Personality Test : ನಿಮ್ಮ ಗಲ್ಲದ ಆಕಾರವು ಬಿಚ್ಚಿಡುತ್ತೆ ನಿಮ್ಮ ವ್ಯಕ್ತಿತ್ವ

ತುಟಿ, ಮೂಗು, ಕಣ್ಣು, ಹಣೆ, ಕಿವಿಯ ಆಕಾರದಿಂದ ವ್ಯಕ್ತಿತ್ವವನ್ನು ನಿರ್ಣಯಿಸಬಹುದು. ಆದರೆ ಗಲ್ಲದ ಆಕಾರದಿಂದಲೂ ವ್ಯಕ್ತಿಯ ಗುಣಸ್ವಭಾವ ಹಾಗೂ ವ್ಯಕ್ತಿತ್ವವನ್ನು ಸುಲಭವಾಗಿ ತಿಳಿಯಬಹುದಂತೆ. ಗಲ್ಲದ ಆಕಾರವು ಒಬ್ಬರಿಗಿಂತ ಒಬ್ಬರದ್ದು ಭಿನ್ನವಾಗಿರುತ್ತದೆ. ಹಾಗಾದ್ರೆ ಈ ಚಿತ್ರದಲ್ಲಿ ತೋರಿಸಿರುವಂತೆ ನಿಮ್ಮ ಗಲ್ಲವು ಯಾವ ಆಕಾರದಲ್ಲಿದೆ ಎನ್ನುವುದರ ಮೇಲೆ ನಿಮ್ಮ ವ್ಯಕ್ತಿತ್ವ ಹೇಗೆಂದು ತಿಳಿಯಿರಿ, ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

Personality Test : ನಿಮ್ಮ ಗಲ್ಲದ ಆಕಾರವು ಬಿಚ್ಚಿಡುತ್ತೆ ನಿಮ್ಮ ವ್ಯಕ್ತಿತ್ವ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 09, 2025 | 3:16 PM

ನಮ್ಮ ದೇಹದ ಅಂಗಗಳು ಹೇಗಿವೆ ಎಂಬುದರ ಮೇಲೆ ವ್ಯಕ್ತಿತ್ವ ನಿರ್ಧಾರವಾಗುತ್ತದೆ ಎನ್ನುವುದು ತಿಳಿದಿರಬಹುದು. ಆದರಂತೆ ನಾವು ನಡೆದಾಡುವ ರೀತಿ, ಕುಳಿತುಕೊಳ್ಳುವ ರೀತಿ, ಮಲಗುವ ರೀತಿ, ತುಟಿ, ಮೂಗು, ಕಣ್ಣು, ಹಣೆ, ಕಿವಿ ಹಾಗೂ ಗಲ್ಲದ ಆಕಾರದಿಂದಲೂ ವ್ಯಕ್ತಿತ್ವ ಸ್ವಭಾವ ತಿಳಿಯಬಹುದಂತೆ. ಗಲ್ಲವು ವೃತ್ತಾಕಾರ, ಚೌಕಕಾರ, ಉಬ್ಬಿರುವ ಆಕಾರ ಸೇರಿದಂತೆ ವಿವಿಧ ಆಕಾರವನ್ನು ಹೊಂದಿರುತ್ತದೆ. ಇದರ ಆಧಾರದ ಮೇಲೆ ನಿಮ್ಮ ರಹಸ್ಯಮಯ ವ್ಯಕ್ತಿತ್ವವನ್ನು ತಿಳಿಯಿರಿ.

  • ಗಲ್ಲದ ಆಕಾರವು ಚಿತ್ರ ಒಂದನ್ನು ಹೋಲುತ್ತಿದ್ದರೆ, ಚೌಕಕಾರವನ್ನು ಹೊಂದಿರುವ ವ್ಯಕ್ತಿಗಳು ಎಲ್ಲರ ಗಮನ ಸೆಳೆಯಲು ಇಷ್ಟ ಪಡುವುದಿಲ್ಲ. ಖಾಸಗಿತನ ಇಷ್ಟಪಡುತ್ತಾರೆ, ಹೀಗಾಗಿ ಶಾಂತಿಗೆ ಹೆಚ್ಚು ಒತ್ತು ನೀಡುವ ಮೂಲಕ ಅನಗತ್ಯವಾಗಿ ನಾಟಕವಾಡುವುದಿಲ್ಲ. ತಮ್ಮದೇ ತತ್ವ ಸಿದ್ಧಾಂತಗಳನ್ನು ಹೊಂದಿದ್ದು, ಅದನ್ನೇ ಹೆಚ್ಚು ಪಾಲಿಸುತ್ತಾರೆ. ತಮ್ಮ ಅಭಿಪ್ರಾಯದಿಂದ ಯಾರನ್ನು ಕೂಡ ಓಲೈಸಿಕೊಳ್ಳುವುದಿಲ್ಲ. ಈ ವ್ಯಕ್ತಿಗಳು ತಮ್ಮ ಮನಸ್ಸಿನಿಂದ ಮಾತನಾಡುತ್ತಾರೆ. ಏಕಾಂಗಿಯಾಗಿದ್ದರೂ ಕೂಡ ಪ್ರಾಮಾಣಿಕತೆ ಮತ್ತು ಶಿಸ್ತಿನಿಂದಲೇ ಇತರರಿಂದ ಗೌರವಕ್ಕೆ ಪಾತ್ರರಾಗುತ್ತಾರೆ.
