World Brain Tumor Day 2024: ಮಾರಣಾಂತಿಕ ಮೆದುಳಿನ ಗೆಡ್ಡೆಯ ರೋಗ ಲಕ್ಷಣಗಳೇನು? ಚಿಕಿತ್ಸೆ ಹೇಗೆ ನೀಡಲಾಗುತ್ತದೆ?
ಜಗತ್ತಿನಾದಂತ್ಯ ಲಕ್ಷಾಂತರ ಜನರು ಈ ಮೆದುಳಿನ ಗೆಡ್ಡೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಜೀವವನ್ನು ಹಿಂಡುವ ಈ ರೋಗದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಜೂನ್ 8 ರಂದು ವಿಶ್ವ ಬ್ರೈನ್ ಟ್ಯೂಮರ್ ದಿನವನ್ನು ಆಚರಿಸಲಾಗುತ್ತದೆ. ಮೆದುಳಿನ ಗೆಡ್ಡೆಗೆ ಕಾರಣವೇನು? ಇದರ ರೋಗ ಲಕ್ಷಣಗಳೇನು? ಈ ದಿನದ ಇತಿಹಾಸ ಹಾಗೂ ಮಹತ್ವದ ಬಗೆಗಿನ ಮಾಹಿತಿ ಇಲ್ಲಿದೆ.
ಇತ್ತೀಚಿನ ದಿನಗಳಲ್ಲಿ ಬ್ರೈನ್‌ಟ್ರೈಮರ್ ಸಾಮಾನ್ಯ ಕಾಯಿಲೆಗಳಲ್ಲಿ ಒಂದಾಗಿದೆ. ಆದರೆ ಮೆದುಳು ಗೆಡ್ಡೆಯ ಬಗ್ಗೆ ಮಾಹಿತಿಯ ಕೊರತೆಯಿಂದ ಲಕ್ಷಣಗಳು ಕಾಣಿಸಿಕೊಂಡರೂ ನಿರ್ಲಕ್ಷ್ಯ ವಹಿಸುತ್ತಾರೆ. ಆದರೆ ಈ ಕಾಯಿಲೆ ಗಂಭೀರ ಹಂತಕ್ಕೆ ತಲುಪಿದ ನಂತರ ವೈದ್ಯರನ್ನು ಸಂಪರ್ಕಿಸುವವರೇ ಹೆಚ್ಚು. ಆದರೆ ಬ್ರೈನ್ ಟ್ಯೂಮರ್ ಕಾಯಿಲೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಪ್ರತಿ ವರ್ಷ ಜೂನ್ 8 ರಂದು ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವ ಬ್ರೈನ್ ಟ್ಯೂಮರ್ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಬ್ರೈನ್ ಟ್ಯೂಮರ್ ದಿನದ ಇತಿಹಾಸ ಹಾಗೂ ಮಹತ್ವ
ವಿಶ್ವ ಬ್ರೈನ್ ಟ್ಯೂಮರ್ ದಿನವನ್ನು ಮೊದಲ ಬಾರಿಗೆ ಜೂನ್ 8,2000ರಂದು ಜರ್ಮನಿಯ ಬ್ರೈನ್ ಟ್ಯೂಮರ್ ಅಸೋಸಿಯೇಷನ್ ಆಚರಿಸಿತು. ಬ್ರೈನ್ ಟ್ಯೂಮರ್ ರೋಗಿಗಳನ್ನು ಬೆಂಬಲಿಸಲು, ರೋಗದ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ವಿಶ್ವದಾದ್ಯಂತ ಮೆದುಳು ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಿ ಟ್ರೈನ್ ಟ್ಯೂಮರ್ ಬಗ್ಗೆ ಕೆಲವು ತಪ್ಪು ಕಲ್ಪನೆ ಗಳಿದ್ದು, ಅದನ್ನು ತೊಡೆದು ಹಾಕುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.
ಬ್ರೈನ್ ಟ್ಯೂಮರ್ ಎಂದರೇನು?
