Kitchen Hacks: ಆಲೂಗಡ್ಡೆ ಮೊಳಕೆಯೊಡೆಯದಂತೆ ನೋಡಿಕೊಳ್ಳಿ, ತಾಜಾವಾಗಿ ಶೇಖರಿಸಿಡುವುದು ಹೇಗೆ?

ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಇರುವ ತರಕಾರಿಗಳಲ್ಲಿ ಆಲೂಗಡ್ಡೆ ಕೂಡ ಒಂದು. ಆದರೆ ಅಸಮರ್ಪಕ ಶೇಖರಣೆಯಿಂದಾಗಿ ಆಲೂಗಡ್ಡೆ ಬೇಗನೇ ಕೊಳೆತು ಹೋಗುತ್ತದೆ, ಇಲ್ಲದಿದ್ದರೆ ಮೊಳಕೆಯೊಡೆಯಲು ಪ್ರಾರಂಭವಾಗುತ್ತದೆ. ಈ ಮೊಳಕೆಯೊಡೆದ ಆಲೂಗಡ್ಡೆಯನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಹೀಗಾಗಿ ಮಾರುಕಟ್ಟೆಯಿಂದ ತಂದ ಆಲೂಗಡ್ಡೆಯನ್ನು ತಾಜಾವಾಗಿ ಮೊಳಕೆಯೊಡೆಯದಂತೆ ಸಂಗ್ರಹಿಸಿಡುವುದು ಹೇಗೆ? ಹಾಗಾದ್ರೆ ಈ ಸಲಹೆ ತಪ್ಪದೇ ಪಾಲಿಸಿ.

Kitchen Hacks: ಆಲೂಗಡ್ಡೆ ಮೊಳಕೆಯೊಡೆಯದಂತೆ ನೋಡಿಕೊಳ್ಳಿ, ತಾಜಾವಾಗಿ ಶೇಖರಿಸಿಡುವುದು ಹೇಗೆ?
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 09, 2025 | 5:01 PM

ಮನೆಯಲ್ಲಿ ಬೇರೆ ಯಾವುದೇ ತರಕಾರಿಯಿಲ್ಲದೆ ಹೋದರೂ ಆಲೂಗಡ್ಡೆಯಿದ್ದು ಬಿಟ್ಟರೆ ರುಚಿಕರವಾದ ಸಾಂಬಾರ್ ಮಾಡಬಹುದು. ಈ ದೋಸೆಗೆ ಆಲೂಗಡ್ಡೆ ಪಲ್ಯ ಬೆಸ್ಟ್ ಕಾಂಬಿನೇಶನ್ ಎನ್ನಬಹುದು. ಆದರೆ ಆಲೂಗಡ್ಡೆ ಹಾಗೆಯೇ ಇಟ್ಟುಬಿಟ್ಟರೆ ಬೇಗನೇ ಕೊಳೆತು ಹೋಗುತ್ತದೆ. ತಂಪಾದ ವಾತಾವರಣಕ್ಕೆ ಮೊಳಕೆಯೊಡೆಯುತ್ತದೆ. ಆದರೆ ಈ ವಿಧಾನ ಅನುಸರಿಸಿದರೆ ಆಲೂಗಡ್ಡೆ ಹಾಳಾಗದೇ, ಮೊಳಕೆಯೊಡೆಯದಂತೆ ಅನೇಕ ತಿಂಗಳುಗಳ ಕಾಲ ಶೇಖರಿಸಿ ಇಡಬಹುದು.

