Sign In

By signing in or creating an account, you agree with Associated Broadcasting Company's Terms & Conditions and Privacy Policy.

World Hindi Day 2025: ವಿಶ್ವ ಹಿಂದಿ ದಿನ ಆಚರಿಸುವುದು ಏಕೆ? ಏನಿದರ ವಿಶೇಷತೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಜನವರಿ 10 ವಿಶ್ವ ಹಿಂದಿ ದಿನ. ಸಾಹಿತ್ಯ ಕ್ಷೇತ್ರಕ್ಕೆ ಹಿಂದಿ ಭಾಷೆಯ ಕೊಡುಗೆ ಮತ್ತು ಅದರ ಪರಂಪರೆ ನೆನಪಿಸುವ ದಿನವಾಗಿದೆ. ಜಗತ್ತಿನಲ್ಲಿ ಜನರು ಹೆಚ್ಚಾಗಿ ಮಾತನಾಡುವ ಭಾಷೆಗಳ ಸಾಲಿನಲ್ಲಿ ಹಿಂದಿಯು ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದು, ಜನವರಿ 10 ರಂದು ಜಾಗತಿಕ ಮಟ್ಟದಲ್ಲಿ ವಿಶ್ವ ಹಿಂದಿ ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಆಚರಣೆ ಹಿಂದಿನ ಇತಿಹಾಸ, ಮಹತ್ವ ಸೇರಿದಂತೆ ಇನ್ನಿತ್ತರ ಮಾಹಿತಿ ಇಲ್ಲಿದೆ.

World Hindi Day 2025: ವಿಶ್ವ ಹಿಂದಿ ದಿನ ಆಚರಿಸುವುದು ಏಕೆ? ಏನಿದರ ವಿಶೇಷತೆ? ಇಲ್ಲಿದೆ ಸಂಪೂರ್ಣ ಮಾಹಿತಿ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 09, 2025 | 5:59 PM

ಹಿಂದಿ ಭಾಷೆ ದೇವನಾಗರಿ ಲಿಪಿಯಲ್ಲಿದ್ದು ಇದು ವೈಜ್ಞಾನಿಕ ಲಿಪಿಯಾಗಿದೆ. ವಿಶ್ವದ ಭಾಷೆಗಳ ಸಾಂಕೇತಿಕತೆಯ ಕ್ಷಮತೆಯೂ ಈ ದೇವನಾಗರಿಯಲ್ಲಿದೆ ಎನ್ನುವ ಅಭಿಪ್ರಾಯ ವಿದ್ವಾಂಸರದ್ದು. ಭಾರತ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಪ್ರಚಲಿತದಲ್ಲಿರುವ ಆಡು ಭಾಷೆಯೇ ಇದಾಗಿದೆ. ಭಾರತದಲ್ಲಿ ಉತ್ತರ ಪ್ರದೇಶ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಜಾರ್ಖಂಡ್, ಉತ್ತರಾಖಂಡ, ಛತ್ತೀಸ್‌ಗಢ, ಬಿಹಾರ, ಹರಿಯಾಣ ಮತ್ತು ರಾಜಸ್ಥಾನದಂತಹ ರಾಜ್ಯಗಳಲ್ಲಿ ಹಿಂದಿ ಮಾತನಾಡುವ ಜನರಿದ್ದಾರೆ. ಭಾರತೀಯ ಸಾಹಿತ್ಯ ಲೋಕಕ್ಕೆ ಹಿಂದಿ ಭಾಷೆಯ ಕೊಡುಗೆ ಅಪಾರವಾಗಿದ್ದು, ಈ ಭಾಷೆಯ ಪ್ರಾಮುಖ್ಯತೆಯನ್ನು ತಿಳಿಸಲು ಹಾಗೂ ಭಾಷೆಯ ಕೊಡುಗೆಯನ್ನು ಗೌರವಿಸುವ ಸಲುವಾಗಿ ವಿಶ್ವ ಹಿಂದಿ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ವಿಶ್ವ ಹಿಂದಿ ದಿನದ ಇತಿಹಾಸ

ಪ್ರತಿ ವರ್ಷ ಜನವರಿ 10 ರಂದು ವಿಶ್ವ ಹಿಂದಿ ದಿನ ವನ್ನು ಆಚರಿಸಿಕೊಂಡು ಬರಲಾಗುತ್ತಿದೆ. 1975 ಜನವರಿ 10 ರಂದು ನಾಗಪುರದಲ್ಲಿ ಮೊದಲ ‘ವಿಶ್ವ ಹಿಂದಿ ಸಮ್ಮೇಳನ’ವನ್ನು ಆಚರಿಸಲಾಯಿತು. 2005 ರಲ್ಲಿ ಜೂನ್ 8 ರಂದು ನಡೆದ ವಿಶ್ವ ಹಿಂದಿ ಸಮ್ಮೇಳನದ ಅನುಸರಣಾ ಸಮಿತಿಯ ಸಭೆಯಲ್ಲಿ ಪ್ರತಿ ವರ್ಷ ಜನವರಿ 10 ಅನ್ನು ವಿಶ್ವ ಹಿಂದಿ ದಿನವನ್ನಾಗಿ ಆಚರಿಸಲು ನಿರ್ಧಾರ ಮಾಡಲಾಯಿತು. 2006 ರ ಜನವರಿ 10 ರಂದು ಮೊದಲ ಬಾರಿಗೆ ವಿಶ್ವ ಹಿಂದಿ ದಿನವನ್ನು ಆಚರಿಸಲಾಯಿತು. ಅಂದಿನಿಂದ ಜಾಗತಿಕ ಮಟ್ಟದಲ್ಲಿ ವಿಶ್ವ ಹಿಂದಿ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ವಿಶ್ವ ಹಿಂದಿ ಭಾಷೆ ಮಹತ್ವ ಹಾಗೂ ಆಚರಣೆ

ಹಿಂದಿ ಭಾಷೆಯ ಶ್ರೀಮಂತ ಪರಂಪರೆ, ಸಾಹಿತ್ಯದ ಮೇಲೆ ಹಿಂದಿಯ ಪ್ರಭಾವ ಮತ್ತು ಡಿಜಿಟಲ್ ಜಗತ್ತಿನಲ್ಲಿ ಹಿಂದಿ ಭಾಷೆಯ ಪ್ರಾಮುಖ್ಯತೆಯನ್ನು ತಿಳಿಸುವ ಸಲುವಾಗಿ ಈ ದಿನವು ಮಹತ್ವದ್ದಾಗಿದೆ ಭಾರತದಲ್ಲಿ ಇಂಗ್ಲೀಷ್‌ ಜೊತೆಗೆ ಬಳಕೆ ಮಾಡುವ ಅಧಿಕೃತ ಭಾಷೆಗಳಲ್ಲಿ ಹಿಂದಿಯೂ ಒಂದಾಗಿದೆ. ವಿಶ್ವ ಹಿಂದಿ ದಿನದಂದು ಭಾಷಣ, ನಾಟಕ, ಸಂಗೀತ ಮತ್ತು ಮುಂತಾದ ಕಲೆಗಳ ಮುಖಾಂತರ ಹಿಂದಿ ಭಾಷೆಯ ಬಗ್ಗೆ ಅರಿವನ್ನು ಮೂಡಿಸಲಾಗುತ್ತದೆ. ಶಾಲಾ ಕಾಲೇಜು ವಿವಿಧ ಸಂಘ ಸಂಸ್ಥೆಗಳು ಸೆಮಿನಾರ್‌ಗಳು, ಕಾರ್ಯಾಗಾರಗಳು ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಇದನ್ನೂ ಓದಿ: ಆಲೂಗಡ್ಡೆ ಮೊಳಕೆಯೊಡೆಯದಂತೆ ನೋಡಿಕೊಳ್ಳಿ, ತಾಜಾವಾಗಿ ಶೇಖರಿಸಿಡುವುದು ಹೇಗೆ?

ಭಾರತದಲ್ಲಿ ಹಿಂದಿ ಮಾತನಾಡುವವರ ಸಂಖ್ಯೆ ಎಷ್ಟು?

2011 ರ ಭಾಷೆಗಳ ಜನಗಣತಿಯ ಪ್ರಕಾರ, ಭಾರತದಲ್ಲಿ ಹೆಚ್ಚು ಮಾತನಾಡುವ ಭಾಷೆಯಲ್ಲಿ ಹಿಂದಿ ಕೂಡ ಸೇರಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಜಾರ್ಖಂಡ್, ಉತ್ತರಾಖಂಡ, ಛತ್ತೀಸ್‌ಗಢ, ಬಿಹಾರ, ಹರಿಯಾಣ ಮತ್ತು ರಾಜಸ್ಥಾನದಲ್ಲಿ ಸಂವಹನಕ್ಕಾಗಿ ಹಿಂದಿಯನ್ನೇ ಬಳಸುತ್ತಿದ್ದಾರೆ. 2011ರ ಜನಗಣತಿಯ ಪ್ರಕಾರ ಹಿಂದಿಯನ್ನು ಮಾತೃಭಾಷೆಯಾಗಿ ಮಾತನಾಡುವವರ ಸಂಖ್ಯೆ 2001ರ ಜನಗಣತಿಗೆ ಹೋಲಿಸಿದರೆ ಹೆಚ್ಚಾಗಿದೆ. 2001 ರಲ್ಲಿ, 41.03% ಜನರು ಹಿಂದಿಯನ್ನು ಮಾತೃಭಾಷೆಯಾಗಿ ಮಾತನಾಡುತ್ತಿದ್ದರು. ಅದೇ ಹತ್ತು ವರ್ಷಗಳ ಬಳಿಕ ಅಂದರೆ 2011 ರಲ್ಲಿ ಶೇಕಡಾ 43.63 ರಷ್ಟು ಹಿಂದಿ ಮಾತನಾಡುವ ಜನರಿದ್ದಾರೆ. ಅದಲ್ಲದೇ ವಿಶ್ವದಲ್ಲಿ ಮ್ಯಾಂಡರಿನ್, ಸ್ಪ್ಯಾನಿಷ್ ಮತ್ತು ಇಂಗ್ಲಿಷ್ ನಂತರದಲ್ಲಿ ಹಿಂದಿ ಕೂಡ ವಿಶ್ವದಲ್ಲೇ ಹೆಚ್ಚು ಮಾತನಾಡುವ ನಾಲ್ಕನೇ ಭಾಷೆಯೆನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜಾಮ್‌ನಗರದ ಬಳಿ ವಾಯುಪಡೆಯ ಯುದ್ಧ ವಿಮಾನ ಪತನವಾದ ಕ್ಷಣ ಸಿಸಿಟಿವಿಯಲ್ಲಿ ಸೆರೆ
ಜಾಮ್‌ನಗರದ ಬಳಿ ವಾಯುಪಡೆಯ ಯುದ್ಧ ವಿಮಾನ ಪತನವಾದ ಕ್ಷಣ ಸಿಸಿಟಿವಿಯಲ್ಲಿ ಸೆರೆ
ಮಳೆಯಿಂದ ಕೆರೆಯಂತಾದ ಬೆಂಗಳೂರಿನ ಕಲ್ಯಾಣ ನಗರದ ಓಆರ್​ಆರ್​ ಸರ್ವಿಸ್ ರಸ್ತೆ
ಮಳೆಯಿಂದ ಕೆರೆಯಂತಾದ ಬೆಂಗಳೂರಿನ ಕಲ್ಯಾಣ ನಗರದ ಓಆರ್​ಆರ್​ ಸರ್ವಿಸ್ ರಸ್ತೆ
‘ದರ್ಶನ್ ಅಪ್ಪಟ ಬಂಗಾರ’: ಡಿ ಬಾಸ್ ವ್ಯಕ್ತಿತ್ವ ವಿವರಿಸಿದ ಗಣೇಶ್ ಕಾಸರಗೋಡು
‘ದರ್ಶನ್ ಅಪ್ಪಟ ಬಂಗಾರ’: ಡಿ ಬಾಸ್ ವ್ಯಕ್ತಿತ್ವ ವಿವರಿಸಿದ ಗಣೇಶ್ ಕಾಸರಗೋಡು
ಬೆಂಗಳೂರಿನ ಎಚ್​ಎಸ್​ಆರ್​ ಲೇಔಟ್​ಗೆ ತಂಪೆರೆದ ಮಳೆ
ಬೆಂಗಳೂರಿನ ಎಚ್​ಎಸ್​ಆರ್​ ಲೇಔಟ್​ಗೆ ತಂಪೆರೆದ ಮಳೆ
ನಗರದಲ್ಲಿರುವ ಮರಗಳ ಸರ್ವೇ ಮಾಡಿಸಿದರೆ ಅಪಾಯಗಳನ್ನು ತಪ್ಪಿಸಬಹುದು
ನಗರದಲ್ಲಿರುವ ಮರಗಳ ಸರ್ವೇ ಮಾಡಿಸಿದರೆ ಅಪಾಯಗಳನ್ನು ತಪ್ಪಿಸಬಹುದು
ಗ್ರಾಮಸ್ಥರ ಪ್ರಶ್ನೆಗಳಿಗೆ ಲಕ್ಷ್ಮಿಹೆಬ್ಬಾಳ್ಕರ್ ಅವರಲ್ಲಿ ಉತ್ತರವಿರಲಿಲ್ಲ
ಗ್ರಾಮಸ್ಥರ ಪ್ರಶ್ನೆಗಳಿಗೆ ಲಕ್ಷ್ಮಿಹೆಬ್ಬಾಳ್ಕರ್ ಅವರಲ್ಲಿ ಉತ್ತರವಿರಲಿಲ್ಲ
ಕೋಟೆನಾಡಲ್ಲಿ ನಾಳೆಯೂ ಅಗಲಿದೆಯಂತೆ ಮಳೆ
ಕೋಟೆನಾಡಲ್ಲಿ ನಾಳೆಯೂ ಅಗಲಿದೆಯಂತೆ ಮಳೆ
ಮಾರಿಗುಡಿ ದೇವಾಲಯಕ್ಕೆ ಭೇಟಿ ನೀಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್: ವಿಡಿಯೋ
ಮಾರಿಗುಡಿ ದೇವಾಲಯಕ್ಕೆ ಭೇಟಿ ನೀಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್: ವಿಡಿಯೋ
ರಿಷಬ್ ಶೆಟ್ಟಿ ಶಿವಾಜಿ ಪಾತ್ರ ಮಾಡುವುದು ಬೇಡ: ವಾಟಾಳ್ ನಾಗರಾಜ್
ರಿಷಬ್ ಶೆಟ್ಟಿ ಶಿವಾಜಿ ಪಾತ್ರ ಮಾಡುವುದು ಬೇಡ: ವಾಟಾಳ್ ನಾಗರಾಜ್
ಮಳೆಗಾಲದಲ್ಲಿ ಬೆಂಗಳೂರು ಹೇಗಿರಲಿದೆ ಅನ್ನೋದಿಕ್ಕೆ ಇದು ಟೀಸರ್ ಮಾತ್ರ!
ಮಳೆಗಾಲದಲ್ಲಿ ಬೆಂಗಳೂರು ಹೇಗಿರಲಿದೆ ಅನ್ನೋದಿಕ್ಕೆ ಇದು ಟೀಸರ್ ಮಾತ್ರ!