ಮೆದುಳಿನಲ್ಲಿ ಅಥವಾ ಅದರ ಸಮೀಪದಲ್ಲಿ ಜೀವಕೋಶಗಳ ಬೆಳವಣಿಗೆಯನ್ನು ಮೆದುಳಿನ ಗೆಡ್ಡೆ ಎನ್ನಲಾಗುತ್ತದೆ. ಮೆದುಳಿನ ಅಂಗಾಂಶವಲ್ಲದೆ ಹತ್ತಿರದ ನರಗಳು, ಪಿಟ್ಯುಟರಿ ಗ್ರಂಥಿ, ಪೀನಲ್ ಗ್ರಂಥಿ ಮತ್ತು ಮೆದುಳಿನ ಮೇಲ್ಮೈ ಮೇಲೆ ಕಾಣಿಸಿಕೊಳ್ಳುತ್ತವೆ.
ಇದನ್ನೂ ಓದಿ: ಅತ್ತೆ ಸೊಸೆ ಜಗಳ ಶುರುವಾಗುವುದೇ ಇಲ್ಲಿಂದ!
ಬ್ರೈನ್ ಟ್ಯೂಮರ್ ಲಕ್ಷಣಗಳು
* ಆಗಾಗ ತಲೆನೋವು ಬರುವುದು
* ವಿಪರೀತ ಸುಸ್ತು
* ಕಣ್ಣು ಮಂಜಾಗುವುದು, ದೃಷ್ಟಿ ಕಡಿಮೆಯಾಗುವುದು
* ತಲೆ ಸುತ್ತುವುದು
* ಬಂಜೆತನ
* ಕಿವಿ ಕೇಳಿಸದೇ ಇರುವುದು
* ಪಿಡ್ಸ್ ಬರುವುದು
* ವಾಂತಿ ಹಾಗೂ ವಾಕರಿಕೆಯಾಗುವುದು
ಮೆದುಳಿನ ಗೆಡ್ಡೆ ಪತ್ತೆ ಹಚ್ಚುವುದು ಹೇಗೆ?
ಬ್ರೈನ್ ಟ್ಯೂಮರನ್ನು ಸಿಟಿ ಅಥವಾ ಸಿಎಟಿ ಸ್ಕ್ಯಾನ್, ಎಂಆರ್ ಐ ಸ್ಕ್ಯಾನ್ ಮೂಲಕ ಪತ್ತೆ ಮಾಡಬಹುದಾಗಿದೆ. ಮ್ಯಾಗ್ನೆಟಿಕ್ ರೆಸೋನೆನ್ಸ್ ಸ್ಪೆಕ್ಟ್ರೋಸ್ಕೋಪಿ ಮೂಲಕ ಗೆಡ್ಡೆಗಳ ರಾಸಾಯನಿಕ ಪ್ರೊಫೈಲ್ ಅನ್ನು ಪರೀಕ್ಷಿಸಬಹುದು. ಪಾಸಿಟ್ರಾನ್ ಎಮಿಷನ್ ಟೊಮೊಗ್ರಫಿ ಕೂಡ ಗೆಡ್ಡೆಯನ್ನು ಪತ್ತೆಹಚ್ಚಬಹುದಾಗಿದೆ.
ಮೆದುಳಿನ ಗೆಡ್ಡೆಗೆ ಚಿಕಿತ್ಸೆ ಹೇಗೆ?
ಮೆದುಳಿನ ಗೆಡ್ಡೆಯ ತೀವ್ರತೆಯನ್ನು ಆಧಾರಿಸಿ ಚಿಕಿತ್ಸೆಯನ್ನು ವೈದ್ಯರು ನೀಡುತ್ತಾರೆ. ಈ ಮೆದುಳಿನ ಗೆಡ್ಡೆಗೆ ಶಸ್ತ್ರಚಿಕಿತ್ಸೆ, ವಿಕಿರಣ ಮತ್ತು ಕೀಮೋಥೆರಪಿಯಂತಹ ಚಿಕಿತ್ಸೆಗಳನ್ನು ನೀಡಲಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: