ಸೊಸೆಯಾಗಬೇಕಾದವಳನ್ನೇ ಅಪ್ಪ ಮದುವೆಯಾಗಿದ್ದು ಕಂಡು ಸನ್ಯಾಸಿಯಾಗಲು ನಿರ್ಧರಿಸಿದ ಮಗ

ತನ್ನ ಮಗನ ಹೆಂಡತಿಯಾಗಿ, ತಮ್ಮ ಮನೆಗೆ ಸೊಸೆಯಾಗಬೇಕಾದವಳನ್ನೇ ಮಹಾರಾಷ್ಟ್ರದ ವ್ಯಕ್ತಿಯೊಬ್ಬ ಮದುವೆಯಾಗಿರುವ ಘಟನೆ ನಡೆದಿದೆ. ಇದರಿಂದ ದುಃಖಿತನಾದ ಮಗ ಸನ್ಯಾಸಿಯಾಗಲು ನಿರ್ಧರಿಸಿದ್ದಾನೆ. ಮಹಾರಾಷ್ಟ್ರದ ನಾಶಿಕ್‌ನಲ್ಲಿ ಈ ಘಟನೆ ನಡೆದಿದೆ. ಮಗನ ಮದುವೆಗೆ ಕೆಲವೇ ದಿನಗಳ ಮೊದಲು ಆತ ಮದುವೆಯಾಗಬೇಕಿದ್ದ ಯುವತಿಯನ್ನು ಅಪ್ಪನೇ ಮದುವೆಯಾಗಿಬಿಟ್ಟಿದ್ದಾನೆ. ಇದರಿಂದ ಆಘಾತಗೊಂಡ ಮಗ ಇನ್ನೆಂದೂ ಮದುವೆಯಾಗದಿರಲು ನಿರ್ಧರಿಸಿದ್ದಾನೆ.

ಸೊಸೆಯಾಗಬೇಕಾದವಳನ್ನೇ ಅಪ್ಪ ಮದುವೆಯಾಗಿದ್ದು ಕಂಡು ಸನ್ಯಾಸಿಯಾಗಲು ನಿರ್ಧರಿಸಿದ ಮಗ
Maharashtra Son
Follow us
ಸುಷ್ಮಾ ಚಕ್ರೆ
|

Updated on: Jan 09, 2025 | 5:20 PM

ನಾಶಿಕ್: ತಾನು ಮದುವೆಯಾಗಬೇಕಿದ್ದ ಹುಡುಗಿಯನ್ನು ತನ್ನ ತಂದೆಯೇ ಮದುವೆಯಾದ ವಿಷಯ ತಿಳಿದು ಆಘಾತಕ್ಕೊಳಗಾದ ಮಗ ಸನ್ಯಾಸಿಯಾಗಲು ನಿರ್ಧರಿಸಿರುವ ಘಟನೆ ಮಹಾರಾಷ್ಟ್ರದ ನಾಶಿಕ್​ನಲ್ಲಿ ನಡೆದಿದೆ. ತನ್ನ ಮದುವೆಗೆ ಸ್ವಲ್ಪ ದಿನ ಮೊದಲು ತನ್ನ ಭಾವಿ ಪತ್ನಿಯನ್ನು ತನ್ನ ತಂದೆಯೇ ಮದುವೆಯಾದ ಬಳಿಕ ವ್ಯಕ್ತಿಯೊಬ್ಬ ಸನ್ಯಾಸಿಯಾಗಲು ನಿರ್ಧರಿಸಿದ್ದಾನೆ.

ವಿವರಗಳ ಪ್ರಕಾರ, ಆ ವ್ಯಕ್ತಿ ತನ್ನ ತಂದೆಯೊಂದಿಗೆ ವಾಸಿಸುತ್ತಿದ್ದನು. ಅವರು ಸ್ವಲ್ಪ ಸಮಯದ ಹಿಂದೆ ತನ್ನ ಮಗನಿಗೆ ಸೂಕ್ತವಾದ ಜೋಡಿಯನ್ನು ಹುಡುಕಲು ಪ್ರಾರಂಭಿಸಿದರು. ತನ್ನ ಮಗ ಮತ್ತು ಯುವತಿ ಒಪ್ಪಿದ ನಂತರ ಮದುವೆಯನ್ನು ನಿಗದಿ ಮಾಡಿದ್ದರು. ಕೆಲವೇ ದಿನಗಳಲ್ಲಿ ಮದುವೆ ಕೂಡ ನಡೆಯುವುದರಲ್ಲಿತ್ತು. ಆದರೆ, ಮಗನಿಗಾಗಿ ನೋಡಿದ್ದ ಯುವತಿಯ ಮೇಲೆ ಅಪ್ಪನಿಗೇ ಮನಸಾಗಿದ್ದರಿಂದ ಸೊಸೆಯಾಗಬೇಕಾಗಿದ್ದ ಯುವತಿಯನ್ನು ಆತನೇ ಮದುವೆ ಮಾಡಿಕೊಂಡು ಮನೆಗೆ ಕರೆದುಕೊಂಡು ಬಂದಿದ್ದಾನೆ.

ಇದನ್ನೂ ಓದಿ: Viral: ಸೀಟಿಗಾಗಿ ದೆಹಲಿ ಮೆಟ್ರೋದಲ್ಲಿ ಮಹಿಳೆಯರಿಬ್ಬರ ನಡುವೆ ನಡೆಯಿತು ಜಡೆ ಜಗಳ; ವಿಡಿಯೋ ವೈರಲ್‌

ಈ ಘಟನೆ ಮಹಾರಾಷ್ಟ್ರದ ನಾಶಿಕ್‌ನಲ್ಲಿ ನಡೆದಿದ್ದು, ಅಲ್ಲಿ ಆ ವ್ಯಕ್ತಿಯ ಮದುವೆಗೆ ಸಿದ್ಧತೆಗಳು ನಡೆಯುತ್ತಿದ್ದವು. ಆಗ ತನ್ನ ಸೊಸೆಯಾಗಬೇಕಾದವಳನ್ನು ಮಾವನೇ ಮದುವೆಯಾಗಿ ಬಂದಿದ್ದಾನೆ. ತನ್ನ ಹೆಂಡತಿಯಾಗಬೇಕಾಗಿದ್ದ ಯುವತಿಯನ್ನು ತನ್ನ ಅಮ್ಮನ ಸ್ಥಾನದಲ್ಲಿ ನೋಡಲು ಸಾಧ್ಯವಿಲ್ಲವೆಂದು ಆ ಯುವಕ ಸನ್ಯಾಸಿಯಾಗಲು ಮುಂದಾಗಿದ್ದಾನೆ.

ಇದಾದ ನಂತರ ಆ ಯುವಕ ತನ್ನ ಅಪ್ಪನ ಬಗ್ಗೆ ಜಿಗುಪ್ಸೆಗೊಂಡು ಮನೆಗೆ ಹೋಗದೆ ರಸ್ತೆಯ ಬದಿಯಲ್ಲೇ ಜೀವನ ಕಳೆಯುತ್ತಿದ್ದಾನೆ. ರಸ್ತೆಬದಿಯಲ್ಲಿ ಕುಳಿತುಕೊಂಡು, ದೇವಸ್ಥಾನದಲ್ಲಿ ಊಟ ಮಾಡಿ, ರಸ್ತೆಯ ಬದಿಯಲ್ಲೇ ಮಲಗುತ್ತಾನೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್