  • ಗಲ್ಲದ ಆಕಾರವು ಚಿತ್ರ ಎರಡನ್ನು ಹೋಲುತ್ತಿದ್ದು, ವೃತ್ತಕಾರದಲ್ಲಿದ್ದರೆ ಈ ವ್ಯಕ್ತಿಗಳು ಸರಾಸರಿಗಿಂತ ಹೆಚ್ಚಿನ ಬುದ್ಧಿವಂತರು ಮತ್ತು ಅಚಲ ನಿರ್ಣಯ ಹೊಂದಿರುವುದನ್ನು ಸೂಚಿಸುತ್ತದೆ. ತೀವ್ರವಾಗಿ ಸ್ವತಂತ್ರವಾದ ಜೀವನವನ್ನು ಇಷ್ಟ ಪಡುತ್ತಾರೆ. ಸವಾಲುಗಳನ್ನು ಸ್ವೀಕರಿಸಿ ಒತ್ತಡವನ್ನು ಸುಲಭವಾಗಿ ನಿಭಾಯಿಸಿಕೊಂಡು ಹೋಗುತ್ತಾರೆ. ತೀಕ್ಷ್ಣವಾದ ಮತ್ತು ಗ್ರಹಿಸುವ ಸಾಮರ್ಥ್ಯವನ್ನು ಹೊಂದಿದ್ದು, ಇತರರಿಗೆ ಸಹಾಯ ಮಾಡುವುದರೊಂದಿಗೆ ವೈಯುಕ್ತಿಕ ಜೀವನದ ಯಶಸ್ಸನ್ನು ಸಾಧಿಸುತ್ತಾರೆ. ಇವರು ಸ್ವಂತಿಕೆಯಿಂದ ನೈಸರ್ಗಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಾರೆ.
  • ಗಲ್ಲದ ಆಕಾರವು ಚಿತ್ರ ಮೂರನ್ನು ಹೋಲುತ್ತಿದ್ದರೆ, ವ್ಯಕ್ತಿಯ ಗಲ್ಲವು ಮೊಟ್ಟೆಯಾಕಾರದಲ್ಲಿದೆ ಎಂದರ್ಥ. ಈ ಆಕಾರವನ್ನು ಹೊಂದಿರುವವರು ಹುಟ್ಟಿನಿಂದಲೇ ನಾಯಕತ್ವ ಗುಣ ಇವರಲ್ಲಿರುತ್ತದೆ. ಅತಿಯಾದ ಆತ್ಮವಿಶ್ವಾಸ ಹಾಗೂ ಜೀವನದ ಸವಾಲುಗಳನ್ನು ಸಹಜವಾಗಿ ಎದುರಿಸುವ ಗುಣ ಇವರಲ್ಲಿ ಹೆಚ್ಚಿರುತ್ತದೆ. ತನ್ನ ವರ್ಚಸ್ಸಿನಿಂದಲೇ ಗುರುತಿಸಿಕೊಳ್ಳುತ್ತಾರೆ. ಈ ವ್ಯಕ್ತಿಗಳು ಸ್ನೇಹಪರರಾಗಿದ್ದು, ಸುತ್ತಲಿನ ಜನರಿಗೆ ಬೇಗನೇ ಇಷ್ಟವಾಗುತ್ತಾರೆ. ಮಹತ್ವಾಕಾಂಕ್ಷಿಗಳು ಹಾಗೂ ಪರಹಿತಚಿಂತನೆಯವರಾಗಿದ್ದು ಸಹಾಯ ಮಾಡುವ ಗುಣವನ್ನು ಹೊಂದಿರುತ್ತಾರೆ. ಆಶಾವಾದಿಗಳಾಗಿದ್ದು, ಗುಂಪಿನಲ್ಲಿದ್ದಾಗ ಈ ವ್ಯಕ್ತಿಗಳಿಂದ ಇತರರು ಪ್ರಭಾವಕ್ಕೆ ಒಳಗಾಗುವವರೇ ಹೆಚ್ಚು.
