ಛತ್ತೀಸ್‌ಗಢದ ಮುಂಗೇಲಿಯಲ್ಲಿ ಸ್ಟೀಲ್ ಕಾರ್ಖಾನೆಯ ಚಿಮಣಿ ಕುಸಿತ; ಹಲವರು ನಾಪತ್ತೆ
ಛತ್ತೀಸ್‌ಗಢದ ಮುಂಗೇಲಿಯಲ್ಲಿ ಸ್ಟೀಲ್ ಕಾರ್ಖಾನೆಯ ಚಿಮಣಿ ಕುಸಿದಿದೆ. ಇದರಿಂದ ಹಲವಾರು ಕಾರ್ಮಿಕರು ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ. ಛತ್ತೀಸ್‌ಗಢದ ಮುಂಗೇಲಿಯ ಸರ್ಗಾಂವ್‌ನಲ್ಲಿ ಕಂಪನಿಯ ಚಿಮಣಿ ಕುಸಿದು ಸ್ಟೀಲ್ ತಯಾರಿಸುವ ಕಾರ್ಖಾನೆಯಲ್ಲಿ ಹಲವಾರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಇಬ್ಬರು ಕಾರ್ಮಿಕರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. 30ಕ್ಕೂ ಹೆಚ್ಚು ಕಾರ್ಮಿಕರು ಚಿಮಣಿಯಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಛತ್ತೀಸ್‌ಗಢ: ಛತ್ತೀಸ್‌ಗಢದ ಮುಂಗೇಲಿ ಜಿಲ್ಲೆಯಲ್ಲಿ ಇಂದು ಸ್ಟೀಲ್ ಸ್ಥಾವರದ ಚಿಮಣಿ ಕುಸಿದು ಇಬ್ಬರು ಕಾರ್ಮಿಕರು ಗಾಯಗೊಂಡಿದ್ದು, ಇನ್ನೂ ಅನೇಕರು ಅವಶೇಷಗಳಡಿ ಸಿಲುಕಿಕೊಂಡಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯಲ್ಲಿ ಸುಮಾರು ಅರ್ಧ ಡಜನ್ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮದ ವರದಿಗಳು ತಿಳಿಸಿವೆ. ಆದರೆ, ಸಾವು-ನೋವಿನ ಬಗ್ಗೆ ಅಧಿಕೃತ ದೃಢೀಕರಣಕ್ಕಾಗಿ ಕಾಯಲಾಗುತ್ತಿದೆ.
ಮುಂಗೇಲಿ ಜಿಲ್ಲೆಯ ಸರಗಾಂವ್ ಪ್ರದೇಶದಲ್ಲಿರುವ ಸ್ಥಾವರದಲ್ಲಿ ಈ ಘಟನೆ ನಡೆದಿದೆ ಎಂದು ಮುಂಗೇಲಿ ಪೊಲೀಸ್ ವರಿಷ್ಠಾಧಿಕಾರಿ ಭೋಜ್ರಾಮ್ ಪಟೇಲ್ ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಬೃಹತ್ ವಸ್ತುಗಳನ್ನು ಸಂಗ್ರಹಿಸಲು ಬಳಸುವ ಸ್ಟೀಲ್ ಪ್ಲಾಂಟ್ನಲ್ಲಿ ಈ ಅವಘಡ ನಡೆದಿದೆ. ಈ ಸ್ಥಳದಲ್ಲಿದ್ದ ಕೆಲವು ಕಾರ್ಮಿಕರು ಅದರ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
VIDEO | A chimney collapsed at a steel plant in Mungeli, Chhattisgarh earlier today. Several labourers feared trapped under it. More details awaited.
(Source: Third Party) pic.twitter.com/XI5j4SBEEx
— Press Trust of India (@PTI_News) January 9, 2025
ಇದನ್ನೂ ಓದಿ: ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 6 ಕಾರ್ಮಿಕರು ಸಾವು
ಪೊಲೀಸರಿಗೆ ಮಾಹಿತಿ ನೀಡಿದ ನಂತರ, ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಇಬ್ಬರು ಗಾಯಗೊಂಡ ಕಾರ್ಮಿಕರನ್ನು ರಕ್ಷಿಸಿ ಬಿಲಾಸ್ಪುರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಕುಸಿದ ಸ್ಟೀಲ್ ಪ್ಲಾಂಟ್ನಡಿ ಇನ್ನೂ ಅನೇಕ ಕಾರ್ಮಿಕರು ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದ್ದು, ಅವರನ್ನು ಹೊರತೆಗೆಯಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿ ಹೇಳಿದ್ದಾರೆ.
VIDEO | Rescue operation is underway after a chimney collapsed at a steel plant in Mungeli, Chhattisgarh. Visuals from the spot. pic.twitter.com/ofGADCQmc4
— Press Trust of India (@PTI_News) January 9, 2025
ಪ್ರಾಥಮಿಕ ಮಾಹಿತಿಯ ಪ್ರಕಾರ, ಬೃಹತ್ ವಸ್ತುಗಳನ್ನು ಸಂಗ್ರಹಿಸಲು ಬಳಸುವ ಕಬ್ಬಿಣದ ರಚನೆಯಾದ ಸಿಲೋ (ಚಿಮಣಿಯಂತಹ ರಚನೆ) ಕುಸಿದು ಬಿದ್ದಿದ್ದು, ಸ್ಥಳದಲ್ಲಿದ್ದ ಕೆಲವು ಕಾರ್ಮಿಕರು ಅದರ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ನಂತರ, ಪೊಲೀಸರು ಸ್ಥಳಕ್ಕೆ ತಲುಪಿದರು. ಬಳಿಕ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಎಂದು ಅಧಿಕಾರಿ ಹೇಳಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:40 pm, Thu, 9 January 25