  • ಆಲೂಗಡ್ಡೆಯಲ್ಲಿ ಮೊಳಕೆಯೊಡೆಯುವುದನ್ನು ತಪ್ಪಿಸಲು ಅತ್ಯುತ್ತಮ ಮಾರ್ಗವೆಂದರೆ ಅವುಗಳನ್ನು ದಾಸ್ತಾನು ಮಾಡುವುದನ್ನು ತಪ್ಪಿಸುವುದು. ಹೀಗಾಗಿ ಅವಶ್ಯಕತೆಗಳಿಗೆ ಅನುಗುಣವಾಗಿ ಖರೀದಿಸುವುದು ಉತ್ತಮ.
  • ಆಲೂಗಡ್ಡೆಗಳನ್ನು ತಂಪಾದ, ಗಾಢವಾದ ಮತ್ತು ಚೆನ್ನಾಗಿ ಗಾಳಿ ಇರುವ ಜಾಗದಲ್ಲಿ ಶೇಖರಿಸಿಡಬೇಕು. ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸುವುದನ್ನು ತಪ್ಪಿಸಿ. ತಂಪಾದ ವಾತಾವರಣವು ಪಿಷ್ಟವನ್ನು ಸಕ್ಕರೆಯಾಗಿ ಪರಿವರ್ತಿಸುತ್ತದೆ, ಇದರಿಂದ ರುಚಿಯನ್ನು ಬದಲಾಗುತ್ತದೆ.
  • ಹೆಚ್ಚುವರಿ ತೇವಾಂಶವು ಮೊಳಕೆಯೊಡೆಯಲು ಕಾರಣವಾಗುತ್ತದೆ. ಹೀಗಾಗಿ ಮುಚ್ಚಿದ ಪ್ಲಾಸ್ಟಿಕ್ ಚೀಲಗಳ ಬದಲಿಗೆ ಕಾಗದದ ಚೀಲ, ಗೋಣಿ ಚೀಲ ಹಾಗೂ ಬುಟ್ಟಿಯಂತಹ ಗಾಳಿಯಾಡುವ ಕಂಟೇನರ್‌ನಲ್ಲಿ ಆಲೂಗಡ್ಡೆ ಸಂಗ್ರಹಿಸಿಡುವುದು ಒಳ್ಳೆಯದು.
  • ಆಲೂಗಡ್ಡೆಯನ್ನು ಈರುಳ್ಳಿ ಅಥವಾ ಬಾಳೆಹಣ್ಣಿನೊಂದಿಗೆ ಶೇಖರಿಸಬೇಡಿ. ಇವುಗಳು ಎಥಿಲೀನ್ ಅನಿಲವನ್ನು ಬಿಡುಗಡೆ ಮಾಡುತ್ತವೆ, ಇದರಿಂದ ಆಲೂಗಡ್ಡೆ ವೇಗವಾಗಿ ಮೊಳಕೆಯೊಡೆಯುತ್ತವೆ.
  • ಕಪ್ಪಾದ ಕಲೆಯಿರುವ ಹಾಗೂ ಹಾಳಾದ ಆಲೂಗಡ್ಡೆಯನ್ನು ಖರೀದಿಸಬೇಡಿ. ಮಾರುಕಟ್ಟೆಯಿಂದ ತಂದ ಈ ತರಕಾರಿಯನ್ನು ತಂಪಾದ, ಶುಷ್ಕ ಮತ್ತು ಡಾರ್ಕ್ ಆದ ಸ್ಥಳದಲ್ಲಿ ಸಂಗ್ರಹಿಸಬೇಕು.
  • ಆಲೂಗಡ್ಡೆಗಳನ್ನು ಸೂರ್ಯನ ಬೆಳಕಿನಿಂದ ಸಾಧ್ಯವಾದಷ್ಟು ದೂರವಿಡುವುದು ಒಳ್ಳೆಯದು. ಹೆಚ್ಚಿನ ಬೆಳಕು ಹಸಿರೀಕರಣವನ್ನು ಪ್ರಚೋದಿಸಿ ಕ್ಲೋರೊಫಿಲ್ ಅನ್ನು ಉತ್ಪಾದಿಸುತ್ತದೆ. ಹಸಿರುಗೊಳಿಸುವಿಕೆಯು ಆಲೂಗಡ್ಡೆಯನ್ನು ಕಹಿಯಾಗಿಸುತ್ತದೆ, ಇದರಿಂದ ರುಚಿಯು ಬದಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್