  • ಗಲ್ಲದ ಆಕಾರವು ಚಿತ್ರ ನಾಲ್ಕರಲ್ಲಿ ಇರುವಂತೆ ಇದ್ದರೆ, ವೃತ್ತಾಕಾರದಿಂದ ಕೂಡಿದ ಅಗಲವಾದ ಗಲ್ಲವನ್ನು ಹೊಂದಿದ್ದಾರೆ ಎಂದರ್ಥ. ಈ ವ್ಯಕ್ತಿಗಳು ಭಾವನಾತ್ಮಕ ಜೀವಿಗಳು, ತಮ್ಮ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಲು ಹಿಂಜರಿಯುವುದಿಲ್ಲ. ಈ ವ್ಯಕ್ತಿಗಳು ಮುಕ್ತವಾಗಿ ಭಾವನೆ ವ್ಯಕ್ತಪಡಿಸುವುದು ಈ ವ್ಯಕ್ತಿಗಳನ್ನು ದುರ್ಬಲಗೊಳಿಸುತ್ತದೆ. ಆದರೆ ಇತರರಿಗೆ ಬಹಳ ಹತ್ತಿರವಾಗುವಂತೆ ಮಾಡುತ್ತದೆ. ಭಾವನಾತ್ಮಕ ಬುದ್ಧಿವಂತಿಕೆಯು ಇತರರೊಂದಿಗೆ ಆಳವಾದ ಸಂಪರ್ಕ ಸಾಧಿಸುವಂತೆ ಮಾಡುತ್ತದೆ.
  • ಚಿತ್ರ ಐದರಲ್ಲಿ ಇರುವಂತೆ ಗಲ್ಲವು ಉಬ್ಬಿರುವ ಆಕಾರ ಹೊಂದಿದ್ದರೆ ಈ ವ್ಯಕ್ತಿಗಳು ಎಲ್ಲಕ್ಕಿಂತ ಹೆಚ್ಚಾಗಿ ಸಂಬಂಧಗಳಿಗೆ ಆದ್ಯತೆ ನೀಡುತ್ತಾರೆ. ಕುಟುಂಬ ಮತ್ತು ಸ್ನೇಹಿತರು ಈ ವ್ಯಕ್ತಿಗಳ ಜಗತ್ತೇ ಆಗಿದ್ದು, ಆ ಸಂಪರ್ಕಗಳನ್ನು ಕಾಪಾಡಿಕೊಳ್ಳಲು ಶ್ರಮಿಸುತ್ತಾರೆ. ಸ್ನೇಹಪರರಾಗಿದ್ದು, ತಮ್ಮ ಸಕಾರಾತ್ಮಕತೆಯಿಂದ ಇತರರನ್ನು ಸ್ವಾಭಾವಿಕವಾಗಿ ಸೆಳೆಯುವ ಗುಣ ಇವರಲ್ಲಿರುತ್ತದೆ. ಅರ್ಥಪೂರ್ಣ ಸಂಬಂಧಗಳನ್ನು ಬೆಳೆಸುವಾಗ ಪ್ರಾಮಾಣಿಕತೆ ಮತ್ತು ಬದ್ಧತೆ ಹೆಚ್ಚು ಮಹತ್ವ ನೀಡುವ ವ್ಯಕ್ತಿಗಳಾಗಿರುತ್ತಾರೆ.
  • ಚಿತ್ರ ಆರರಲ್ಲಿ ತೋರಿಸುವಂತೆ ಗಲ್ಲವು ಚಪ್ಪಾಟೆಯಾಗಿದ್ದರೆ ಯಾವುದೇ ಕೆಲಸವನ್ನು ಕೈಗೆತ್ತಿಕೊಂಡಾಗ ಇದು ನನ್ನಿಂದ ಮಾಡಲು ಸಾಧ್ಯವೇ ಎನ್ನುವ ಸ್ವಯಂ-ಅನುಮಾನ ಹೊಂದಿರುತ್ತಾರೆ. ಇತರರನ್ನು ಆಕರ್ಷಿಸುವ ಕಾಂತೀಯ ಶಕ್ತಿಯು ಈ ವ್ಯಕ್ತಿಗಳಲ್ಲಿದ್ದು, ಸುತ್ತಲಿನ ಜನರು ಜನರು ನಿಮ್ಮ ಬಳಿ ಸಲಹೆಗಳನ್ನು ತೆಗೆದುಕೊಳ್ಳುತ್ತಾರೆ. ಈ ವ್ಯಕ್ತಿಗಳಲ್ಲಿ ಕೆಲವೊಮ್ಮೆ ಅಸುರಕ್ಷಿತ ಭಾವನೆಯಿಂದ ಒದ್ದಾಡುತ್ತಾರೆ. ಇವರು ವಿಶ್ವಾಸಾರ್ಹರು ಮತ್ತು ಯಾವಾಗಲೂ ಸಹಾಯ ಹಸ್ತವನ್ನು ನೀಡಲು ಸಿದ್ಧರಾಗಿರುತ್ತಾರೆ. ಆತ್ಮೀಯರೊಂದಿಗೆ ಹೆಚ್ಚು ಬೆರೆಯುವ ಮೂಲಕ ಉತ್ತಮ ಜೀವನವನ್ನು ನಡೆಸುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?
ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?
ವೇದಿಕೆ ಮೇಲೆ ಚರ್ಚೆಯಲ್ಲಿ ಮಗ್ನರಾದ ಕುಮಾರಸ್ವಾಮಿ ಮತ್ತು ವಿಜಯೇಂದ್ರ
ವೇದಿಕೆ ಮೇಲೆ ಚರ್ಚೆಯಲ್ಲಿ ಮಗ್ನರಾದ ಕುಮಾರಸ್ವಾಮಿ ಮತ್ತು ವಿಜಯೇಂದ್ರ