರಚಿಸಲಾದ ಬಾರ್ಬಿ ಗೊಂಬೆಯು ವಿವಿಧ ಆಕಾರಗಳು, ಬಣ್ಣಗಳು ಮತ್ತು ಗಾತ್ರಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟು ಗೊಂಬೆ ಪ್ರಿಯರ ಮನಸ್ಸನ್ನ ಗೆದ್ದುಕೊಂಡಿದೆ. ಅದಲ್ಲದೇ ಪ್ರೇಮಿಗಳು ತಮ್ಮ ಪ್ರಿಯತಮೆಯನ್ಜ್ ಖುಷಿ ಪಡಿಸಲು ಗೊಂಬೆಗಳನ್ನೆ ಉಡುಗೊರೆಯಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ದಿನದಂದು ತಮ್ಮ ಪ್ರೀತಿ ಪಾತ್ರರಿಗೆ ದುಬಾರಿ ಬೆಲೆಯ ಗೊಂಬೆಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ವಿಶ್ವ ಗೊಂಬೆ ದಿನವನ್ನು ಆಚರಿಸಲಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: